ಯುಗಾದಿ ಹಬ್ಬಕ್ಕೆ ಜೀ 5ನಲ್ಲಿ "ಲ್ಯಾಂಡ್ ಲಾರ್ಡ್" ಬಿಡುಗಡೆ

ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ‌ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ.
Landlord poster
ಲ್ಯಾಂಡ್ ಲಾರ್ಡ್ ಪೋಸ್ಟರ್
Updated on

ಜಡೇಶ್ ಕೆ ಹಂಪಿ ನಿರ್ದೇಶನದ ದುನಿಯಾ ವಿಜಯ್ ಅಭಿನಯದ ಸೂಪರ್ ಹಿಟ್ ಚಿತ್ರ ಲ್ಯಾಂಡ್ ಲಾರ್ಡ್ ಯುಗಾದಿ ಹಬ್ಬದಂದು ಜೀ5ನಲ್ಲಿ ಬಿಡುಗಡೆ ಆಗುತ್ತಿದೆ. 1980ರಲ್ಲಿ ಗ್ರಾಮೀಣ ಕರ್ನಾಟಕದ ಕಥಾ ಹಂದರ ಹೊಂದಿರುವ ಸಿನಿಮಾ ಸಾರಥಿ ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿದೆ.

ಈ ಚಿತ್ರದಲ್ಲಿ ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ‌ ಶೆಟ್ಟಿ, ರಿಥನ್ಯಾ ವಿಜಯ್, ಉಮಾಶ್ರೀ, ಭಾವನಾ ರಾವ್, ಸಂಪತ್ ಮೈತ್ರೇಯ ಮುಂತಾದವರು ನಟಿಸಿದ್ದಾರೆ. ಇಂತಹ ಒಂದು ಬಹುತಾರಾಗಣವನ್ನು ಹೊಂದಿರುವ ಚಿತ್ರ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಜೀ5ನಲ್ಲಿ ಬಿಡುಗಡೆ ಆಗುತ್ತಿದೆ.

ಚಿತ್ರದಲ್ಲಿ ತನ್ನ ಪಾತ್ರದ ಕುರಿತು ಮಾತನಾಡಿದ ನಟ ದುನಿಯಾ ವಿಜಯ್, "ನಾನು ರಾಚಯ್ಯ ಎಂಬ ಪಾತ್ರವನ್ನು ವಹಿಸಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ‌. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಈ ಪಾತ್ರ ನನಗೆ ಒಂದು ಸವಾಲಾಗಿತ್ತು. ಇದೀಗ ಈ ಚಿತ್ರವು ಜೀ5ನಲ್ಲಿ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ ಎಂದರು.

ಚಿತ್ರದ ಬಗ್ಗೆ ಹಾಗೂ ತನ್ನ ಪಾತ್ರದ ಕುರಿತು ಮಾತನಾಡಿದ ನಟಿ ರಚಿತಾ ರಾಮ್, "ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳು ಆಳವಾಗಿವೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ "ಲ್ಯಾಂಡ್ ಲಾರ್ಡ್". ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ ಎಂದು ತಿಳಿಸಿದರು.

Landlord poster
ಸಿಎಂ ಭೇಟಿ ಮಾಡಿದ ದುನಿಯಾ ವಿಜಯ್; ‘ಲ್ಯಾಂಡ್​ಲಾರ್ಡ್’ ನೋಡೆ ನೋಡ್ತೀನಿ ಎಂದ ಸಿದ್ದರಾಮಯ್ಯ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com