ಅಂಕಣಗಳು

ಬೈಟು ಕಾಫಿ ತುಂಬಾ ನೊರೆ!

Published On :

10.8.13ರ ಬೆತ್ತಲೆ -ಪ್ರಪಂಚ ಅಂಕಣದ ಅಡಿಯಲ್ಲಿ ಮೂಡಿ ಬಂದ ಲೇಖನವು ನಮ್ಮ ದೇಶದ ನಾಯಕರ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದೆ. ಇವರು ಮನೆಗೆ ಮಾರಿ, ಪರರಿಗೆ ಉಪಕಾರಿ ಅನ್ನುವ ಹಾಗೆ ವರ್ತಿಸಿ ಮುಸ್ಲಿಂ ಬಾಂಧವರ ಓಟುಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಸೋಗು. ಪರನಾಡಿನಲ್ಲಿ ವೈದ್ಯನೊಬ್ಬನನ್ನು ಬಂಧಿಸಿದಾಗ ಆತನ ಪತ್ನಿಯ ರೋದನವನ್ನು ನೋಡಲಾಗದೆ ಇಡೀ ರಾತ್ರಿ ನಿದ್ದೆ ಮಾಡಲಿಲ್ಲವಂತೆ ನಮ್ಮ ಪ್ರಧಾನಿ. ಆದರೆ ಹಗಲಿರುಳು ಎನ್ನದೆ, ಊಟ ನಿದ್ದೆಯಿಲ್ಲದೆ ನಮ್ಮ ದೇಶವನ್ನು ರೂಪಿಸುವ ಯೋಧರ ರುಂಡವನ್ನು ಪಾಕಿಗಳು ಕಡಿದಾಗ, ಅಥವಾ ಕೊಚ್ಚಿ ಹಾಕುವಾಗ ನಮ್ಮ ಪ್ರಧಾನಿಗೆ ಕಿಂಚಿತ್ತೂ ವೇದನೆ, ಕನಿಕರ ಉಂಟಾಗಲಿಲ್ಲವೆಂದರೆ ಇಂಥ ಪ್ರಧಾನಿಯನ್ನು ಪಡೆದ ನಾವು ಮೂರ್ಖರೇ ಸರಿ.
-ಎನ್.ಆರ್. ತಮ್ಮಯ್ಯಶೆಟ್ಟಿ, ಹೊಯ್ಸಳನಗರ, ಅರಸೀಕೆರೆ
---
ನನ್ನ ಮೆಚ್ಚಿನ ಕನ್ನಡಪ್ರಭದಲ್ಲಿ ಪ್ರತಿ ಸೋಮವಾರ ಒಳಪುಟದಲ್ಲಿ ಪ್ರಕಟವಾಗುವ ಒಳಸುರುಳಿ ಪಿ. ತ್ಯಾಗರಾಜ್ ಬರೆಯುವ ಲೇಖನ ಅರ್ಥಪೂರ್ಣವಾಗಿರುತ್ತೆ. ದಿನಾಂಕ 19 ಆಗಸ್ಟ್ ಸಂಚಿಕೆಯ ಒಳಸುರುಳಿ 'ಚುನಾವಣಾ ಪ್ರಚಾರ ಶೈಲಿಯ ದುರ್ಗತಿ ನೋಡಿ' ಈ ಲೇಖನ ಓದಿ ನಮ್ಮ ರಾಜ್ಯದ ಹಿರಿಯ ರಾಜಕಾರಣಿಗಳ ಬಾಯಲ್ಲಿ ಈ ರೀತಿಯ ಮಾತುಗಳೆ! ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳ ಮರು ಚುನಾವಣೆಯಲ್ಲಿ ರಾಜಕೀಯ ಮುಖಂಡರ ಮಾತಿನ ಸಮರ ನಿಜಕ್ಕೂ ನಾಚಿಕೆಗೇಡಿನ ಸಂಗತಿ!
-ರವಿಕುಮಾರ್ ಜಿ.ಬಿ., ನಂ.82, ಶ್ರೀವಿನಾಯಕ ಕಾಂಡಿಮೆಂಟ್ಸ್
1ನೇ ಮುಖ್ಯರಸ್ತೆ, ಶೇಷಾದ್ರಿಪುರಂ, ಬೆಂಗಳೂರು, ಮೊ. 944 9669897
---
ಏನ್ ಭಟ್ರೇ, ಏನ್ ಭಡ್ತಿಯವ್ರೇ? ನೋಡ್ತಾ ಇರಿ... ಏನೇನ್ ಮಾಡ್ತೀವಿ... ಅಂತಾ ಹೇಳಿ ಈಗ ಹೀಗಾ ಮಾಡೋದು? ಬೈಟು ಕಾಫಿ ಕೊಡ್ತಿರೋದೇ ವಾರದ ಐದು ದಿನ ಮಾತ್ರ! ಆ ಐದು ದಿನವೂ ನೀಡುತ್ತಿರುವುದು 'ಬೈಟು' ಕಾಫಿ ಮಾತ್ರ! ಆದರೆ ನೀವು ಈ ಬೈಟು ಕಾಫೀಲೂ ಅನ್ಯಾಯ ಮಾಡ್ತಿದೀರಲ್ಲಾ? 19.8.2013ರ ಸೋಮವಾರದ ಬೈಟು ಕಾಫೀಲಿ ಏನ್ ಅನ್ಯಾಯ ಸ್ವಾಮೀ? ಬೈಟು ಕಾಫಿಲೀರೋದೇ ನಾಲ್ಕು ಪುಟ. ಆ ನಾಲ್ಕು ಪುಟದ ಮೊದಲನೇ ಪುಟದಲ್ಲಿ ಅರ್ಧಪುಟದಷ್ಟು ಜಾಹೀರಾತು! ಕೊನೆಯ ಪುಟದ ತುಂಬಾ ಬರೀ ಜಾಹೀರಾತು! ಇದು ನ್ಯಾಯನಾ? ಕೊಡ್ತಿರೋದೇ ಬೈಟು! ಅದರ ತುಂಬಾ ನೊರೆ ಹಾಕಿಕೊಟ್ರೆ ಹೇಗೆ ಸ್ವಾಮಿ? ಕೋಡಗನ ಕೋಳಿ ನುಂಗೀತಾ... ಅನ್ನೋ ಹಾಗೆ... ಬೈಟು ಕಾಫೀನಾ ಜಾಹೀರಾತು ನುಂಗೀತಾ... ಅನ್ನೋ ಹಾಗೆ ಆಯ್ತಲ್ಲಾ ಸ್ವಾಮೀ? ತಪ್ಪಾಯ್ತು...ಅಂತೀರಾ... ತಿದ್ಕೋತೀವಿ...ಅಂತೀರಾ?
-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, 3/34, ಮಧುವನ
ಶ್ರೀರಾಂಪುರ 2ನೇ ಹಂತ, ಮೈಸೂರು., ಮೊ. 988 6030677
---
ಆಗಸ್ಟ್ 18ರ ಸಾಪ್ತಾಹಿಕ ಪ್ರಭದಲ್ಲಿ ಮೂಡಿ ಬಂದ ಚೈತನ್ಯ ಹೆಗಡೆ-ವಿನಾಯಕ್ ಭಟ್ ಮೂರೂರರ ಲೇಖನ "ಝಗಡಾ ಊಂಛಾ" ಭಾರತೀಯರ ಮನ ಕಲಕುವಂತಿತ್ತು. ಸ್ವಾರ್ಥ ಸಾಧನೆಗಾಗಿ ಅಖಂಡ ಭಾರತವನ್ನು ವಿಭಜಿಸಿ, ಎರಡೂ ದೇಶವಾಸಿಗಳ ಭಾವನೆಗಳಿಗೆ ಬೆಂಕಿ ಇಟ್ಟು ಹೋದ ಅವಿವೇಕಿ 'ನೆಹರು' ಮಾಡಿದ ಪಾಪಕೃತ್ಯದಿಂದ ಇಂದು ಭಾರತೀಯರು ಅದರಲ್ಲೂ ನಮ್ಮ 'ಸೈನಿಕರು ನರಳುತ್ತಿರುವುದು' ವಿಪರ್ಯಾಸವೇ ಸರಿ. ಭಾರತೀಯರಿಗೆ ಯುದ್ಧಬೇಡ- ಪಾಕಿಸ್ತಾನದ ಪ್ರಜೆಗಳಿಗೆ ಯುದ್ಧ ಬೇಡ, ಆದರೆ ಧರ್ಮದ ಹೆಸರಿನಲ್ಲಿ ಅಧರ್ಮದ ಪೈಶಾಚಿಕ ಕೃತ್ಯಗಳನ್ನು ಮಾಡುತ್ತಾ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿಯನ್ನು ಮಾಡಿ ಕಾಲು ಕೆರೆದು ಯುದ್ಧಕ್ಕೆ ಬರುವ 'ಪಾಪಿ' ಪಾಕಿಸ್ತಾನದ ಸೈನ್ಯಕ್ಕೆ ಯುದ್ಧ ಬೇಕು. ಭಾರತವಾಸಿಗಳೆಲ್ಲಾ ನಮ್ಮ ಸಹೋದರ ಸಹೋದರಿಯರಿದ್ದಂತೆ ಎಂದು ಭಾವಿಸಿ ಎಲ್ಲಾ ಧರ್ಮದವರನ್ನೂ ಗೌರವ -ಪ್ರೀತಿಯಿಂದ ಕಾಣುವ ಹಿಂದೂಗಳ ಮನಸ್ಸನ್ನು ಕೆಣಕಿ, ಉಗ್ರವಾದದ ಹಿಂಸೆಯ ಉರಿ ಬೆಂಕಿಯಲ್ಲಿ ದಹಿಸುತ್ತಿರುವ ಪಾಪಿಗಳ ಅಂತ್ಯವನ್ನು ಬಹಳ ಬೇಗ ಪ್ರಕೃತಿಯೇ ಮಾಡುತ್ತದೆ.
ಫ್ಯಾಷನ್ ಡಿಸೈನರ್ ಮಧು, ಹಾಸನ, 99457- 37427
---
ಒಬ್ಬ ವಿದೇಶಿ ಮಹಿಳೆಯಾಗಿ ಭಾರತದ ಸಂಸ್ಕೃತಿಯ ಬಗ್ಗೆ ಎಷ್ಟೊಂದು ತಿಳಿದುಕೊಂಡಿದ್ದಾಳೆ ಹಾಗೂ ಎಷ್ಟೊಂದು ಗೌರವ ಹೊಂದಿದ್ದಾಳೆಂದು ಮರಿಯಾ ವರ್ತ್ ಅವರ ಜಿಜ್ಞಾಸೆ ಲೇಖನ-'ಜರ್ಮನಿ ಕ್ರೈಸ್ತ ರಾಷ್ಟ್ರವಾದರೆ, ಭಾರತ ಹಿಂದೂ ರಾಷ್ಟ್ರವೇಕಲ್ಲ?' (ಕ.ಪ್ರ. 14/8) ಸ್ಪಷ್ಟಪಡಿಸುತ್ತದೆ. ಹಿಂದೂ ಧರ್ಮದ ನಿಯಮ ಮತ್ತು ಸಿದ್ಧಾಂತಗಳು ಸದಾಶಯದಿಂದ ಕೂಡಿದ್ದು ಎಲ್ಲರನ್ನೂ ಗೌರವಿಸು ಮತ್ತು ಆದರಿಸು ಎಂಬ ಹಿಂದೂಧರ್ಮದ ತಿರುಳು ವ್ಯಕ್ತಿ ವಿಕಸನಕ್ಕೆ ದಾರಿ ಎಂಬ ಮಾತನ್ನು ಲೇಖಕಿ ಸ್ಪಷ್ಟಪಡಿಸುತ್ತಾಳೆ. ಆದರೆ ಭಾರತೀಯರ ದುರದೃಷ್ಟವೆಂದರೆ ಇಂತಹ ಒಳ್ಳೆಯ ಗುಣಗಳನ್ನು ಹೇಳಿಕೊಳ್ಳಲೂ ಬಹಳಷ್ಟು ಮಂದಿ ಹಿಂಜರಿಯುತ್ತಿದ್ದಾರೆ!? ತನ್ನ ಬಾಲ್ಯದ ಗ್ರಹಿಕೆ ಹೇಗೆ ಹುಸಿಯಾಯಿತು ಎಂಬುದನ್ನು ತಿಳಿದು ಖೇದಿಸುತ್ತಾಳೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೇ ಭಾರತದ ಭವಿಷ್ಯ ಅಡಗಿದೆ ಎಂದು ತಿಳಿದ ಭಾರತದ ಕೆಲವು ತರುಣರ ವಿಚಾರ ನೋವುಂಟು ಮಾಡುವಂತಹುದು ಎಂದೂ ಹೇಳಿದ್ದಾರೆ. ನಮ್ಮವರಲ್ಲದವರ ಅಭಿಪ್ರಾಯ ಇಷ್ಟೊಂದು ಸಕಾರಾತ್ಮಕವಾಗ ನಮ್ಮವರೇ ಎನಿಸಿಕೊಳ್ಳುವವರಲ್ಲಿ ಹಿಂದುತ್ವದ ಬಗ್ಗೆ ಯಾಕೇ ತಿರಸ್ಕಾರ, ಜಿಗುಪ್ಸೆ? ಪ್ರತಿ ಭಾರತೀಯರನ್ನೂ ಜಿಜ್ಞಾಸೆಗೆ ಒಳಪಡಿಸುವಂತೆ ಮಾಡಿ ಪ್ರಕಟಿಸಿದ ಕನ್ನಡಪ್ರಭಕ್ಕೆ ಧನ್ಯವಾದಗಳು.
-ಶಂಕರನಾರಾಯಣಭಟ್, ಮಾಡಗೇರಿ, ಮೊ. 9632 821920

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು:anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.