ಬಿಗ್ ಬಾಸ್ ಸೀಸನ್ 13: ಅನಾರೋಗ್ಯದಿಂದ ಸಂಗೀತಾ ಭಟ್ ಔಟ್; ನಟಿಗೆ ಸಿಕ್ಕ ಪ್ರೈಸ್‌ ಮನಿ ಎಷ್ಟು?

ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ಸಂಗೀತಾ ಅವರಿಗೆ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮತ್ತೆ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಆನಂತರ ಮತ್ತೆ ಅವರಿಗೆ ಸಮಸ್ಯೆ ಆಗಿತ್ತು.
Sangeetha bhat
ಸಂಗೀತ್ ಭಟ್
Updated on: 

ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌ 13ರ ಮನೆಯಿಂದ ಸಂಗೀತಾ ಭಟ್‌ ಹೊರಬಂದಿದ್ದಾರೆ. ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಗಗನ್‌, ಧನುಷ್‌, ಗಾನವಿ, ಮಂಜ, ಸೋನಿಕಾ, ತಾಂಡವ್‌ ರಾಮ್‌ ಹಾಗೂ ಯಶಸ್‌ ನಾಮಿನೇಟ್‌ ಆಗಿದ್ದರು. ಈಗಾಗಲೇ ಅನುಚಿತ ವರ್ತನೆ ತೋರಿದ ಕಾರಣದಿಂದಾಗಿ ಬಿಗ್‌ಬಾಸ್‌ ಮಂಜ ಅವರನ್ನು ಮನೆಯಿಂದ ಹೊರಕಳಿಸಿದ್ದರು.

ಡಾಕ್ಟರ್‌ ಅವರ ಸಲಹೆ ಮೇರೆಗೆ ಅನಾರೋಗ್ಯದ ಕಾರಣದಿಂದ ಸಂಗೀತಾ ಭಟ್ ಅವರು ಶೋ ಬಿಡುವ ಅನಿವಾರ್ಯ ಪರಿಸ್ಥಿತಿ ಬಂದಿದೆ. ಭಾನುವಾರದ ಎಪಿಸೋಡ್‌ನ ಕೊನೆಯಲ್ಲಿ ಕಿಚ್ಚ ಸುದೀಪ್‌, ಸಾಮಾನ್ಯವಾಗಿ ಮನೆಯಲ್ಲಿ ನಾಮಿನೇಟ್‌ ಆದವರ ಪೈಕಿ ಕಡಿಮೆ ವೋಟ್‌ ಪಡೆದವರು ಔಟ್‌ ಆಗುತ್ತಾರೆ. ಆದರೆ ಈ ಬಾರಿ ಬೇರೆ ಕಾರಣಗಳಿಂದ ಬಿಗ್‌ಬಾಸ್‌ ಒಬ್ಬರನ್ನು ಮನೆಯಿಂದ ಹೊರಕಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆರೋಗ್ಯದ ಸಮಸ್ಯೆಯಿರುವ ಕಾರಣ ಸಂಗೀತಾ ಭಟ್‌ ಅವರು ಮನೆಯಿಂದ ಹೊರಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಾರದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ಸಂಗೀತಾ ಅವರಿಗೆ ಅನಾರೋಗ್ಯದ ಸಮಸ್ಯೆ ಎದುರಾಗಿತ್ತು. ಆಗ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾದ ಬಳಿಕ ಮತ್ತೆ ಬಿಗ್‌ಬಾಸ್‌ ಮನೆಗೆ ಬಂದಿದ್ದರು. ಆನಂತರ ಮತ್ತೆ ಅವರಿಗೆ ಸಮಸ್ಯೆ ಆಗಿತ್ತು.

ಹೀಗಾಗಿ ವೈದ್ಯರು ತಿಳಿಸಿರುವಂತೆ ಆರೋಗ್ಯದ ದೃಷ್ಟಿಯಿಂದ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬರುವುದು ಒಳ್ಳೆಯದು. ಹೀಗಾಗಿ ಈ ವಾರ ಸಂಗೀತಾ ಭಟ್‌ ಮನೆಯಿಂದ ಹೊರಬಂದಿದ್ದಾರೆ. ಇದೆಲ್ಲದರ ನಡುವೆ ಸಂಗೀತಾ ಭಟ್‌ ಅವರಿಗೆ ವಿವಿಧ ಸ್ಪಾನರ್ಸ್‌ಕಡೆಯಿಂದ 3 ಲಕ್ಷದ 50 ಸಾವಿರ ರೂಪಾಯಿ ಪ್ರೈಸ್‌ ಮನಿ ಬಂದಿದೆ.

Sangeetha bhat
Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com