ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಕುತಂತ್ರ!
ಭಾರತ ಹಲವು ಜಾತಿ, ಧರ್ಮಗಳನ್ನು ಹೊಂದಿರುವ ಬೃಹತ್ ರಾಷ್ಟ್ರವಾಗಿದ್ದರೂ ಪರಮಾಧಿಕಾರ ಸ್ಥಿರವಾಗಿರುವುದು, ಈ ರಾಷ್ಟ್ರದ ಸಂವಿಧಾನ ಶ್ರೇಷ್ಠತೆಯಿಂದ ಮಾತ್ರ ಎಂಬುದು ನಿರ್ವಿವಾದ. ಎಲ್ಲಿಯವರೆಗೆ ಸಂವಿಧಾನ, ಸಾಂವಿಧಾನಿಕ ಸಂಸ್ಥೆಗಳು ಗಟ್ಟಿಯಾಗಿರುತ್ತವೆಯೋ, ಅಲ್ಲಿಯವರೆಗೆ ಮಾತ್ರ ರಾಷ್ಟ್ರದ ಸರ್ವಕ್ಷೇತ್ರಗಳ ಸ್ಥಿರತೆ ಸಾಧ್ಯ ಎಂಬುದು ಸಾರ್ವತ್ರಿಕ ಸತ್ಯ. ಆದರೆ ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರತಿಯೊಂದು ಕಾಲಘಟ್ಟದಲ್ಲಿಯೂ, ತಮ್ಮ ರಾಜಕೀಯ ಅನುಕೂಲಕ್ಕಾಗಿ ದುರ್ಬಲಗೊಳಿಸುವ ಯತ್ನ ನಡೆದೇ ತೀರಿದೆ. ಉದಾ: 1970ರ ದಶಕದಲ್ಲಿ ಹಲವು ಬಗೆಯ ಅನಧಿಕೃತ ಸುಗ್ರೀವಾಜ್ಞೆಗಳ ಮೂಲಕ(111ನೇ ವಿಧಿ) ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಕುಬ್ಜಗೊಳಿಸಿದ್ದಕ್ಕಾಗಿ, ನ್ಯಾಯಮೂರ್ತಿ ಪಿ.ಎಂ ಭಗವತಿಯವರು ಭಾರತದಲ್ಲಿ ಸಂವಿಧಾನವನ್ನು ಅತ್ಯಾಚಾರ ಮಾಡಲಾಗುತ್ತಿದೆ ಎಂಬ ಉಗ್ರ ಹೇಳಿಕೆಯನ್ನು ನೀಡಿದ್ದರು.
1980ರ ಕಾಲಘಟ್ಟದಲ್ಲಿ ಮೊದಲ ಬಾರಿಗೆ ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ಮಹತ್ವ ಏನೆಂಬುದನ್ನು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ರವರು ತೋರಿಸಿದ್ದರು. ಅವರ ನಡೆಯಿಂದ ತೀವ್ರ ಮುಜುಗರಕ್ಕೆ ಒಳಗಾದ ರಾಜಕೀಯ ಪಕ್ಷಗಳು, 1989ರಲ್ಲಿ ದಿನೇಶ್ ಗೋಸ್ವಾಮಿ ಸಮಿತಿ ನೇಮಕ ಮಾಡುವ ಮುಖೇನ, ಏಕಸದಸ್ಯ ಪೀಠವನ್ನು ತ್ರಿಸದಸ್ಯ ಪೀಠವನ್ನಾಗಿ ಮಾಡುವ ಮುಖಾಂತರ ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ (324(5)ನೇ ವಿಧಿ) ಮಿತಿ ಹೇರಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಿಕ ವಿಮರ್ಶಾಧಿಕಾರ ಹಾಗೂ ಸಲಹಾ ಅಧಿಕಾರ (143 ನೇ ವಿಧಿ) ವನ್ನು ಪ್ರಶ್ನೆ ಮಾಡುತ್ತಲೇ ಬಂದಿದ್ದಾರೆ. 1967ರ ಗೋಲಕ್ ನಾಥ್ ಪಂಜಾಬ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂಸತ್ತಿಗೆ, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ತಿದ್ದುಪಡಿಮಾಡಲು ಸಾಧ್ಯವಿಲ್ಲ ಎಂಬ ತೀರ್ಪು ನೀಡಿದಾಗ, ಸಂಸತ್ತಿನ ಸಾರ್ವಭೌಮತೆಯ ಪುಷ್ಟೀಕರಣಕ್ಕೆ 1971 ರಲ್ಲಿ 24ನೇ ತಿದ್ದುಪಡಿಮಾಡಿ, ಸಂವಿಧಾನದ 3ನೇ ಭಾಗ ಮೂಲಭೂತಗಳನ್ನು ತಿದ್ದುಪಡಿ ವಿಧಿ 368ರ ಅಡಿಯಲ್ಲಿ ತರಲಾಯಿತು.
ಇದೀಗ, 11ನೇ ಮಹಾ ಲೆಕ್ಕಪಾಲಕರಾಗಿದ್ದ ವಿನೋದ್ ರಾಯ್ ಅವರು, ಸಿಎಜಿ ಹುದ್ದೆಯ '148(1)ನೇ ವಿಧಿ' ಮಹತ್ವವನ್ನು, ಅದರ ಅಧಿಕಾರ ವ್ಯಾಪ್ತಿಯನ್ನು ಜನಸಾಮಾನ್ಯರಿಗೆ ತಿಳಿಯಪಡಿಸಿದರು. 2ಜಿ ಸ್ಪೆಕ್ಟ್ರಂ, ಕಾಮನ್ ವೆಲ್ತ್ ಹಗರಣ, ಕಲ್ಲಿದ್ದಲು ಹಗರಣಗಳ ಬಗ್ಗೆ ವಾಸ್ತವ ವರದಿ ನೀಡಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಇದರ ಹಿನ್ನಲೆಯಲ್ಲಿ ಅಣ್ಣ ಹಜಾರೆಯವರ ನೇತೃತ್ವದಲ್ಲಿ ಬೃಹತ್ ಭ್ರಷ್ಟಾಚಾರ ವಿರೋಧಿ ಹೋರಾಟವು ಆರಂಭವಾಯಿತು. ಈ ಸಂದರ್ಭದಲ್ಲಿ ಹಲವು ರಾಜಕಾರಣಿಗಳು ಪಕ್ಷ ಭೇದ ಮರೆತು, ಸಿಎಜಿ ಸಂಸ್ಥೆಯ ಔಚಿತ್ಯವನ್ನೇ ಪ್ರಶ್ನೆ ಮಾಡಿದ್ದರು. ಮಾಜಿ ಲೆಕ್ಕ ಪಾಲಕ ವಿ.ಕೆ.ಶುಂಗ್ಲೂರವರ ಸಮಿತಿಯ ಶಿಫಾರಸ್ಸಿನ ಮೇರೆಗೆ, ಸಿಎಜಿಯನ್ನು ತ್ರಿಸದಸ್ಯ ಪೀಠ ಮಾಡಹೊರಟಿರುವುದು ಸ್ವೀಕಾರಾರ್ಹ ನಡವಾಳಿಯಲ್ಲ. ಪಾಕಿಸ್ತಾನದಲ್ಲಿ ಸಾಂವಿಧಾನಿಕ ಸಂಸ್ಥೆಗಳ ದೌರ್ಬಲ್ಯದಿಂದ ಆ ರಾಷ್ಟ್ರ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಲೆನೋವಾಗಿದೆ.ಅಲ್ಲಿನ ಅಸ್ತವ್ಯಸ್ತ ಪರಿಸ್ಥಿತಿ ಭಾರತದಲ್ಲಿ ಮರುಕಳಿಸಬೇಕೆ?
ಅಮೆರಿಕದಂತಹ ರಾಷ್ಟ್ರ, ತನ್ನ ಮಹಾಲೆಕ್ಕ ವಿಭಾಗಕ್ಕೆ ಭಾರತಿಯರನ್ನು ನೇಮಕ ಮಾಡಿಕೊಳ್ಳುತ್ತದೆ. ವಿಶ್ವ ಸಂಘಟನೆಗಳಾದ ಐಆಊಆ, ಗಿಐಕಿಕ,ಗಿಋಕಗಳು ಭಾರತೀಯರಿಗೆ ಮಣೆಹಾಕಿವೆ. ನಿರ್ಗಮಿತ ಮಹಾಲೆಕ್ಕಪಾಲ ವಿನೋದ್ ರಾಯ್ ಅವರು ವಿಶ್ವಸಂಸ್ಥೆಯ (ಕಿಛಟಿಜಟ ್ಟಜಿ ಊ್ಢಡಿಜ್ಠಟಿಛಟ ಆ್ಡಜ್ಝಡ್ಟ್ಠಿಡ)ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಕಾಯ್ದೆ 1971ಕ್ಕೆ ತಿದ್ದುಪಡಿ ಮಾಡಿ ಸಿಎಜಿಗೆ ಮತ್ತಷ್ಟು ಅಧಿಕಾರ ನೀಡುವುದು ಹಾಗೂ ತ್ರಿಸದಸ್ಯ ನೇಮಕದ ಆಲೋಚನೆಯನ್ನ ಕೈಬಿಡುವುದು ಸೂಕ್ತ ಎಂಬುದು ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.
-ಸುಧಾಕರ ಹೊಸಳ್ಳಿ, ಪ್ರಾದೇಶಿಕ ನಿರ್ದೇಶಕರು,
ಕರ್ನಾಟಕ ರಾಜ್ಯ ಮುಕ್ತ ವಿವಿ, ಕಾರವಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

