ಅಂಕಣಗಳು

ಹಿರಿಯರೊಂದಿಗಿನ ಕಾಮವನ್ನೂ ಪ್ರಕೃತಿಸಹಜ ಎಂದು ಸಮರ್ಥಿಸಬಹುದಲ್ಲ?

Published On :

ಸಲಿಂಗ ಕಾಮವನ್ನು ಮಾನ್ಯ ಮಾಡಿ, ಮುಕ್ತ ಅವಕಾಶ ಕೊಡಿ ಎಂಬುದು ಕೆಲವರ ವಾದ. ಅದು ಪ್ರಕೃತಿಗೆ ವಿರುದ್ಧ ಎಂಬುದು ಹಲವರ ಭಾವ. ಈ ಕೆಲವರ-ಹಲವರ ಮಧ್ಯೆ ಮಾಧ್ಯಮದವರಿಗಂತೂ ಬಿಸಿಬಿಸಿ ಸುದ್ದಿ. ರಾಜಕೀಯದವರಿಗೆ ಬೇಡದ ಉಸಾಬರಿ. ಸಲಿಂಗ ಕಾಮವನ್ನು ಬೆಂಬಲಿಸುವವರು 'ಅದು ಮೊದಲಿನಿಂದಲೂ ಇದೆ. ಅದು ವೈಯುಕ್ತಿಕ ಸ್ವಾತಂತ್ರ್ಯ. ಸೆಕ್ಸ್ ಅನ್ನು ಕಾನೂನಿನ ಪ್ರಕಾರ ಮೂಲಭೂತ ಹಕ್ಕನ್ನಾಗಿ ಸೇರಿಸಬೇಕು' ಎಂದೆಲ್ಲ ವಾದಿಸುತ್ತಾರೆ. ಇದು ಸಾಧುವೇ?  ಅವಶ್ಯಕವೇ?  
ಸಲಿಂಗ ಕಾಮ ಮೊದಲಿನಿಂದಲೂ ಇದೆ ಅದನ್ನು ಮಾನ್ಯ ಮಾಡಿ ಎಂದು ವಾದಿಸುವ ಇವರು, ನಾಳೆ ಪ್ರಾಣಿಗಳೊಂದಿಗೆ ಕಾಮ, ಸಾಮೂಹಿಕ ಕಾಮ ಇವುಗಳನ್ನು ಸಹ ಮಾನ್ಯ ಮಾಡಿ ಎಂದು ವಾದಿಸದೆ ಇದ್ದಾರೆಯೇ?  ಸೆಕ್ಸ್ ಮೂಲಭೂತ ಹಕ್ಕು ಎಂದುಕೊಂಡು ಕಾಮಕ್ಕೆ ಮಾತ್ರ ಪ್ರಾಮುಖ್ಯ ಕೊಟ್ಟರೆ, ನಾಳೆ ಹೆತ್ತವರೊಂದಿಗೆ ಕಾಮಿಸುವುದು ಹೇಗೆ ತಪ್ಪಾದೀತು ಎಂದು ವಾದಿಸಲಿಕ್ಕಿಲ್ಲವೇ? ರಕ್ತ ಸಂಬಂಧದಲ್ಲಿ ಸಂತಾನವಾದರೆ ಅಂಗವಿಕಲ ಸಂತಾನವಾಗಬಹುದು ಎಂದಾದರೆ ಮಕ್ಕಳಾಗದಂತೆ ನೋಡಿಕೊಂಡರಾಯಿತು. ತಂದೆ ತಾಯಿಯರು ವಯಸ್ಸಿನಲ್ಲಿ ಹಿರಿಯರು ಎನ್ನಿಸಿದರೆ ಒಡಹುಟ್ಟಿದವರೊಡನೆ ಕಾಮಿಸುವುದು ತಪ್ಪಿಲ್ಲ. ಏಕೆಂದರೆ ಅದು ಕೇವಲ ಸೆಕ್ಸ್. ಅದಕ್ಕೆ ಯಾವುದೇ ನಿರ್ಬಂಧ ಇರಬಾರದು. ಎಲ್ಲದಕ್ಕೂ ಪುರಾಣದ ಉದಾಹರಣೆ ಕೊಟ್ಟು ಸಮರ್ಥಿಸಿಕೊಳ್ಳುವ ಜನ ನಾಳೆ ಬ್ರಹ್ಮ-ಶಾರದೆಯ ವಿವಾಹದ ಉದಾಹರಣೆ ಕೊಡಲೂಬಹುದು. ಎಲ್ಲಿಗೆ ಬರಬಹುದು ಸಮಾಜ? ಲೈಂಗಿಕತೆಯನ್ನು ಮೂಲಭೂತ ಹಕ್ಕನ್ನಾಗಿ ಸೇರಿಸಬೇಕಂತೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಒಂದೇ ಹಕ್ಕಿನಿಂದ ಆಗುತ್ತಿರುವ ಅನಾಹುತ-ಅವಾಂತರಗಳೇ ಸಾಕು. ಖದೀಮರು ತಮ್ಮ ಯಾವುದೇ ಕೆಲಸಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಇನ್ನು ಇಂಥವರ ಕೈಗೆ ಲೈಂಗಿಕತೆ ಸಿಕ್ಕಿದರೆ...?
ಹಿಂದೆ ಮಾನವನ ಮೂಲಭೂತ ಅವಶ್ಯಕತೆಯಾದ ಕಾಮವನ್ನು ವ್ಯವಸ್ಥಿತವಾಗಿ, ಸುರಕ್ಷಿತವಾಗಿ ಪೂರೈಸಿಕೊಳ್ಳಲು ವಿವಾಹ ಎಂಬ ವ್ಯವಸ್ಥೆ ಮಾಡಲಾಗಿತ್ತು. ವ್ಯವಸ್ಥೆ ಸಡಿಲವಾದಂತೆ ಕುಟುಂಬ ವ್ಯವಸ್ಥೆಯ ಹೊರಗೂ ಕಾಮ ಕಾಣಿಸಿಕೊಳ್ಳತೊಡಗಿತು. ಇದು ಮುಂದುವರೆದು ಪ್ರಕೃತಿ ಸಹಜವಾಗಿ ಹೆಣ್ಣು-ಗಂಡಿನ ಮಧ್ಯೆ ಮಾತ್ರ ಇದ್ದದ್ದು ಈಗ ಸಲಿಂಗ ಕಾಮದತ್ತ ತಿರುಗುತ್ತಿದೆ. ಇದನ್ನು ಪ್ರೇರೇಪಿಸಲು, ಸಮರ್ಥಿಸಲು ಮಾಧ್ಯಮದ ಒಂದು ವರ್ಗವೂ ನಿಂತಂತಿದೆ. ಹೀಗೇ ಮುಂದುವರೆದಲ್ಲಿ ನಮ್ಮ ಕುಟುಂಬ ವ್ಯವಸ್ಥೆಯ ಒಂದೊಂದೇ ಕಟ್ಟುಗಳು ಕಳಚಿ ಬಿದ್ದು ಹೋಗುತ್ತವೆ. ಕಾಮಕ್ಕೆ ಯಾವುದೇ ನಿಯಮ ಇಲ್ಲವಾಗುತ್ತದೆ. ಆಗ ವಿವಾಹ ಎಂಬ ಪದಕ್ಕೆ ಅರ್ಥ ಇರುವುದಿಲ್ಲ. ಮುಚ್ಚು ಮರೆ ಬೇಕಾಗುವುದಿಲ್ಲ. ಎಲ್ಲಾ ಬಹಿರಂಗ. ಈಗಾಗಲೆ ಈ ಮುಕ್ತ ವ್ಯವಹಾರ ತಂದ ಲಿವಿಂಗ್ ಟುಗೆದರ್, ಏಡ್ಸ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಸಲಿಂಗ ಕಾಮ ಎನ್ನುವುದು ಒಂದು ಮಾನಸಿಕ ಸ್ಥಿತ್ಯಂತರ. ಅದಕ್ಕೆ ಚಿಕಿತ್ಸೆ ಮಾಡಿಕೊಳ್ಳಬೇಕೇ ಹೊರತು ರೋಗವನ್ನೇ ವಿಶೇಷವೆಂದು ಸಂಭ್ರಮಪಟ್ಟುಕೊಳ್ಳುವುದು ತರವಲ್ಲ.
ಶಾಂತಿ ಪಾಲನೆ, ಶಿಸ್ತು, ಕಾನೂನು ಇವು ಸರ್ಕಾರದ ನಿಯಂತ್ರಣದಲ್ಲಿ ಇಲ್ಲವಾದರೆ 'ಬಲಶಾಲಿಗಳು ಉಳಿಯುತ್ತಾರೆ' ಎಂಬ ಹಾಗೆ ಉಳಿವಿಗಾಗಿ ರೌಡಿಸಂ ಶುರುವಾಗುತ್ತದೆ. ಇದೇ ರೀತಿ ಸೆಕ್ಸ್‌ಗೆ ನಿಯಂತ್ರಣ ಇಲ್ಲವಾದರೆ ಅದು ಕೂಡ ಬಲಶಾಲಿಗಳ ಕೈವಶವಾಗುತ್ತದೆ. ಆಗ ಅಲ್ಲಿ ಅಣ್ಣ, ತಂಗಿ, ತಂದೆ, ತಾಯಿ, ಮಗ, ಮಗಳು ಇತ್ಯಾದಿ ಸಂಬಂಧಗಳಿಗೆ ಅರ್ಥ ಉಳಿಯದೆ ಎಲ್ಲವೂ ಬಲಶಾಲಿಗಳ ಪಾಲಾಗುತ್ತದೆ. ಸಮಾನ ಲಿಂಗಿಗಳ ಜೊತೆ ಬೆರೆಯುವುದನ್ನೂ ಅನುಮಾನದ ದೃಷ್ಟಿಯಲ್ಲಿ ನೋಡುವ ಕಾಲ ಬರಬಹುದು. ಅಥವಾ ಒಬ್ಬ ಬಲಶಾಲಿಯ ಜೊತೆ ಗೆಳೆತನ ಬೆಳೆಸುವುದಕ್ಕೆ ಹಿಂಜರಿತ ಉಂಟಾಗಬಹುದು. ಪ್ರತಿಯೊಬ್ಬನಿಗೂ ತನ್ನ ಸಹಜ ಹಕ್ಕುಗಳ ಬಗ್ಗೆ ಎಚ್ಚರಿಕೆ, ಅರಿಯುವಿಕೆ ಅಗತ್ಯ. ಹಾಗೆಂದು ಬೇರೆಯವರ ಸಹಜ ಹಕ್ಕುಗಳನ್ನು ಕಿತ್ತುಕೊಳ್ಳುವುದೂ ಸರಿಯಲ್ಲ. ಯಾವುದೂ ಮಿತಿಮೀರದೆ ಹದವರಿತು ಬಾಳುವುದೇ ಆರೋಗ್ಯವಂತ ನಾಗರೀಕನ ಲಕ್ಷಣ.

- ಸುರೇಖಾ ಭೀಮಗುಳಿ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.