'ಈಗಲೂ ಬಿಡಲ್ಲ, ಶೀಘ್ರದಲ್ಲೇ ಮುಖವಾಡ ಕಳಚುತ್ತೇನೆ'; ತಾರಕಕ್ಕೇರಿದ 'ಪೋಸ್ಟ್' ವಾರ್, ಪೊಲೀಸ್ ಕೇಸ್ ಕುರಿತು ನಟ ಧನ್ವೀರ್‌ ಪರೋಕ್ಷ ವಾರ್ನಿಂಗ್‌?

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿತ್ತು.
Actor Dhanveer Gowda’s Indirect Warning Amid Police Complaint
ನಟ ಧನ್ವೀರ್ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ
Updated on: 

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ನಟ ಧನ್ವೀರ್ ಗೌಡ ನಡುವಿನ ಶೀಥಲ ಸಮರ ಮತ್ತೊಂದು ಹಂತಕ್ಕೆ ಹೋಗಿದ್ದು, ತಮ್ಮ ವಿರುದ್ಧ ಪೊಲೀಸ್ ಕೇಸ್ ದಾಖಲಾಗುತ್ತಲೇ ನಟ ಧನ್ವೀರ್ ಕೂಡ 'ಮುಖವಾಡ' ಕಳಚುವ ಎಚ್ಚರಿಕೆ ನೀಡಿದ್ದಾರೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿತ್ತು.

ಈ ಬಗ್ಗೆ ಖಾಸಗಿ ಮಾಧ್ಯಮದ ಜೊತೆಗೆ ನಟ ಧನ್ವೀರ್‌ (Dhanveer Gowda) ಸುದೀರ್ಘವಾಗಿ ಮಾತನಾಡಿದ್ದು, ಶೀಘ್ರದಲ್ಲೇ ಎಲ್ಲರ ಮುಖವಾಡ ಕಳಚುವುದಾಗಿ ಗರಂ ಆಗಿ ಹೇಳಿದ್ದಾರೆ.

'ಈಗ ದೂರು ಕೊಟ್ಟಿದ್ದಾರಲ್ಲ.. ಅವರದ್ದೇ ಬಂಡವಾಳಗಳು ಆಚೆ ಬರುತ್ತವೆ. ಮುಖವಾಡ ಬೀಳಿಸೋ ತನಕ ಬಿಡಲ್ಲ.‌ ನ್ಯಾಯ, ನೀತಿ ಧರ್ಮದಲ್ಲಿ ನಡೆಯುತ್ತಿರುವಾಗ ಹೆದರುವ ಮಾತೇ ಇಲ್ಲ. ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಮುಖವಾಡ ಕಳಚಿಡುತ್ತೇನೆ' ಎಂದು ಹೇಳಿದರು.

Actor Dhanveer Gowda’s Indirect Warning Amid Police Complaint
ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ 'ಶಕುನಿ' ಅಂತ ಪೋಸ್ಟ್ ಹಾಕಿದ ನಟ ಧನ್ವೀರ್ ಗೌಡ; ಯಾರಿಗೆ ಟಾಂಗ್?

ಧನ್ವೀರ್ ಹೇಳಿದ್ದೇನು?

'ದೂರು ಕೊಡಲಿ, ಇದಾದ್ಮೇಲೂ ನಾನು ಅವನಿಗೆ ನಿಂದನೆ ಮಾಡೇ ಮಾಡ್ತೀನಿ. ಆದ್ರೆ ಒಬ್ಬ ವುಕ್ತಿ ಸುಮ್ಮನೆ ಬೈಯ್ಯಲ್ಲ. ಏನಿಕೆ ಬೈಯ್ದೆ ಅನ್ನೋದು ಬೇಕಲ್ವಾ? ಆ ಕಾರಣ ಏನು ಅನ್ನೋದನ್ನ ಕೇಳಿ. ಯಾರ ಮ್ಯಾನೇಜರ್‌ ಅಂತಿದ್ದಾರಲ್ಲಾ ಈಗ, ಅವರ ಬಂಡವಾಳ ಆಚೆ ಬರುತ್ತೆ' ಎಂದರು.

ಮುಖವಾಡ ಕಳಚಿ ಬೀಳುವ ಸಮಯ ಬಂದಿದೆ

ಅಲ್ಲದೆ ಮ್ಯಾನೇಜರ್‌ಗೆ ಯಾವ ಕಾರಣಕ್ಕೆ ಬೈಯ್ದೆ, ಅದಕ್ಕೆ ಬಲವಾದ ಕಾರಣ ಇರುತ್ತೆ ಅಲ್ವಾ? ಅದೇನು ಅಂತ ಗೊತ್ತಾದ್ರೆ, ಯಾರ‍್ಯಾರ ಮುಖವಾಡ ಹೇಗೆ ಅನ್ನೋ ಬಂಡವಾಳ ಬಯಲಾಗುತ್ತೆ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತೆ, ಯಾವುದು ಏನು ಅನ್ನೋ ಸತ್ಯಾಂಶ ಹೊರಬರುವ, ಮುಖವಾಡ ಕಳಚಿ ಬೀಳುವ ಸಮಯ ಬಂದಿದೆ. ಕಳಚಿ ಬೀಳುತ್ತೆ, ಮುಖವಾಡ ಕಳಚಲು ನಾವು ಶತಸಿದ್ಧ ಎಂದು ಧನ್ವೀರ್ ಖಾರವಾಗಿ ಹೇಳಿದರು.

ನಾವು ಅಂತರ ಕಾಯ್ದುಕೊಂಡಿಲ್ಲ, ಕಾಯ್ದಿರಿಸಿದ್ರು. ಏಕೆಂದ್ರೆ ನಾವು ದರ್ಶನ್‌ ಅಣ್ಣನ ಪರವಾಗಿದ್ದೆವು. ದರ್ಶನ್‌ ಅಣ್ಣನ ಪರವಾಗಿದ್ದಾಗ ಆಗುತ್ತಿದ್ದ ಕೆಲಸಗಳು ಆಗಬಾರದು ಅನ್ನೋದು ಕೆಲವರಿಗೆ ಇತ್ತು. ಅವರು ಮುಂದೆ ಒಂದು, ಹಿಂದೆ ಒಂದು ಮುಖವಾಡ ಹಾಕ್ಕೊಂಡು ಬದುಕಬೇಕಿತ್ತು. ಈಗ ಮುಖವಾಡ ತೆಗೆಯುವ ಸಮಯ ಬಂದಿದೆ, ಇನ್ಮೇಲೆ ನಾವು ಶುರು ಮಾಡ್ತೀವಿ ಎಂದು ಧನ್ವೀರ್ ಎಚ್ಚರಿಕೆ ಕೊಟ್ಟಿದ್ದಾರೆ.

ಜೈಲಲ್ಲಿ ಧನ್ವೀರ್-ವಿಜಯಲಕ್ಷ್ಮಿಗೆ ದರ್ಶನ್ ಸಮಾಧಾನ?

ಇದೇ ವೇಳೆ ಜೈಲಲ್ಲಿ ನಿಮ್ಮನ್ನ ಮತ್ತು ವಿಜಯಲಕ್ಷ್ಮಿ ಅವರನ್ನ ದರ್ಶನ್‌ ಸಮಾಧಾನ ಪಡಿಸಿದ್ರಾ? ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧನ್ವೀರ್, ಆ ಥರಹ ಏನಿಲ್ಲ, ಸಮಾಧಾನ ಏನೂ ಮಾಡಿಲ್ಲ, ನಾನು ದರ್ಶನ್‌ ಅಣ್ಣನನ್ನ ಮಾತಾಡಿಸಿಕೊಂಡು ಬಂದಿದ್ದೆ ಅಷ್ಟೇ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com