ನಿಮ್ಮ 'ವಿಶ್ವರೂಪಂ' ಸಿನಿಮಾ ರಿಲೀಸ್ ಮಾಡೋಕೆ ಪ್ರಾಬ್ಲಂ ಆಗಿ, ಕಡೆಗೂ ಬಿಡುಗಡೆ ಆಗಿದೆ, 'ಮುಂದ'?.
ಸಿನಿಮಾ ನೋಡೋಕೆ ಎಲ್ಲರೂ 'ಮುಂದ ಬನ್ನಿ'!
ಇದೇನಿದು ಡಿಟಿಎಚ್ ವಿಷ್ಯ, ರಾಜಕಾರಣಿಗಳು ಟಿಕೆಟ್ ತಗೊಂಡು ಮನೆಬಾಗಿಲಿಗೆ ಬಂದು ಸೀಟಿಗಾಗಿ ಓಟು ಕೇಳೋ ಥರಾ?
ನಂದು ಬೇರೆ ಥರಾ, ನಾನು ಮನೆಬಾಗಿಲಿಗೆ ಬಂದು ಟಿಕೆಟ್ ಇಲ್ಲದೆ ಸಿನಿಮಾ ಸೀಟು ಕೊಟ್ಟು ಸೀಟಿ ಹೊಡೆಯೋಕ್ ಹೇಳ್ತಿದೀನಿ!
'ಸೀಟಿ' ಅಂದಕೂಡ್ಲೇ ನೆನಪಾಯ್ತು, ರಜನೀಕಾಂತ್ ಥರಾ ನೀವೂ ಬಸ್ ಕಂಡಕ್ಟರ್ ಆಗಿ 'ಮುಂದೆ ಬನ್ನಿ' ಅಂತ ಹಾಡಿದ್ರಿ, ಆದರೆ ಈಗಿನ ಕಂಡಕ್ಟರ್‌ಗಳೆಲ್ಲರೂ ಬರೀ 'ಹಿಂದೆ ಹೋಗಿ' ಅಂತಾನೇ ಹೇಳ್ತಾರಲ್ಲ?
ಈಗಿನ್ ಜನ ಸಿಕ್ಕಾಪಟ್ಟೆ 'ಫಾರ್ವರ್ಡ್' ಅಲ್ವಾ, ಅದಕ್ಕೇ ಕಂಡಕ್ಟರ್‌ಗಳ ಸ್ಟೈಲೂ ಬದಲಾಗಿದೆ!
ನಮ್ಮ ರಮೇಶ್ ಅರವಿಂದ್‌ರನ್ನ ನಿಮಗೆ ಕಂಪೇರ್ ಮಾಡ್ತಾರೆ, ಅದಕ್ಕಾಗೇ, ನಿಮ್ಮ ಹೆಸರಲ್ಲಿರೋ 'ಕಮಲ' ತಮ್ಮ ಹೆಸರಲ್ಲೂ ಇರಲಿ ಅಂತಾನೆ ಅವರು 'ರಮೇಶ್' ಜೊತೆಗೆ 'ಅರವಿಂದ' ಸೇರಿಸ್ಕೊಂಡಿದ್ದಾ?
ಹಿಂಗೆಲ್ಲಾ ಕಿವಿಯಲ್ಲಿ 'ಕಮಲ'ದ ಹೂವು ಇಡಬಾರ್ದು ಕಣ್ರೀ 'ಬಿಜೆಪಿ'ಯವ್ರು ಬಯ್ತಾರೆ!
ಸರಿ, ಡಿಟಿಎಚ್‌ನಲ್ಲಿ ಸಿನಿಮಾ ರಿಲೀಸ್ ಮಾಡೋ ನಿಮ್ಮ ಐಡಿಯಾ ಥರಾ, ರಜನೀಕಾಂತ್ ತಮ್ಮ ಹೊಸ ಸಿನಿಮಾಕ್ಕೆ ಯಾವ ಐಡಿಯಾ ಮಾಡಬಹುದು?
ಅವ್ರು ಬಿಡಿ, ಮನಸ್ ಮಾಡಿದ್ರೆ, ಶೂಟಿಂಗ್ ಆಗೋಕ್ ಮುಂಚೆನೇ ಸಿನಿಮಾ ರಿಲೀಸ್ ಮಾಡ್‌ಬಿಡ್ತಾರೆ!
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಪಾದಚಾರಿಗಳಿಗೆ ಮತ್ತು ಬಸ್ ಪ್ರಯಾಣಿಕರಿಗೆ ಇಯರ್‌ಫೋನ್ ಕೂಡ ಒಂದು ಆಭರಣ ಎನ್ನುವಂತಾಗಿರುವ ಕಾಲದಲ್ಲಿ ಕಾರ್ ಇರುವವರಿಗೆ ಕಾರ್‌ಗಿಂತ ಅದರಲ್ಲಿರುವ ಆಡಿಯೋ ಸಿಸ್ಟಮ್ ಮತ್ತು ಸ್ಪೀಕರ್‌ಗಳ ಬಗ್ಗೆಯೇ ಹೆಚ್ಚಿನ ಕಾಳಜಿ. ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿರುವ ಸೌಂಡ್ ಪಾರ್ಟಿಗಳಿಗೆ ತಮ್ಮ ಕಾರಿನೊಳಗೆ ಕೂಡ ಪಾರ್ಟಿ ನಡೆಯುತ್ತಿರುವಂಥ ಸೌಂಡು ಬರಬೇಕೆನ್ನುವ ಆಸೆ. ಎಂಥ ಕಾರುಗಳಿಗೆ ಎಂಥ ಆಡಿಯೋ ಸಿಸ್ಟಮ್ ಬೇಕು ಎಂಬ ಬಗ್ಗೆ ಈ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಇದೆ. ಓದಿ ನೋಡಿ, ನಂತರ ಕೇಳಿ ಕೇಳಿ ಮರುಳಾಗಿ.
http://yhoo.it/10WfTKj
http://bit.ly/bVoUUU
http://bit.ly/XHaGPV
http://bit.ly/10WfWFV, http://bit.ly/XCyd3y
ಹರಿ-ಕಥೆ
ಒಂದಿನ ಖೇಮು ಆಫೀಸ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ. ಮನೆ ಅಂಗಳದಲ್ಲಿನ ದೃಶ್ಯ ನೋಡಿ ಅವನಿಗೆ ಎದೆ ಒಡೆದುಹೋಗುವಂತಾಯಿತು. ತನ್ನ ಮನೆಯ ನಾಯಿ, ಪಕ್ಕದ ಮನೆಯ ಬೆಕ್ಕನ್ನು ಬಾಯಲ್ಲಿ ಕಚ್ಚಿ ಹಿಡಿದು ಎಳೆದಾಡುತ್ತಿತ್ತು. ಖೇಮು ಓಡಿ ಬಂದವನೇ ತನ್ನ ನಾಯಿಯನ್ನು ಹೊಡೆದು ಬೆಕ್ಕನ್ನು ಬಿಡಿಸಿಕೊಂಡ. ಮುಟ್ಟಿನೋಡಿದರೆ ಬೆಕ್ಕು ಸತ್ತು ಹೋಗಿತ್ತು. ಖೇಮುಗೆ ಗಾಬರಿ. ಮೊದಲೇ ಪಕ್ಕದ ಮನೆಯವನು ಜಗಳಗಂಟ. ಅಲ್ಲದೆ ರಿಟೈರ್ಡ್ ಮಿಲಿಟರಿ ಮ್ಯಾನ್ ಬೇರೆ. 24 ಗಂಟೆ ಕೈಯಲ್ಲಿ ಬಂದೂಕು ಹಿಡಕೊಂಡು ಮಾತಾಡಿದ್ರೆ 'ಸುಟ್ಟುಬಿಡ್ತೀನಿ' ಅಂತಿರ್ತಾನೆ. ನನ್ನ ನಾಯಿ ಅವನ ಬೆಕ್ಕನ್ನು ಸಾಯಿಸಿದೆ ಎಂದು ಗೊತ್ತಾದರೆ ನನ್ನನ್ನೂ ಸಾಯಿಸಿಬಿಡುತ್ತಾನೆ ಎಂದು ಕಂಗಾಲಾದ. ನಂತರ ಕೊಂಚ ಯೋಚಿಸಿ ಆ ಸತ್ತ ಬೆಕ್ಕಿನ ಮರಿಯನ್ನು ತೆಗೆದುಕೊಂಡು ಬಾತ್‌ರೂಮಿಗೆ ಹೋಗಿ ಅದನ್ನು ಚೆನ್ನಾಗಿ ತೊಳೆದು, ಮೈಮೇಲಿನ ಮಣ್ಣು ಧೂಳು ಕ್ಲೀನ್ ಮಾಡಿ ಕತ್ತಲಾಗುವವರೆಗೂ ಕಾದು ಮೆಲ್ಲನೆ ತೆಗೆದುಕೊಂಡು ಹೋಗಿ ಅದನ್ನು ಪಕ್ಕದಮನೆಯ ಅಂಗಳದಲ್ಲಿದ್ದ ಆ ಬೆಕ್ಕಿನ ಗೂಡಿನ ಒಳಗೆ ಇಟ್ಟು ಬಂದುಬಿಟ್ಟ. ಮಿಲಿಟರಿ ಮ್ಯಾನ್ ನೋಡಿದರೆ ಬೆಕ್ಕು ತನ್ನ ಗೂಡಿನಲ್ಲೇ ಸತ್ತುಹೋಗಿದೆ ಎಂದುಕೊಳ್ಳುತ್ತಾನೆ ಎಂಬ ಪ್ಲ್ಯಾನ್ ಖೇಮುನದ್ದು. ಸರಿ ಬೆಳಗ್ಗೆ ಕಾತರದಿಂದ ಸ್ವಲ್ಪ ಮುಂಚೆಯೇ ಎದ್ದು ಬಂದು ಬಾಲ್ಕನಿಯಲ್ಲಿ ನಿಂತು ಆಚೀಚೆ ನೋಡಿದ ಖೇಮು. ಅದೇ ಸಮಯಕ್ಕೆ ಹೊರಗೆ ಬಂದ ಮಿಲಿಟರಿ ಮ್ಯಾನ್ ಕೇಳಿದ 'ಖೇಮು, ನಿಂಗೊಂದ್ ವಿಷ್ಯ ಗೊತ್ತಾಯ್ತಾ, ನಮ್ಮ ಬೆಕ್ಕಿನ ಮರಿ ಸತ್ತು ಹೋಯ್ತು'. ಖೇಮುಗೆ ನಾಲಗೆ ಒಣಗಿತು. ಹಾ, ಓ...ಛೆ..., ಹೌದಾ? ಎಂದು ತಡವರಿಸಿದ. ಅದಕ್ಕೆ ಮಿಲಿಟರಿ ಮ್ಯಾನ್ ಹೇಳಿದ 'ಹೌದು, ಬೆಕ್ಕಿಗೆ ಜ್ವರ ಬಂದು ಮೊನ್ನೆ ರಾತ್ರಿ ಸತ್ತುಹೋಯ್ತು, ಆದ್ರೆ ವಿಚಿತ್ರ ಅಂದ್ರೆ, ಅದನ್ನ ಮನೆ ಪಕ್ಕದ ಗುಂಡೀಲಿ ಹೂತು ಹಾಕಿದ್ದೆ. ಆದ್ರೆ ಯಾವನೋ ತಲೆಕೆಟ್ಟೋನು, ಅದನ್ನ ಗುಂಡಿಯಿಂದ ತೆಗೆದು, ಅದಕ್ಕೆ ಸ್ನಾನ ಮಾಡಿಸಿ, ಮೈ ಒರೆಸಿ ಮತ್ತೆ ವಾಪಸ್ ತಗೊಂಡ್‌ಬಂದು ಅದರ ಗೂಡಲ್ಲೇ ಇಟ್ಟು ಹೋಗಿದಾನೆ!'
ಸ್ಕ್ಯಾಂಡಲ್‌ವುಡ್
ನಮ್ಮ ಕನ್ನಡ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ನೋಡುತ್ತಿಲ್ಲ ಎಂಬ ಕಾರಣಕ್ಕೋ ಏನೋ, ನಮ್ಮ ಸಿನಿಮಾ ಮಂದಿಗೆ ತಮ್ಮ ಸಿನಿಮಾಗಳನ್ನು ಇತರ ಸಿನಿಮಾರಂಗದ ದೊಡ್ಡ ಸ್ಟಾರ್‌ಗಳಿಗೆ ತೋರಿಸುವ ಅಭ್ಯಾಸ ಆಗಿಬಿಟ್ಟಿದೆ. ಪರಭಾಷೆಯ ಸ್ಟಾರ್ ಒಬ್ಬರು ಇವರ ಸಿನಿಮಾ ನೋಡಿದರೆ ಅದೇ ಅವರ ಚಿತ್ರಕ್ಕೆ ದೊಡ್ಡ ಪ್ರಚಾರ. ಇಡೀ ತಂಡಕ್ಕೆ ತಾವು ಸಿನಿಮಾ ಮಾಡಿದ್ದು ಸಾರ್ಥಕ ಎಂಬ ಭಾವ. ಇತ್ತೀಚೆಗೆ ಇಂಥದ್ದೇ ಒಂದು ಚಿತ್ರವನ್ನು ತಮಿಳಿನ ಸ್ಟಾರ್ ಸೂರ್ಯ ನೋಡಿದರಂತೆ, ತುಂಬಾ ಹೊಗಳಿದರಂತೆ, ಇಂಥ ಸಿನಿಮಾಗಳು ತಮಿಳಿನಲ್ಲೂ ಬರಬೇಕು ಎಂದೆಲ್ಲಾ ಹೇಳಿದರಂತೆ ಎಂಬ ಸುದ್ದಿ ಆಗಿತ್ತು. ಆದರೆ ಈ ವಿಷಯದ ಅಸಲೀಯತೆಯ ಬಗ್ಗೆ ಮಾತನಾಡುವ ಪ್ರತ್ಯಕ್ಷದರ್ಶಿಗಳಾದ ಕೆಲವು ಅಸಿಸ್ಟೆಂಟ್ ಹುಡುಗರು ಹೇಳುವಂತೆ ಅವರು ಸೂರ್ಯಂಗೆ ತೋರಿಸಿದ್ದು ಸಿನಿಮಾ ಅಲ್ಲ, ಸಿನಿಮಾದ ಟ್ರೈಲರ್, ಅದೂ ಕೂಡ ಲ್ಯಾಪ್‌ಟಾಪ್‌ನಲ್ಲಿ. ತಮ್ಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದ ಸ್ಟುಡಿಯೋದಲ್ಲಿ ಸೂರ್ಯ ಕೂಡ ಇರುವುದು ಗೊತ್ತಾಗಿ, ಅವರು ಎದುರಿಗೆ ಕಂಡಿದ್ದೇ ನೆಪ ಮಾಡಿಕೊಂಡು, 'ಸರ್, ಒಂದ್‌ನಿಮಿಷ' ಎಂದು ಹೇಳಿ 2 ನಿಮಿಷದ ಟ್ರೈಲರ್ ತೋರಿಸಿ, ಸಿನಿಮಾ ಫಸ್ಟ್‌ಕಾಪಿ ತೆಗೆಯುವ ಮುಂಚೆಯೇ, ಸೂರ್ಯ ನಮ್ಮ ಸಿನಿಮಾ ನೋಡಿದ್ರು ಎಂದು ಸುದ್ದಿ ಹಬ್ಬಿಸುತ್ತಿರುವವರ ಸ್ಕಿಲ್ ನೋಡಿ, ಇದು ಸೂರ್ಯಂಗೆ ಟಾರ್ಚಾ, ಟಾರ್ಚರ್ರಾ ಎನ್ನುತ್ತಿದೆ ಗಾಂಧಿನಗರ.
ಡಬ್ಕುಡಬಲ್ ತುದಾಂಡಲ್...
ಟೇಬಲ್ ಕೆಳಗೆ ಕೊಡುವ ಲಂಚಕ್ಕೆ ಅಧಿಕೃತವಾಗಿ ಇಡಬಹುದಾದ ಹೆಸರು
ಡೌನ್ ಪೇಮೆಂಟ್!
ಹುಡುಗರಿಗೆ ಕೈ ಕೊಡಲು ಹುಡುಗಿಯರಿಗಿರುವ ಎರಡು ಪಾಲಿಸಿಗಳು
1 ಐ ಲವ್ ಮನಿ.
2 ಐ ಲವ್ ಮೆನಿ!
ಆಫೀಸಲ್ಲಿ ಈ ವರ್ಷ ಯಾರಿಗೂ ಸಂಬಳ ಜಾಸ್ತಿ ಮಾಡಲ್ಲ ಅಂತ ಸುದ್ದಿ ಬಂತು. ಕ್ಯಾಬಿನ್ ಒಳಗೆ ಹೋದ ಗುಂಡ ಬಾಸ್‌ಗೆ ಹೇಳಿದ,
'ಯಾರಿಗ್ ಮಾಡ್ತಿರೋ ಇಲ್ವೋ ಗೊತ್ತಿಲ್ಲ. ನಂಗೆ ಸಂಬಳ ಜಾಸ್ತಿ ಮಾಡಿ'.
'ಯಾರಿಗೂ ಮಾಡ್ತಿಲ್ಲ. ನಿಂದೇನ್ ಸ್ಪೆಷಲ್ ಆಗಿ?'.
'ಅವೆಲ್ಲ ಬೇಡ, ಈಗೇನ್ ನಂಗೆ ಸಂಬಳ ಜಾಸ್ತಿ ಮಾಡ್ತೀರಾ, ಇಲ್ಲಾ ಹೊರಗಡೆ ಹೋಗಿ ಎಲ್ಲ ಕಲೀಗ್ಸ್ ಹತ್ರ 'ನಂಗೆ ಸಂಬಳ ಜಾಸ್ತಿ ಮಾಡಿದಾರೆ' ಅಂತ ಹೇಳ್ಲಾ?'
ಇಂಗ್ಲಿಷ್ ಬಾರದ ಸರ್ದಾರ್ಜಿ ಪಾರ್ಕಿನ ಬೆಂಚಿನ ಮೇಲೆ ಆಯಾಸ ನೀಗಿಸಿಕೊಳ್ಳುತ್ತ ಮಲಗಿದ್ದ. ಅಲ್ಲಿಗೆ ಬಂದ ಇಂಗ್ಲೆಂಡ್‌ನ ಟೂರಿಸ್ಟ್ ಒಬ್ಬ ಅವನನ್ನು ಕೇಳಿದ 'ಆರ್ ಯೂ ರಿಲ್ಯಾಕ್ಸಿಂಗ್?'. ಅದಕ್ಕೆ ಸರ್ದಾರ್ಜಿಯ ಉತ್ತರ 'ನೋ ಐ ಆ್ಯಮ್ ಬಂಟಾ ಸಿಂಗ್'. 'ಫನ್ನಿ ಗೈ' ಎಂದು ನಕ್ಕ ಟೂರಿಸ್ಟ್ ಮುಂದೆ ಹೋದ. ಅವನು ಏಕೆ ನಕ್ಕ ಎಂದು ಬಂಟಾಸಿಂಗ್‌ಗೆ ಅರ್ಥವಾಗಲಿಲ್ಲ. ಮಲಗಿದ್ದಲ್ಲಿಂದ ಎದ್ದು ಹೊರಟ. ಸ್ವಲ್ಪ ದೂರದಲ್ಲಿ ಯಾರೋ ಇನ್ನೊಬ್ಬ ಮತ್ತೊಂದು ಬೆಂಚಿನ ಮೇಲೆ ಮಲಗಿದ್ದು ಕಾಣಿಸಿತು. ಅವನ ಬಳಿ ಹೋಗಿ ಅನುಮಾನದಿಂದಲೇ ಕೇಳಿದ ಸರ್ದಾರ್ಜಿ 'ಆರ್ ಯೂ ರಿಲ್ಯಾಕ್ಸಿಂಗ್?'. ಅದಕ್ಕೆ ಅವನು 'ಎಸ್, ಎಸ್, ಐ ಆ್ಯಮ್ ರಿಲ್ಯಾಕ್ಸಿಂಗ್' ಅಂದ. ಅದನ್ನು ಕೇಳಿ ಬಂಟಾಸಿಂಗ್ ಹೇಳಿದ 'ಅಯ್ಯೋ ಮಂಗ್‌ನನ್‌ಮಗನೆ ನೀನ್ ಇಲ್ಲಿ ಬಂದು ಮಲ್‌ಕೊಂಡಿದೀಯಾ, ಅಲ್ಲಿ ನಿನ್ ಹುಡುಕ್ಕೊಂಡು ಯಾರೋ ಬಂದಿದ್ರು'!
-ಹರಿ
harikannadaprabha@gmail.com