ಅಂಕಣಗಳು

ವೈಭವೀಕರಣ ಬೇಡ

Published On :

ರವಾಂಡದ ಗೊರಿಲ್ಲಾಗಳ ಬಗೆಗಿನ ಲೇಖನವನ್ನು ವಿಶ್ವೇಶ್ವರಭಟ್ಟರು ಬಹು ಸೊಗಸಾಗಿ, ವಿನೂತನವಾಗಿ ಓದುಗರಿಗೆ ಕಟ್ಟಿ ಕೊಡುತ್ತಿದ್ದಾರೆ. ಭಟ್ಟರಿಗೆ ತುಂಬು ಹೃದಯದ ಥ್ಯಾಂಕ್ಸ್. ಈ ಲೇಖನವನ್ನೋದಿದವರಿಗೆ ತಾವೇ ಸ್ವತಃ ರವಾಂಡದ ಗೊರಿಲ್ಲಾ ಕಾಡಿಗಿಳಿದು ನಡೆದಾಡಿದ ಅನುಭವ ಆಗದೇ ಇರದು.
-ಎನ್.ಡಿ. ಕಾರಂತ, ಮೈಸೂರು, 8105530343

ಜೂನ್ 24ರ ಕನ್ನಡಪ್ರಭ ದಿನಪತ್ರಿಕೆಯ ಬೈಟು ಕಾಫಿಯಲ್ಲಿ ಸಂಸಾರದ ಶುಭ ಸಮಾಚಾರ ಸರಿಗಮವಿಜಿ ನಟಿಸಿ ನಿರ್ದೇಶಿಸಿರುವ 'ಸಂಸಾರದಲ್ಲಿ ಸರಿಗಮ' ನಾಟಕದ ಬಗ್ಗೆ ಪೂರ್ಣ ಮಾಹಿತಿ ನೀಡಿರುವ ಸಾವಿರದ ಸರಿಗಮ ಲೇಖನ ತುಂಬಾ ಮೆಚ್ಚುಗೆಯಾಯಿತು. ಈ ನಾಟಕ 200 ಪ್ರದರ್ಶನಗಳತ್ತ ದಾಪುಗಾಲಿಡುತ್ತಿರುವ ಈ ಶುಭ ಸಂದರ್ಭಕ್ಕೆ ಈಗಿನ ದೂರದರ್ಶನ, ಸಿನಿಮಾಗಳ ಪೈಪೋಟಿ ನಡುವೆಯೂ ನಾಟಕಕ್ಕೆ ರಂಗಾಸಕ್ತರ ಪ್ರೋತ್ಸಾಹ ಇರುವುದು ನಿಜಕ್ಕೂ ಅಚ್ಚರಿಯೇ ಸರಿ. ಇಂತಹ ಅಪೂರ್ವ ಮಾಹಿತಿ ಒದಗಿಸಿದ ಲೇಖಕರಿಗೂ ಪ್ರಕಟಗೊಳಿಸಿರುವ ಕನ್ನಡಪ್ರಭ ಪತ್ರಿಕಾ ಬಳಗಕ್ಕೂ ಅಭಿನಂದನೆಗಳು.
-ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 94491- 30531

ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ಈ ನಡುವೆ ಕನ್ನಡಪ್ರಭ ಜಾಸ್ತಿ ಟ್ಟಜ್ಝಜಿಣ ಆಗುತ್ತಿದೆ. ಮೋದಿ ಒಳ್ಳೆಯ ನಾಯಕ ನಿಜ. ಆದರೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯ ಕೊಡುತ್ತಿದ್ದೀರ ಅಂತ ತುಸು ಬೇಸರ. ಕನ್ನಡಪ್ರಭ ಕನ್ನಡಿಯಾಗಿ ಇರಬೇಕೆ ಹೊರತು ಛ್ಝಿಛಡಜಜ  ಆಗಿರಬಾರದೆನ್ನುವುದು ನಮ್ಮ ಆಶಯ.
-ಡಿ. ಎಚ್. ಪವನ್‌ಕುಮಾರ್ dhpavan@gmail.com

ಜನಮನ ಗೆದ್ದ ಕನ್ನಡ ದಿನಪತ್ರಿಕೆಯಾದ ಕನ್ನಡಪ್ರಭಕ್ಕೆ ನನ್ನ ನಮಸ್ಕಾರಗಳು. ನಿಮ್ಮ ಪತ್ರಿಕೆಯಲ್ಲಿ ನನಗೆ ಇಷ್ಟವಾದವುಗಳೆಂದರೆ ಪಂಚ್‌ಮುಖಿ, ಬಾಣಭಟ್ಟರ ಕೇಳ್ರಪ್ಪೋ ಕೇಳಿ, ಬೈಟು ಕಾಫಿ, ಸಾಪ್ತಾಹಿಕ ಪ್ರಭದ ಎಲ್ಲ ವಿಷಯಗಳೂ ನನಗೆ ಇಷ್ಟ. ನೀವು ಎಲ್ಲ ಪತ್ರಿಕೆಗಳಿಗಿಂತ ಡಿಫರೆಂಟ್ ಆಗಿ ಮಾಡ್ತೀರಾ. ಅದೇ ನನಗೆ ಹಿಡಿಸೋದು. ಇದೇ ರೀತಿ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪ್ರಶ್ನೆ ಉತ್ತರ ಪ್ರಕಟಿಸಿ ಅಂತ ಕೇಳಿಕೊಳ್ಳುತ್ತೇನೆ (ಎಸ್ಸೆಸ್ಸೆಲ್ಸಿ, ಪಿಯುಸಿ).
-ಭರತ ಬ. ಹಣಮಂತಗೋಳ, ಗೋಕಾಕ, 9060 317001

ಕನ್ನಡಪ್ರಭ ಸಾಪ್ತಾಹಿಕ ಪ್ರಭ (30 ಜೂನ್ 13ರ) ಸಂಚಿಕೆಯು ಬರೆಯುವವರಿಗೆ ಪ್ರೋತ್ಸಾಹ, ಪ್ರೇರಣೆ ನೀಡುವ ಸಂಚಿಕೆಯಾಗಿತ್ತು. ಪೊಲೀಸರ ಸಾಹಿತ್ಯ ಬೇಟೆ ಮತ್ತು ಕವಿರಾಜ ಮಾರ್ಗ ಎರಡು ಅಮೂಲ್ಯ ಬರಹಗಳನ್ನು ಕಟ್ಟಿಕೊಟ್ಟ ಕೀರ್ತಿ ಕೊಲ್ಗಾರ್‌ಗೆ ಕೃತಜ್ಞತೆಗಳು.
-ಪ್ರೊ. ಐ.ಆರ್. ಮಠ್ ನಿವೃತ್ತ, ಅರಸೀಕೆರೆ,
ಹಾಸನ ಜಿಲ್ಲೆ, 996460 3772.

ಹಿರಿಯ ಚಿಂತಕರಾದ ಡಾ. ಎಂ. ಚಿದಾನಂದಮೂರ್ತಿ ಅವರು, ತಮ್ಮ ಕಿರುಲೇಖನದಲ್ಲಿ (ಜೂನ್ 24) ಭಾರತದ ಭವಿತವ್ಯದ ಚಿತ್ರಣವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಅಲ್ಲದೇ ಮುಖ್ಯವಾಗಿ ಮಾನವತಾವಾದಿ ಬಸವಣ್ಣನವರ ಕಾರ್ಯಕ್ಷೇತ್ರ ಒಳಗೊಂಡು ಅನೇಕ ಶರಣರ ಪವಿತ್ರ ಸ್ಥಳಗಳು ಹೇಗೆಲ್ಲಾ ಮುಸ್ಲಿಂರ ವಶವಾಗಿವೆ ಎಂಬ ಸಂಗತಿಗಳ ಕುರಿತು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತದ ಜನರ ಮನೋಭಾವವನ್ನು ತಾಳೆ ಹಾಕಿ ಗ್ರಹಿಸಬೇಕಾದ ಅವಶ್ಯವಿದೆ. ಅದೆಂದರೆ ಭಾರತದ ಬಹುತೇಕ ಸಂದರ್ಭಗಳಲ್ಲಿ ಅನೇಕತೆಯಲ್ಲಿ ಏಕತೆ ಎಂಬ ಘೋಷ ವಾಕ್ಯಕ್ಕೆ ಜೈಕಾರ ಹಾಕುತ್ತ, ಜಾತಿ ವಿಷಯದಲ್ಲಿ ಮಾತ್ರ ಜಾತ್ಯತೀತ ಸೋಗಿನೊಂದಿಗೆ ವ್ಯಾಘ್ರವಾಗುತ್ತಾ, ಭವಿಷ್ಯ ಭಾರತದಲ್ಲಿ ಜಾತಿ ಎಂಬುದು ಎಂತಹ ಬದಲಾವಣೆಗಳಿಗೆ ಒಳಪಡಬಹುದು ಎನ್ನುವವರೆಗೆ ಚರ್ಚೆಯಾಗುತ್ತಿದೆ. ಆ ಮೂಲಕ ಒಬ್ಬರು ಮತ್ತೊಬ್ಬರನ್ನು ಹಳಿಯುತ್ತಾ ಮಾನವ ಸಂಬಂಧಗಳು ಮತ್ತೆ ಮತ್ತೆ ಬಿಗಡಾಯಿಸಲು ವೇದಿಕೆ ಒದಗಿಸುತ್ತಿದೆ. ಯಾವ ರೀತಿ ಲೆಕ್ಕ ಹಾಕಿದರೂ ಜಾತಿ ಎಂಬುದು ಇಲ್ಲದಿದ್ದರೂ ಮನುಷ್ಯ ಮತ್ತೊಬ್ಬನ ಅವಕೃಪೆಗೆ, ಮೋಸ, ವಂಚನೆಗೆ, ಅವಮಾನ, ಹಲ್ಲೆಗಳಿಗೆ ಮುಂತಾದ ಋಣಾತ್ಮಕ ಅಂಶಗಳಿಗೆ ಒಳಗಾಗುವುದು ತಪ್ಪದ ಸಂಗತಿ. ಈ ಸಂದರ್ಭದಲ್ಲಿ ಚಿದಾನಂದಮೂರ್ತಿಯವರು ಅವೆಲ್ಲಕ್ಕೂ ಉತ್ತರ ಎಂಬಂತೆ "ಸಂಪೂರ್ಣ ನಿಸ್ಸಹಾಯಕ ಅಲ್ಪಸಂಖ್ಯಾತ ಹಿಂದುಗಳು" ಎಂಬಲ್ಲಿ ಅರ್ಥಪೂರ್ಣವಾಗಿ ತೆರೆದಿಟ್ಟಿದ್ದಾರೆ. ಅದೇ ಪರಮ ಸತ್ಯ ಎಂದರೂ ಉತ್ಪ್ರೇಕ್ಷೆಯಲ್ಲ ಮತ್ತು ಅನೇಕರಿಗೆ ಖುಷಿ ಕೊಡುವ ಸಂಗತಿಯೂ ಆಗಿದೆ.
-ಜಾವಗಲ್ ಕೃಷ್ಣಶರ್ಮ

ಅಭಯಚಂದ್ರ ಜೈನ್‌ಗೆ ಧರ್ಮ ಮುಖ್ಯವೋ, ಸಂವಿಧಾನವೋ? ಎಂಬ ಲೇಖನದಲ್ಲಿ (21.6.13) ಪ್ರಜಾಪ್ರತಿನಿಧಿಗಳ ಕರ್ತವ್ಯದ ಮಹತ್ವವನ್ನು ಉಗಮ ಶ್ರೀನಿವಾಸ್‌ರವರು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ರಾಜಕಾರಣಿಗೆ ಸಾರ್ವಜನಿಕ ಸೇವೆ ಮುಖ್ಯವೇ ಹೊರತು ಒಂದು ಸಮುದಾಯದ ಧರ್ಮವಲ್ಲ ಎಂಬುದು ಲೇಖನದ ತಿರುಳು.
-ಚಿಕ್ಕಣ್ಣ ಉಪನ್ಯಾಸಕ, ಜಿಜೆಸಿ ಕೊರಟಗೆರೆ, ತುಮಕೂರು ಜಿಲ್ಲೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.