ನಟ ದರ್ಶನ್

'ನಿಮಗೆ ದ್ರೋಹ ಬಗೆಯುವುದು ನಿಮ್ಮ ಶತ್ರುಗಳಲ್ಲ, ಬದಲಾಗಿ ಒಂದೇ ತಟ್ಟೆಯಲ್ಲಿ ಉಂಡವರು': ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಭಾಗವಾಗಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬೆನ್ನು ನೋವು ಹೇಗಿದೆ? ಇನ್ನು ಎಷ್ಟು ದಿನ ಇರಬೇಕು? ನರಕ ಆಗ್ತಿದೆ..: ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡ ಸುಬ್ಬಾ-ಸುಬ್ಬಿ!
ಪವಿತ್ರಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ದರ್ಶನ್, ʻಇಷ್ಟು ದಿನ ಇದ್ದೀಯಾ, ಇನ್ನೂ 4 ರಿಂದ 5 ತಿಂಗಳು ಇರು. ಮೆಂಟಲಿ ಸ್ಟ್ರಾಂಗ್ ಆಗಿರು, ಹೃದಯ ಗಟ್ಟಿ ಮಾಡ್ಕೊʼ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ ತಾರಕಕ್ಕೆ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ
ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ಧನ್ವೀರ್‌ಗೆ ಬ್ರೇಕ್ ಹಾಕಲು ಡಿ-ಬಾಸ್ ಮುಂದು: ಕುಟುಂಬದ ತೇಜೋವಧೆ ವಿರುದ್ಧ ಕೋರ್ಟ್ ಮೆಟ್ಟಿಲೇರಲು ದರ್ಶನ್ ಪ್ಲಾನ್!
ನಟ ದರ್ಶನ್ ತೂಗುದೀಪ ಅವರು ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಮ್ಮ ಆಪ್ತ ಹಾಗೂ ನಟ ಧನ್ವೀರ್ ಗೌಡ ವಿರುದ್ಧ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ! ಆ ಕುರಿತ ವರದಿ ಇಲ್ಲಿದೆ:

ನಟ ದರ್ಶನ್‌ಗೆ ಮತ್ತೆ ತೀವ್ರ ಬೆನ್ನು ನೋವು: ಫಿಸಿಯೋಥೆರಪಿಗೆ ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ!
'ಫಿಸಿಯೋಥೆರಪಿ ಚಿಕಿತ್ಸೆಗೆ ಅವಕಾಶ ಕಲ್ಪಿಸುವಂತೆ ಒಂದು ತಿಂಗಳ ಹಿಂದೆಯೇ ಜೈಲು ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದ್ದೆ. ಆದಾಗ್ಯೂ ಜೈಲು ಅಧಿಕಾರಿಗಳು ಯಾವುದೇ ವೈದ್ಯಕೀಯ ಸೌಲಭ್ಯ ಕಲ್ಪಿಸಿಲ್ಲ' ಎಂದಿದ್ದಾರೆ.

'ಅಭಿಮಾನ ಇರಲಿ, ಹೆಣ್ಣಿನ ಗೌರವಕ್ಕೆ ಧಕ್ಕೆ ಬೇಡ'; ದರ್ಶನ್-ವಿಜಯಲಕ್ಷ್ಮಿ ವಿವಾದದ ನಡುವೆ ಅಶ್ವಿನಿ ಗೌಡ ಪೋಸ್ಟ್!
ಸಂಬಂಧಗಳಲ್ಲಿ ಮನಸ್ತಾಪ ಉಂಟಾದಾಗ, ಇಷ್ಟು ದಿನ ಹಂಚಿಕೊಂಡ ಪ್ರೀತಿ, ವಿಶ್ವಾಸ ಹಾಗೂ ಕಷ್ಟ-ಸುಖಗಳನ್ನು ಮರೆತು, ಅದೇ ಸಂಬಂಧಗಳನ್ನು ನೋಯಿಸುವ ಅಸ್ತ್ರಗಳನ್ನಾಗಿ ಬಳಸುವುದು ನೋವಿನ ಸಂಗತಿ. ಒಬ್ಬ ಹೆಣ್ಣಿನ ಮೌನವನ್ನು ದೌರ್ಬಲ್ಯವೆಂದು ಭಾವಿಸಬಾರದು.

ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ: ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ವಾರ್ನಿಂಗ್!
ಹೌದು, ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಇಂದು ವಿಜಯಲಕ್ಷ್ಮಿ ಅವರು ನಟ ಝೈದ್ ಖಾನ್ ಅವರೊಂದಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, ದರ್ಶನ್ ಭೇಟಿ ಮಾಡಿದ್ದಾರೆ.

ನನ್ನ ವಿರುದ್ಧ ಎಷ್ಟು ಬೇಕಾದರೂ ನೆಗೆಟಿವ್ PR ಮಾಡಿ, ಆದ್ರೆ ನನ್ನ ಹೃದಯದ ಬಾಗಿಲಲ್ಲಿ...: ದರ್ಶನ್ ಬಗ್ಗೆ ಧನ್ವೀರ್ ಪೋಸ್ಟ್ ವೈರಲ್!
ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ. ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ...

ದರ್ಶನ್ ಜೈಲಿಂದ ಹೊರಬರೋದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಧನ್ವೀರ್ ಆಡಿಯೋ ಬೆನ್ನಲ್ಲೇ ಸ್ನೇಹಿತನ ಆಡಿಯೋ ವೈರಲ್!
ಇನ್ನು ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವಿನ ಒಳ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರೂ ದೂರು, ಪ್ರತಿ ದೂರು ದಾಖಲಿಸಿದ್ದಾರೆ.

