ನಾಗೇಶ್ ಸೂರ್ಯ 'ಚೆಲ್ಲಿದ' ಬೆಳಕು

ಖಂಡಿತ ಇದು "ಗಲ್ಲಿ ಗಾಸಿಪ್'’’ ಅಲ್ಲ!!!
"ಮೊನ್ನೆ ಒಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೆ. ನಿರ್ಮಾಪಕನು ಅದರಲ್ಲಿ ನಟಿಸುತ್ತಿದ್ದ. ನಟನೆಯ ಗಂಧಗಾಳಿಯು ಗೊತ್ತಿಲ್ಲದ ಅವನಿಗೆ ಅಭಿನಯಿಸುವ ತೆವಲು ಅತೀ ಕ್ರೂರವಾಗಿರುವ ಅವನ ಮುಖವನ್ನ ಪಾಪ ನಮ್ಮ ಜನತೆ ನೋಡಿ ಸಹಿಸಿಕೊಳ್ಳಬೇಕಿದೆ. ನಟನೆಯಲ್ಲಿ ಪ್ರತಿಭೆ ತೋರದಿದ್ದರೂ ಅವನು, ಉಳಿದಿದ್ದಲಿ
ತೋರುವುದರಲ್ಲಿ ನಿಸ್ಸೀಮ. ಬೆಳಗ್ಗೆಯಿಂದ ಒಂದೇ ಒಂದು ಷಾಟ್ನಲ್ಲೂ ಅಭಿನಯಿಸಕಾಗದೆ ಸೈಕಲ್ ಹೊಡೆದು ಹೊಡೆದು 'ಸುಸ್ತಾಗಿ' ಹೋಗಿದ್ದ!!!. ಅಷ್ಟರಲ್ಲಿ ತುಂಡು ಲಂಗದೊಂದಿಗೆ ಅದ್ಭುತ ಸುಂದರಿಯೊಬ್ಬಳು ಬಂದಳು!!! ಇದ್ದಕಿದ್ದಂತೆ ಆ ನಿರ್ಮಾಪಕ ವರಸೆ ಬದಲಿಸಿದ. ಅಭಿನಯಿಸಿ ಸುಸ್ತಾಗಿದೆ???!!! ಬ್ರೇಕ್ ಬೇಕು ಅಂದ. ನೋಡ ನೋಡುತ್ತಿದ್ದಂತೆ ಆ ತುಂಡು ಲಂಗದ ಹುಡುಗಿ ಕಣ್ಮರೆಯಾದಳು!!! ಹತ್ತೆ ನಿಮಿಷದಲ್ಲಿ ನಿರ್ಮಾಪಕನು ಕಣ್ಮರೆಯಾದ. 2 ಗಂಟೆನಂತರ ಮತ್ತೆ ಸೆಟ್‌ಗೆ ಬಂದ. ಈ ಬಾರಿ ಮತ್ತೆ ಸುಸ್ತಾಗಿದ್ದ. ಆದರೆ ಅವನ ಸುಸ್ತಿಗೆ ಕಾರಣ ಬೇರೆನೇ ಇತ್ತು!!!.’’
ಹೀಗಂತ ಫೇಸ್‌ಬುಕ್‌ನಲ್ಲಿ ಸಹ ನಿರ್ದೇಶಕ ನಾಗೇಶ್ ಸೂರ್ಯ ಬರೆದುಕೊಂಡಿದ್ದರು. ಅರೇ ಹೌದಾ? ಎಂದು ಕುತೂಹಲ ಹುಟ್ಟಿಸುವ ಈ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು ಕೂಡಾ ಅಷ್ಟೇ ಇಂಟರೆಸ್ಟಿಂಗ್ ಆಗಿದ್ದವು ಎಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ? ಎಲ್ಲರಿಗೂ ಸುಸ್ತಾಗಿದ್ದ 'ಆ ವ್ಯಕ್ತಿ' ಯಾರು ಎನ್ನೋ ಕುತೂಹಲ. ಇನ್ನು ಕೆಲವರಿಗೆ ಚಿತ್ರೀಕರಣ ವೇಳೆ ನಡೆದ 'ಸುಸ್ತಿನ ಕೆಲಸದ' ಕುತೂಹಲ. ಆದರೆ ನಾಗೇಶ್ ಎಲ್ಲಿಯೂ ಆ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಿಲ್ಲ. ಬಹಿರಂಗ ಪಡಿಸಲು ಇಚ್ಛಿಸುವುದೂ ಇಲ್ಲ ಎಂದು ನಾಗೇಶ್ ಕಡ್ಡಿಮುರಿದಂತೆ ಹೇಳಿಯೂ ಆಗಿದೆ. ಈ ಮಧ್ಯೆ, ನೀವು ಈ ಪೋಸ್ಟ್ ಹಾಕಿದ್ದು ಸರಿಯಲ್ಲ ಎಂದು ಉಪದೇಶ ಕೊಟ್ಟವರೂ ಇದ್ದರು ಇಲ್ಲಿ. ಏನೇ ಆಗಲಿ ನಾಗೇಶ್ ತಮಾಷೆಯಿಂದ (?) ಪೋಸ್ಟ್ ಹಾಕಿದ್ದರೂ ಇದರ ಹಿಂದಿನ ಗಂಭೀರತೆ ಎಲ್ಲರಿಗೂ ಅರ್ಥವಾಗುವಂತದ್ದೇ.
ಸಿನಿಮಾರಂಗ ಅಂದ್ರೆ ಬಣ್ಣದ ಲೋಕ. ಏಳು ಬಣ್ಣಗಳು ಸೇರಿ ಬಿಳಿಯ ಬಣ್ಣವಾಗುವ ಬೆಳ್ಳಿ ಪರದೆಯ ಹಿಂದಿನ ಕತೆಗಳು ಯಾವತ್ತೂ ರೋಚಕತೆಯನ್ನು ಹೊಂದಿರುತ್ತವೆ. ಇಲ್ಲಿ ಹೇಳಿರುವ ತುಂಡು ಲಂಗದ ಹುಡುಗಿಯ ವಿಷಯವನ್ನೇ ತೆಗೆದುಕೊಳ್ಳಿ. ಅವಳ್ಯಾಕೆ ಸೆಟ್‌ಗೆ ಬಂದಳು? ಆಮೇಲೆ ಅವರಿಬ್ಬರೂ ನಾಪತ್ತೆಯಾಗಿರುವ ಪ್ರಸಂಗ ಎಲ್ಲವೂ ಇಲ್ಲಿ ಸಾಮಾನ್ಯವೇ ಆಗಿರಬಹುದು. ಸಿನಿಮಾರಂಗದಲ್ಲಿ ಹೀಗೆಲ್ಲಾ ಇರುತ್ತೆ ಎಂದು ನಾವೂ ಸುಮ್ಮನಾಗಬಹುದು? ಆದರೆ ಆ ಹುಡುಗಿ?
ಆಕೆ ಅಲ್ಲಿ ಅವಕಾಶಕ್ಕಾಗಿ ಬಂದಳಾ? ಇನ್ಯಾರದ್ದೋ ಒತ್ತಾಯಕ್ಕೆ ಮಣಿದು ಬಂದಳಾ? ಇದ್ಯಾವುದೂ ನಮಗೆ ಗೊತ್ತಿಲ್ಲ. ಆದರೆ ಚಿತ್ರರಂಗವನ್ನು ದೂರ ನಿಂತು ನೋಡುವ ನಮ್ಮಂಥವರಿಗೆ ಇದೆಲ್ಲವೂ ಕುತೂಹಲದ ಪ್ರಶ್ನೆಯೇ. ಚಿತ್ರರಂಗದಲ್ಲಿ ಅವಕಾಶ ಬಯಸಿ ಅದೆಷ್ಟೋ ಹೆಣ್ಮಕ್ಕಳು ಸೂತ್ರದ ಬೊಂಬೆಯಾಗಿ ಬಿಡುತ್ತಾರೆ ಎಂಬುದೇನೋ ನಿಜ. ಇಂಥಾ ಸಂದರ್ಭಗಳಲ್ಲಿಯೇ ಮಹಿಳೆ ಅಲ್ಲಿ ತಾನಾಗಿಯೇ ದೌರ್ಜನ್ಯಕ್ಕೆ ಈಡಾಗುತ್ತಾಳೆ. ಇಷ್ಟೆಲ್ಲಾ ಆದರೂ ಅವಕಾಶ, ಪ್ರಸಿದ್ಧಿ ಹಾಗು ಸಂಪಾದನೆಯ ಹಪಾಹಪಿಯಲ್ಲಿ ಇದ್ಯಾವುದೂ ಅವರಿಗೆ ದೌರ್ಜನ್ಯ ಎಂದು ಎನಿಸುವುದೂ ಇಲ್ಲ. ಅಫ್‌ಕೋರ್ಸ್ ಈ ಎಲ್ಲ ಆಫ್ ದ ರೆಕಾರ್ಡ್ ಘಟನೆಗಳು ಅವರ ಸಾಧನೆಯ ಮೆಟ್ಟಿಲುಗಳೆಂದೇ ಪರಿಗಣಿಸಲ್ಪಡುತ್ತವೆ.
Unfortunately ಇದು ವಾಸ್ತವ!!
ಹಾಗಂತ ಚಿತ್ರರಂಗದಲ್ಲಿರುವವರೆಲ್ಲರೂ ಹೀಗೆ ಎಂದು ಮುದ್ರೆಯೊತ್ತಬೇಕಿಲ್ಲ. ಬೆಳಕಿದ್ದೆಡೆ, ಇರುಳು ಹೇಗೋ ಹಾಗೆಯೇ ಇಲ್ಲಿ ಎಲ್ಲವೂ ಇರುತ್ತದೆ.
ಅಂದ ಹಾಗೆ ಫೇಸ್‌ಬುಕ್‌ನಲ್ಲಿ ನಾಗೇಶ್ ಅವರ ಪೋಸ್ಟ್‌ಗೆ ಲೈಕ್ ಒತ್ತಿ ಮುಂದೆ ಸಾಗುವ ಮುನ್ನ ಈ ಎಲ್ಲ ವಿಷಯಗಳ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ. ಪರದೆಯ ಹಿಂದಿನ ಕತೆಗಳಾಗುವ ಬಣ್ಣ ಬಣ್ಣದ ಮನುಷ್ಯರ ಲೈಫು ನಾವಂದಷ್ಟು ಕೊಂಡಷ್ಟು ರಂಗು ರಂಗಾಗಿರುವುದಿಲ್ಲ ಎಂಬುದು ಅರ್ಥವಾಗುತ್ತದೆ.
ಈವಾರ ಫೇಸ್‌ಬುಕ್‌ನಲ್ಲಿ ಕಂಡಂತೆ ವಿಷಯಕ್ಕೆ ಆಯ್ದುಕೊಂಡ ಸ್ಟೇಟಸ್ ನಾಗೇಶ್ ಸೂರ್ಯ ಅವರದ್ದು.
ಅವರ ಕಿರುಪರಿಚಯ
ನಾಗೇಶ್ ಸೂರ್ಯ
ಅಸೋಸಿಯೇಟ್ ಡೈರೆಕ್ಟರ್ @ ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು
- ರಶ್ಮಿ ಕಾಸರಗೋಡು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


