

* ಕನ್ನಡದಲ್ಲೂ ಗಾಲಿ ಸಿನಿಮಾ, ಹಿಂದಿಯಲ್ಲೂ ಬೈಕ್ಗಳ ಬೆನ್ನು ಹತ್ತಿದ ಗಾಲಿ ಸಿನಿಮಾ, ಧೂಮ್ 3. ಹಿಂದಿ ಗಾಳಿ ಇಲ್ಲಿಗೂ ಬೀಸಿದೆಯಾ?
ರೀ, ನಮ್ ಧೂಮ್ 3 'ಅಮೀರ್' ಖಾನ್ ಇರೋ, ಹೈ ಬಜೆಟ್ ಚಿತ್ರ, ನಿಮ್ಮದು ಲೋ ಬಜೆಟ್ನ
'ಗರೀಬ್'ರಥ...
* ಅದು ಸರಿ ಬಿಡಿ, ಆದ್ರೆ, ಧೂಮ್ಕೇತು ಥರ ನೀವು ಇಷ್ಟೊಂದ್ ಥಿಯೇಟರ್ಗಳಲ್ಲಿ ಬಂದ್ರೆ ನಮ್ಮ ಕನ್ನಡ ಸಿನಿಮಾಗಳ ಗತಿ ಏನು?
ಫಾರಿನರ್ಸ್ನ ಪ್ರೀತಿಯಿಂದ, ಗೌರವದಿಂದ ನೋಡಿ ಅನ್ನೋ ನನ್ನ ಹೊಸ ಜಾಹೀರಾತು ನೋಡಿಲ್ಲ ಅನ್ಸುತ್ತೆ ನೀವು...
* ಹೌದು ಸ್ವಾಮಿ, ನಾವಿರೋದೇ ಹೀಗೆ, ಅದ್ಸರಿ, ಧೂಮ್ 3 ಫಿಲ್ಮ್ನಲ್ಲಿ ನೀವು ಅಭಿನಯದಲ್ಲಿ ಮ್ಯಾಜಿಕ್ ಮಾಡಿದ್ದೀರ ಅಂತ ಎಲ್ಲರೂ ಹೇಳ್ತಾ ಇದಾರೆ?
ಮಾಡಿರೋದೆ ಮ್ಯಾಜಿಕ್ ಮಾಡುವವನ ರೋಲ್, ಮತ್ತೆ ಮ್ಯಾಜಿಕ್ ಮಾಡ್ಲೇಬೇಕಲ್ಲ.
* ಓ ಹಂಗೆ, ಆದ್ರೆ ಈ ಪಾರ್ಟ್ 3 ಸಿನಿಮಾದಲ್ಲೆಲ್ಲಾ ಯಾಕ್ರೀ ಆ್ಯಕ್ಟ್ ಮಾಡ್ತೀರಾ, ಜನ ಧೂಮ್ '3' ಅಂದ್ರೆ 'ಥರ್ಡ್' ಕ್ಲಾಸ್ ಸಿನಿಮಾ ಅಂದ್ಕೊಳ್ಳಲ್ವೇ?
ಧೂಮ್ ಕಣ್ರೀ ಇದು. ನಾವೇನು ಬೈಕ್ ಮೇಲೆ ದೊಂಬರಾಟ ಮಾಡಿಲ್ಲ. ನಮ್ದು 'ಬೈಕ್ಬಸ್ಟರ್' ಸಿನಿಮಾ ಆಗುತ್ತೆ ನೋಡ್ತಾ ಇರಿ.
* ಒಂದ್ ಲಾಸ್ಟ್ ಪ್ರಶ್ನೆ. ಶಿವಾ ಅಂತ ಹೋಗುತಿದ್ದೆ ಬೈಕಿನಲಿ ಅನ್ನೋವಾಗ, ಪ್ರತಿಸಲ ಬೈಕಿಂದ ಹೊಗೆ ಬಂದಾಗ್ಲೂ 'ಧೂಮ್ಪಾನ ಆರೋಗ್ಯಕ್ಕೆ ಹಾನಿಕರ' ಅಂತ ಬೋರ್ಡ್ ಹಾಕಬೇಕು ಅಂತ ಸೆನ್ಸಾರ್ನವರು ಅಬ್ಜೆಕ್ಷನ್ ಮಾಡ್ಲಿಲ್ವಾ?
ಅಯ್ಯೋ, ಅಷ್ಟೊಂದ್ ಖಡಕ್ ಆಗಿರೋಕೆ ನಮ್ದೇನ್ ಕರ್ನಾಟಕ ಸೆನ್ಸಾರ್ ಬೋರ್ಡ್ ಅಲ್ಲ ಬಿಡಿ..
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ತಟ್ಟೆಯಲ್ಲಿ ಊಟ ಬಿಡಬಾರದು ಅಂತ ದೊಡ್ಡವರು ಎಷ್ಟೇ ಹೇಳಿದರೂ ಫುಡ್ ವೇಸ್ಟ್ ಮಾಡುವ ಕೆಲಸ ಆಗುತ್ತಲೇ ಇದೆ. ತಿಂದಿದ್ದಕ್ಕಿಂತ ಉಳಿಸಿದ್ದೇ ಹೆಚ್ಚು ಎನ್ನುವಂಥ ಪರಿಸ್ಥಿತಿಯನ್ನು ಕಂಟ್ರೋಲ್ ಮಾಡಿ ಫುಡ್ ವೇಸ್ಟೇಜ್ ಕಡಿಮೆ ಮಾಡುವ ಕೆಲವು ವಿಧಾನಗಳ ಬಗ್ಗೆ ಈ ವೆಬ್ಸೈಟ್ಗಳಲ್ಲಿ ಮಾಹಿತಿ ಇದೆ.
n bit.ly/1fOs9RQ n bit.ly/1htDXcE n bit.ly/194wjDw n bit.ly/1fOsdkv n bit.ly/JO48z6
ಹರಿ-ಕಥೆ
'ಇಲ್ಲಿ ಏನೇ ಟ್ರೀಟ್ಮೆಂಟ್ ತಗೊಂಡ್ರೂ ಬರೀ 100 ರುಪಾಯಿ. ಅಲ್ಲದೆ ನಿಮ್ಮ ಖಾಯಿಲೆ ಗುಣಪಡಿಸಲಾಗದೆ ಇದ್ರೆ, ನಿಮಗೆ ಇನ್ನೂರು ರುಪಾಯಿ ಕೊಡ್ತೀವಿ' ಅಂತ ಡಾಕ್ಟರ್ ಖೇಮು ಕ್ಲಿನಿಕ್ ಹೊರಗೆ ಬೋರ್ಡ್ ಹಾಕಿದ್ದ. ಅದನ್ನು ನೋಡಿದ ಸೋಮು ಏನಾರಾ ಮಾಡಿ, ಸುಳ್ಳು ಸುಳ್ಳು ಖಾಯಿಲೆ ಹೇಳಿ ಇವನತ್ರ 200 ರುಪಾಯಿ ಪೀಕಬೇಕು ಅಂತ ಪ್ಲ್ಯಾನ್ ಮಾಡಿ ಖೇಮು ಆಸ್ಪತ್ರೆಗೆ ಬಂದ. ಡಾಕ್ಟರ್ ಖೇಮುನ ಭೇಟಿ ಮಾಡಿ 'ನಂಗೆ ನಾಲಿಗೆಯಲ್ಲಿ ಸೆನ್ಸ್ ಆಫ್ ಟೇಸ್ಟೇ ಇಲ್ಲ, ಏನಾದ್ರೂ ಮಾಡಿ' ಅಂದ. ಸರಿ, ಖೇಮು 'ಏನಮ್ಮಾ ನರ್ಸಮ್ಮಾ, ಆ ಬಾಟಲ್ ನಂಬರ್ 12ರಲ್ಲಿರೋ ಔಷಧಿ ತಗೊಂಡ್ ಬಂದು ಇವರ ನಾಲಿಗೆ ಮೇಲೆ ಹಾಕು' ಅಂದ. ನರ್ಸಮ್ಮ ಹಾಕಿದ್ಳು. ಸೋಮು 'ಅಯ್ಯೋ ಥೂ ಎಷ್ಟೊಂದು ಕಹಿಯಾಗಿದೆ' ಅಂತ ಬಾಯಿಬಡಕೊಂಡ. ಆಗ ಡಾಕ್ಟರ್ ಖೇಮು 'ಕಂಗ್ರ್ಯಾಜುಲೇಶನ್ ನಿಮ್ಮ ನಾಲಿಗೆಯಲ್ಲಿ ಸೆನ್ಸ್ ಆಫ್ ಟೇಸ್ಟ್ ವಾಪಸ್ ಬಂದಿದೆ. 100 ರುಪಾಯಿ ಕೊಟ್ಟು ಹೊರಡಿ' ಅಂದ. ಸೋಮು ನಿರಾಸೆಯಿಂದ 100 ರುಪಾಯಿ ಕೊಟ್ಟು ಹೋಗಬೇಕಾಯ್ತು. ಎರಡು ವಾರ ಆದ್ಮೇಲೆ ಸೋಮು ಮತ್ತೆ ವಾಪಸ್ ಬಂದ. ಈ ಸಲ ಲಾಸ್ಟ್ ಟೈಮ್ 100 ರುಪಾಯಿನೂ ಸೇರ್ಸಿ ವಸೂಲಿ ಮಾಡ್ಬೇಕು ಅಂದ್ಕೊಂಡವನು ಬಂದವನು ಡಾಕ್ಟರ್ ಖೇಮು ಹತ್ರ ಹೇಳ್ದ 'ಡಾಕ್ಟ್ರೇ ನಾನು ನೆನಪಿನ ಶಕ್ತಿ ಕಳಕೊಂಡಿದ್ದೀನಿ. ಏನಾದ್ರೂ ಮಾಡಿ'. ಸರಿ, ಖೇಮು ಕೂಗಿದ 'ಏನಮ್ಮಾ ನರ್ಸಮ್ಮಾ, ಆ ಬಾಟಲ್ ನಂಬರ್ 12ರಲ್ಲಿರೋ ಔಷದಿ ತಗೊಂಡ್ ಬಂದು ಇವರ ನಾಲಿಗೆ ಮೇಲೆ ಹಾಕು'. ಸೋಮುಗೆ ಆಶ್ಚರ್ಯ ಆಯ್ತು. 'ಒಂದ್ನಿಮಿಷ ಡಾಕ್ಟ್ರೇ, 12 ನಂಬರ್ ಬಾಟಲಿಯಲ್ಲಿರೋ ಔಷಧಿ ಸೆನ್ಸ್ ಆಫ್ ಟೇಸ್ಟ್ ಪ್ರಾಬ್ಲಂಗೆ ಅಲ್ವಾ?' ಅಂದ. ಅದಕ್ಕೆ ಖೇಮು ನಗ್ತಾ ಹೇಳಿದ 'ಕಂಗ್ರ್ಯಾಜುಲೇಶನ್ ನಿಮ್ಮ ನೆನಪಿನ ಶಕ್ತಿ ವಾಪಸ್ ಬಂದಿದೆ. ನೀವಿನ್ನು 100 ರುಪಾಯಿ ಕೊಟ್ಟು ಹೊರಡಬಹುದು'.
ಸ್ಕ್ಯಾಂಡಲ್ವುಡ್
ಗಾಂಧಿನಗರದಲ್ಲಿ ಒಂದ್ ಸಿನಿಮಾ ಫ್ಲಾಪ್ ಆದ್ರೆ ನಟ, ನಿರ್ದೇಶಕರು ಸುದ್ದಿಯಲ್ಲೇ ಇರಲ್ಲ. ಆದ್ರೆ ಎಷ್ಟೇ ಫ್ಲಾಪ್ ಆದ್ರೂ ಮತ್ತೆ ಮತ್ತೆ ಸುದ್ದಿಯಲ್ಲಿರೋರು ಅಂದ್ರೆ ವಿತರಕ ಪ್ರಸಾದ್ ಮಾತ್ರ. ಮೊನ್ನೆ ಬಿಡುಗಡೆಯಾದ 'ಗಾಲಿ' ಚಿತ್ರದಲ್ಲೂ 'ಪ್ರಸಾದ್ ನಮ್ ಸಿನಿಮಾ ಡಿಸ್ಟ್ರಿಬ್ಯೂಶನ್ ಮಾಡಲು ಒಪ್ಪಿಕೊಂಡಿದಾರೆ' ಎನ್ನುವ ಸಂಭಾಷಣೆಯ ಮೂಲಕ ಪ್ರಸಾದ್ ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲಾ ಕೊಂಡುಕೊಂಡು ಈ ಪರಿಸ್ಥಿತಿ ತಂದುಕೊಂಡಿದ್ದಾರೆ ಎಂಬುದನ್ನು ಹೇಳಲಾಗಿತ್ತು. ಈ ಬಾರಿಯೂ ಪ್ರಸಾದ್ ರಾಂಗ್ ರೀಸನ್ಗೇ ಸುದ್ದಿಯಲ್ಲಿದ್ದಾರೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಸಾಲ ಕೊಟ್ಟವರೊಬ್ಬರ ತಾಳ್ಮೆ ಮೀರಿ ಪೊಲೀಸರಿಗೆ ದೂರು ಕೊಟ್ಟದ್ದರಿಂದ ಪ್ರಸಾದ್ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ಬಿಡುಗಡೆಯಾದ ಮೇಲೆ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಸುದ್ದಿಗಳನ್ನು ಅಲ್ಲಗಳೆಯುವಂತೆ ಪ್ರಸಾದ್ ಆತ್ಮವಿಶ್ವಾಸದಿಂದ ಮಾತನಾಡುತ್ತಿರುವುದು ಸಮಾಧಾನದ ಸಂಗತಿ. ನಾನು ಯಾರ ದುಡ್ಡನ್ನೂ ಎತ್ತಿ ಹಾಕುವುದಿಲ್ಲ, ನಾನು ಕಷ್ಟದಲ್ಲಿದ್ದೇನೆ. ನೀವು ಇನ್ನಷ್ಟು ಕಷ್ಟ ಕೊಡಬೇಡಿ. ಅದರಿಂದ ನಿಮಗೆ ಹಣ ಸಿಗುವುದಿಲ್ಲ. ನನ್ನ ಬಳಿ ಹಣ ಇದ್ದಿದ್ದರೆ ಕೊಡುತ್ತಿರಲಿಲ್ಲವೇ?. ಅದರ ಬದಲಾಗಿ ನನಗೊಂದಿಷ್ಟು ಸಮಯ ಕೊಡಿ. ನಿಮ್ಮ ಹಣವನ್ನು ಬಡ್ಡಿ ಸಮೇತ ಮನೆಬಾಗಿಲಿಗೆ ತಲುಪಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ. ಒಂದೊಂದು ದಿನಕ್ಕೂ ಬಡ್ಡಿ ಲೆಕ್ಕ ಹಾಕುವ ಗಾಂಧಿನಗರದ ಮಂದಿ ಪ್ರಸಾದ್ ಅವರ ಮಾತಿಗೆ ಬೆಲೆ ಕೊಟ್ಟು ಅವರಿಗೊಂದಿಷ್ಟು ಸಮಯ ಕೊಡುವಷ್ಟು ದೊಡ್ಡ ಮನಸ್ಸು ಮಾಡಿದರೆ ಪ್ರಸಾದ್ ಮಾಡಿರುವ ಸ್ವಯಂಕೃತ ಅಪರಾಧಕ್ಕೆ ಕೊನೆ ಸಿಗಬಹುದು.
ಡಬ್ಕುಡಬಲ್ ತುದಾಂಡಲ್...
ಸೀಕ್ವೆಲ್ ಮಾಡಲಾಗದ ಚಿತ್ರಗಳು
ನಂ.1
ಒಕ್ಕೇ ಒಕ್ಕುಡು
ಅಪವಾದ ಎಂಬಂತೆ ಎರಡೆರಡು 'ಸ್ವರ್ಗ' ತೋರಿಸಿದ್ದು 'ಜನ್ನತ್ 2'
('ಜನ್ನತ್ 3' ಸಿನಿಮಾ ಬಂದರೆ ಕನ್ನಡದಲ್ಲಿ 'ಸ್ವರ್ಗಕ್ಕೆ 'ಮೂರೇ' ಗೇಣು' ಅಂತ ರಿಮೇಕ್ ಮಾಡಬಹುದು.)
ಎಣ್ಣೆ ಬಾಟಲ್ ಓಪನ್ ಮಾಡುವ ಮುನ್ನ ಕೈಯಿಂದ ಬಾಟಲ್ನ ಕೆಳಗೆ ತಟ್ಟುವವರನ್ನು ಏನೆನ್ನಬಹುದು
ಬುಡ'ತಟ್ಟು' ಜನಾಂಗ
ಮಾಡರ್ನ್ ಗಾದೆ
ಸುಸ್ಸೂ ಬಂತು ಅಂತ ಬೆಂಗಳೂರು 'ಒನ್'ಗೆ ಹೋಗೋಕಾಯ್ತದ..?
ಭರ್ಜರಿ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಹೇಳಿಕೆ:
ನಾಲ್ಕು ಜನ ನನ್ ಕಡೆ ಬೆರಳು ತೋರಿಸದೇ ಇರೋ ಹಂಗೆ ಬದುಕಬೇಕು ಅನ್ನೋದು ನನ್ನ ಪಾಲಿಸಿ. ಯಾಕಂದ್ರೆ 'ಬೆರಳು ತೋರಿಸೋದ್' ಏನಿದ್ರೂ ಬರೀ ನನ್ ಕೆಲ್ಸ.
ಮನಮೋಹನ್ಸಿಂಗ್ ಒಬಾಮಾ ದೇವಯಾನಿ ಪ್ರಕರಣದ ಬಗ್ಗೆ ಚರ್ಚೆ ಮಾಡ್ತಾ ಇದ್ರು.
ಮನಮೋಹನ್ಸಿಂಗ್: ದೇವಯಾನಿ ವಿಷಯದಲ್ಲಿ ನೀವು ಕ್ಷಮೆ ಕೇಳಲೇಬೇಕು. ಇಲ್ಲಾಂದ್ರೆ ನಾವು ಬಿಡಲ್ಲ.
ಒಬಾಮಾ: (ಕಿವಿ ಮೇಲೆ ಕೈಯಿಟ್ಟುಕೊಂಡು, ಮುಖದ ಮೇಲೆ 'ನೀವು ಹೇಳಿದ್ದು ಸರಿಯಾಗಿ ಕೇಳಿಸಲಿಲ್ಲ' ಅನ್ನೋ ಥರ ಎಕ್ಸ್ಪ್ರೆಶನ್ ಇಟ್ಕೊಂಡು ಕೇಳಿದ್ರು) 'ಸಾರಿ....?'
ಮನಮೋಹನ್ಸಿಂಗ್: ಥ್ಯಾಂಕ್ಯೂ. ಬೈ.
- ಹರಿ
harikannadaprabha@gmail.com