ಅಂಕಣಗಳು

ಆಟದ ಭಾಗ ಗ್ಲಾಮರ್ ಇದಕ್ಕೇಕೆ ತಕರಾರು?

Published On :

ಕನ್ನಡಪ್ರಭದಲ್ಲಿ ಜೂನ್ 22ರಂದು 'ಇಫ್ತಾರ್ ಕೂಟ- ಟೋಪಿ' ವಿಷಯವಾಗಿ ಬೆತ್ತಲೆ ಪ್ರಪಂಚದ ವಿಭಾಗದಲ್ಲಿ ಪ್ರಕಟಿಸಿರುವ ಲೇಖನ ಎಲ್ಲಾ ಜನಾಂಗದವರ ಕಣ್ಣು ತೆರೆಸುವಂಥದ್ದು. ಇದರ ಇಂಗ್ಲಿಷ್ ಪ್ರತಿಯನ್ನು ತಾವು ನಾಡಿನ ಪ್ರಮುಖ ಇಂಗ್ಲಿಷ್ ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸುವಂತೆ ಮಾಡಿದರೆ, ಕಪಟ ನಾಟಕ ಮಾಡುವ "ಸೆಕ್ಯುಲರ್‌"ವಾದಿಗಳ ನಿಜವಾದ ಬಣ್ಣ ಬಯಲಾಗುತ್ತದೆ.
-ಎಸ್. ಕೆಂಡಗಣ್ಣಸ್ವಾಮಿ, ನಿವೃತ್ತ ನಿರ್ದೇಶಕರು, ಪ್ರಸಾರಾಂಗ ಬೆಂಗಳೂರು, ಮಹಾಲಕ್ಷ್ಮಿ ಲೇಔಟ್

ಜೂನ್ 23ರ ಕನ್ನಡಪ್ರಭದ ಗೋಡೆ ಬರಹ ಅಂಕಣದಲ್ಲಿ ಪ್ರಕಟವಾದ ದಾವಣಗೆರೆಯ ಕೆ.ಶ್ರೀನಿವಾಸರಾವ್‌ರವರ ಪತ್ರಕ್ಕೆ ನನ್ನ ಪ್ರತಿಕ್ರಿಯೆ; ಅವರು ಕ್ರೀಡಾಪುಟದಲ್ಲಿ ಪ್ರಕಟವಾಗುವ ಮಹಿಳಾ ಟೆನಿಸ್ ಆಟಗಾರ್ತಿಯರ ಫೋಟೋಗಳ ಬಗ್ಗೆ ಬರೆಯುತ್ತಾ ಪತ್ರಿಕಾ ಛಾಯಾಗ್ರಾಹಕರನ್ನು ದೂರಿರುವುದು ಸರಿಯಲ್ಲ. ಏಕೆಂದರೆ, ಮಹಿಳೆಯರ ಓಪನ್ ಟೆನಿಸ್ ಆಟ ಕೇವಲ ಕ್ರೀಡೆ ಮಾತ್ರ ಆಗಿರದೆ ಆಟಗಾರ್ತಿಯರು ಟೆನಿಸ್-ಅಭಿಮಾನಿಗಳಿಗೆ ಕೇವಲ ತಮ್ಮ ಆಟವನ್ನು ಮಾತ್ರ ಪ್ರದರ್ಶಿಸದೇ, 'ಮೈಮಾಟ'ವನ್ನೂ ಸುಂದರವಾಗಿ ಪ್ರದರ್ಶಿಸುತ್ತಾ ತಮ್ಮ ಇಮೇಜನ್ನು ಹೆಚ್ಚಿಸಿಕೊಳ್ಳಲು ಪಾರದರ್ಶಕ "ಶಾರ್ಟ್ ಸ್ಕರ್ಟ್‌" ಹಾಕಿಕೊಳ್ಳುವ 'ಗ್ಲಾಮರ್‌' ಜಗತ್ತು ಕೂಡಾ ಆಗಿದೆ. ಆಟ ಆಡುವಾಗ ಕೆಲವೊಂದು ರೋಚಕ ಕ್ಷಣಗಳನ್ನು, ಶಾಟ್‌ಗಳನ್ನು ಸೆರೆ ಹಿಡಿಯಲು ಕಾದು ಕುಳಿತುಕೊಳ್ಳುವ ಫೋಟೋಗ್ರಾಫರ್ ತನ್ನ ಕೆಮೆರಾದಲ್ಲಿ ಆಟದ ಭಂಗಿಗಳನ್ನು ಕ್ಲಿಕ್ಕಿಸುವ ಪ್ರಯತ್ನ ಮಾಡುತ್ತಾನೆಯೆ ವಿನಃ ಅವನ ಕಣ್ಣುಗಳು ಆಟಗಾರ್ತಿಯ ಅಂಗಸೌಷ್ಟವದ ಮೇಲೆ ಇರುವುದಿಲ್ಲ.
-ಫ್ಯಾಷನ್ ಡಿಸೈನರ್ ಮಧು, ಹಾಸನ,
99457 -37427

ಕನ್ನಡಪ್ರಭದ ಪ್ರತಿನಿತ್ಯದ ಅಂಕಣಗಳು ಯಾವಾಗಲೂ ಉತ್ತಮ ಮಾಹಿತಿಯನ್ನೊಳಗೊಂಡಿರುತ್ತವೆ ಮತ್ತು ಆ ಲೇಖಕರೂ ಅಷ್ಟರಮಟ್ಟಿಗೆ ನಮಗೆ ಚಿರಪರಿಚಿತ ಹಾಗೂ ಅವರ ಬಗೆಗಿನ ಕಿರುಮಾಹಿತಿಯ ಅವಶ್ಯಕತೆಯೂ ಇರುವುದಿಲ್ಲ. ಆದರೆ ಕೆಲವೊಮ್ಮೆ ಹೊಸಬರು ಬರೆಯುವ ಲೇಖನಗಳ ಲೇಖಕರು ಯಾರು? ಅವರೇನು ಪತ್ರಕರ್ತರಾ? ಸಾಹಿತಿಗಳಾ? ಸಮಾಜ ಸೇವಕರಾ? ಯಾರವರು? ಎಂಬ ಪ್ರಶ್ನೆ ಕಾಡುತ್ತದೆ. ಆದ್ದರಿಂದ, ಹೊಸಬರ ಲೇಖನಗಳ ಜೊತೆಗೆ ಅವರ ಕಿರುಪರಿಚಯವೂ ಇದ್ದರೆ ಚೆನ್ನ ಎಂಬುದು ನನ್ನ ಅಭಿಪ್ರಾಯ.
-ಬಿ. ಸೋಮಶೇಖರ್, ಸುರಪುರ
9632234467

ಭಟ್ಟರೆ ತಮ್ಮ ರವಾಂಡಾ ಡೈರಿ ವರದಿ ಓದಿ ಸಂತೋಷವಾಯಿತು. ಮೊದಲಿಗೆ ತಮಗೆ ಇಂತಹ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಶುಭಾಷಯಗಳು. ಗೊರಿಲ್ಲಾಗಳಿಗೆ ನಾಮಕರಣ ಎಂದ ತಕ್ಷಣ ಆಶ್ಚರ್ಯವಾದರೂ ಅದರ ಮೂಲ ಉದ್ದೇಶ ಓದಿದ ಮೇಲೆ ಒಂದು ಒಳ್ಳೆಯ ಕಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೆ ಪೂರ್ಣ ಸಾರಾಂಶದಲ್ಲಿ ಅಲ್ಲಿನ ಆಚಾರ-ವಿಚಾರಗಳು, ಪ್ರಗತಿ ಕಾರ್ಯಗಳನ್ನು ಬಹಳ ರೋಚಕವಾಗಿ ಕಟ್ಟಿ ಕೊಟ್ಟಿದ್ದೀರಿ. ಇದರಿಂದ ನಮ್ಮ ದೇಶದ ಜನಕ್ಕೂ ಅವರಿಗೂ ಇರುವಂತಹ ವ್ಯತ್ಯಾಸ ತಿಳಿಯುತ್ತದೆ. ನಿಜಕ್ಕೂ ನಾವು ಅವರಿಂದ ಕಲಿಯುವುದು ಸಾಕಷ್ಟಿದೆ ಅನ್ನಿಸುತ್ತದೆ. 'ಅನ್ನದಾತರ ಆತ್ಮಕತೆ' ತುಂಬಚೆನ್ನಾಗಿದೆ. ವ್ಯವಸಾಯದಿಂದ ಬೇಸತ್ತ ರೈತ ಅದರ ಸಹವಾಸ ಬೇಡವೆಂದು ದೂರವಾಗುತ್ತಿರುವ ಇಂತಹ ಸನ್ನಿವೇಶದಲ್ಲಿ ಈ ವರದಿಯು ರೈತರಿಗೆ ವ್ಯವಸಾಯದಲ್ಲಿ ಮುಂದುವರೆಯಲು ಮಾರ್ಗದರ್ಶನ, ಸ್ಫೂರ್ತಿ ನೀಡಿದಂತಾಗುತ್ತಿದೆ. ಅದು ಹಾಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಇಲ್ಲಿ 'ತಪ್ಪಾಯ್ತು ತಿದ್ಕೋತೀವಿ' ಅಂಕಣದ ಬಗ್ಗೆ ಪ್ರಸ್ತಾಪಿಸಲೇಬೇಕು. ಆತ್ಮವಿಮರ್ಶೆ ಎಂಬುದು ಎಲ್ಲಾ ವ್ಯಕ್ತಿಗಳಿಗೂ ಮುಖ್ಯ. ಇದಕ್ಕೆ ಮಾಧ್ಯಮಗಳು ಹೊರತಲ್ಲ ಎಂಬ ಆಶಯದಿಂದ ಈ ಅಂಕಣ ತುಂಬ ಮಹತ್ವ ಪಡೆದುಕೊಂಡಿದೆ. ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಸ್ವಭಾವ ಪ್ರಶಂಸನೀಯ.
-ಮಂಜ ಎನ್, 374 ಬೆಳವಾಡಿ ಗ್ರಾಮ, ಇಲವಾಲ (ಹೋ) , ಮೈಸೂರು ತಾ., ಮೈಸೂರು.,ಮೊ. 9986 925428

ಆಕರ್ಷಕ ಶೀರ್ಷಿಕೆಗಳನ್ನು ಕೊಡುವ ಚಾಕಚಕ್ಯತೆಯನ್ನು ಕನ್ನಡಪ್ರಭ ಮುಂದುವರಿಸಿಕೊಂಡು ಬಂದಿರುವುದು ಸಂತೋಷ. 'ಅಡ್ಡವಾಣಿ', 'ಹಠವಾಣಿ', 'ಅಡ್ಜಸ್ಟ್‌ವಾಣಿ' ಇವೆಲ್ಲವೂ ಆಕರ್ಷಕ ಶೀರ್ಷಿಕೆಗಳೆ. ಈ ಟ್ರೆಂಡ್ ಹೀಗೆಯೆ ಮುಂದುವರಿಯಲಿ.
-ರಾಘವೇಂದ್ರ ಜೋಯಿಸ್, ಮೈಸೂರು 9449494682

ಕನ್ನಡಪ್ರಭ ಬಳಗದ ಲೇಖಕರ ಬರಹಗಳೆಲ್ಲವೂ ಉತ್ತಮವಾಗಿಯೆ ಮೂಡಿಬರುತ್ತಿವೆ. ಆದರೆ ರಾಜಕೀಯ ಕಡಿಮೆ ಮಾಡಿ ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಹೆಚ್ಚಿನ ಜಾಗ ಕೊಡಿ ಎಂಬ ಕೋರಿಕೆ.
-ಚಾಂದ್‌ಪಾಶಾ, ಕೊಪ್ಪಳ 9731523622

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.