ಅಂಕಣಗಳು

ದೀಪದ ಮಲ್ಲಿ ಹೇಳಿದ ಗಾಂಧಿ ನೆನಪು

Published On :

ನನಗೆ ಈಗ್ಲೂ ನಗು ಬರೋ ವಿಷಯ ಅಂದ್ರೆ ನಾನು ನಾಲ್ಕನೇ ಕ್ಲಾಸ್ ಇರುವಾಗ ಹುತಾತ್ಮರ ದಿನದಂದು ಎಲ್ಲರನ್ನೂ ಕ್ಲಾಸ್‌ರೂಮಿನಲ್ಲಿ ಎದ್ದು ನಿಲ್ಲಿಸಿ ಮೌನಾಚರಣೆ ಮಾಡಿಸೋರು. ನಗು ಬರ್ತಿದ್ದಿದ್ದು ಅದಕ್ಕಲ್ಲ. ನಮ್ಮ ಕ್ಲಾಸಿನ ಮಾನಿಟರ್ ಹುಡುಗ , ಸಂತೋಷ್ ಇರಬೇಕು ಅವನ ಹೆಸರು...ಮೌನಾಚರಣೆ ವೇಳೆ ಗೊಳೋ ಅಂತ ಅಳೋಕೆ ಶುರುಮಾಡಿಬಿಟ್ಟ. ಎಲ್ಲಾ ಮೌನಾಚರಣೆ ತುಂಡರಿಸಿ ಗಾಬರಿಯಿಂದ ಅವನನ್ನ ಸುತ್ತುವರೆದು ಏನಾಯಿತೆಂದು  ಕೇಳಿದ್ದಕ್ಕೆ, ' ಗಾಂಧೀಜಿ ಸತ್ತೋದ್ರಲ್ಲಾ...ಅದುಕ್ಕೇ" ಅಂದ!!. ನನಗೆ ಎಲ್ಲಿಲ್ಲದ ರೋಮಾಂಚನ, ಎಂಥಾ ದೇಶಪ್ರೇಮಿ ನನ್ನ ಕ್ಲಾಸ್ ಮೇಟ್ ಅಂತ. ಆದ್ರೆ  ನಮ್ ಮಿಸ್ಸು, ಅವನ ತಲೆ ಮೇಲೊಂದು ಮೊಟಕಿ, ಬರೀ over acting ಇವನದ್ದು.." ಅಂತ ಗೊಣಗಿಕೊಂಡು ಮತ್ತೆ ಮೌನಕ್ಕೆ ಶರಣಾದರು...
ಈಗ ಎಷ್ಟೋ ಜನರನ್ನು  ನೋಡಿ ಅನ್ನಿಸುತ್ತೆ. ವರ್ಷವೆಲ್ಲಾ ತತ್ವಾದರ್ಶಗಳನ್ನ ಗಾಳಿಗೆ ತೂರಿ, ಹುಟ್ಟು-ಸಾವಿನ ದಿನ ಮಾತ್ರ ಅದೇನು ಬಿಲ್ಡಪ್ ಕೊಡ್ತಾರೆ.., ಏನು ಕಥೆ ..? ತಮಗೆ ಯಾವುದೂ ಅನ್ವಯಿಸೋಲ್ಲ ಅನ್ನುವಂತೆ, ಎಲ್ರೂ ಊರಿನೋರಿಗೆ ಬುದ್ಧಿ ಹೇಳೋರೇ...
ನಂದೇ ಒಂದು ಹನಿ ನೆನಪಾಯ್ತು..
"ಪೆರೋಲ್ ಅವಧಿ ಮುಕ್ತಾಯ...
ನಾಳೆ ಮತ್ತೆ ಬಾಪು
ಕತ್ತಲೆಗೆ..."


ಮೋಹನ್ ದಾಸ್ ಕರಮಚಂದ ಗಾಂಧಿಯವರ ಪುಣ್ಯತಿಥಿಯಾದ ಜ.30ರಂದು ದೀಪದ ಮಲ್ಲಿಯವರ ಫೇಸ್‌ಬುಕ್ ಗೋಡೆಯ ಮೇಲೆ ಕಂಡ ಪೋಸ್ಟ್ ಇದು. ಶಾಲಾದಿನಗಳಲ್ಲಿ ಗಾಂಧೀ ಪುಣ್ಯಸ್ಮರಣೆ ದಿನದಂದು ಮೌನಾಚರಣೆ ಮಾಡಿರುವ ಬಗ್ಗೆ ದೀಪಾ ಇಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ತಮ್ಮ ಬಾಲ್ಯದ ದಿನಗಳನ್ನು ನೆನಪಿಸುವಂತೆ ಮಾಡಿದ ದೀಪಾ, ಇಂದಿನ ವಾಸ್ತವಿಕತೆಗಳ ಬಗ್ಗೆಯೂ ನೇರವಾಗಿಯೇ ಹೇಳುತ್ತಾರೆ.

"ಈಗ ಎಷ್ಟೋ ಜನರನ್ನು  ನೋಡಿ ಅನ್ನಿಸುತ್ತೆ. ವರ್ಷವೆಲ್ಲಾ ತತ್ವಾದರ್ಶಗಳನ್ನ ಗಾಳಿಗೆ ತೂರಿ, ಹುಟ್ಟು-ಸಾವಿನ ದಿನ ಮಾತ್ರ ಅದೇನು ಬಿಲ್ಡಪ್ ಕೊಡ್ತಾರೆ.., ಏನು ಕಥೆ ..? ತಮಗೆ ಯಾವುದೂ ಅನ್ವಯಿಸೋಲ್ಲ ಅನ್ನುವಂತೆ, ಎಲ್ರೂ ಊರಿನೋರಿಗೆ ಬುದ್ಧಿ ಹೇಳೋರೇ.." -ಈ ಮಾತು ಸಮಾಜದ ಇಂದಿನ ಮುಖಕ್ಕೆ ಹಿಡಿದ ಕನ್ನಡಿಯಂತಿದೆ.

ದೇಶಕ್ಕಾಗಿ ಹೋರಾಡಿದ ಮಹಾನುಭಾವರ ಆದರ್ಶಗಳನ್ನೆಲ್ಲಾ ಬದಿಗಿಟ್ಟು ಅವರ ಜನ್ಮದಿನಾಚರಣೆ, ಪುಣ್ಯ ತಿಥಿ ವೇಳೆ ಮಾತ್ರ ಅವರನ್ನು ನೆನಪಿಸಿ 'ಮೊಸಳೆ ಕಣ್ಣೀರು' ಹಾಕುವ ಜನರ  ಬಗ್ಗೆ ಇರುವ ಅಸಮಾಧಾನ ದೀಪಾ ಅವರ ಬರಹದಲ್ಲಿ ಎದ್ದು ಕಾಣುತ್ತಿದೆ. ಆದರ್ಶಗಳು ಬರೀ ಪುಸ್ತಕಗಳಲ್ಲಿ ಮಾತ್ರ ಚೆನ್ನ, ಅವುಗಳು ಪಾಲಿಸುವುದಕ್ಕಿರುವುದಲ್ಲ ಎಂಬ 'ಪಾಲಿಸಿ'ಯಲ್ಲಿ ಬದುಕುವ ಇಂದಿನ ಜನಾಂಗಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ದೀಪದ ಮಲ್ಲಿ
"ಪೆರೋಲ್ ಅವಧಿ ಮುಕ್ತಾಯ...
ನಾಳೆ ಮತ್ತೆ ಬಾಪು
ಕತ್ತಲೆಗೆ..." ಎಂದು ಹೇಳುವ ಮೂಲಕ ಗಾಂಧೀಜಿ ಮತ್ತು ಇಂದಿನ ಸಮಾಜದ ಚಿತ್ರಣವನ್ನು ನಮ್ಮ ಮುಂದಿಟ್ಟಿದ್ದಾರೆ.

ಈ ವಾರ ಫೇಸ್‌ಬುಕ್‌ನಲ್ಲಿ ಕಂಡಂತೆ ಅಂಕಣದ ವಿಷಯಕ್ಕೆ ಆಯ್ದುಕೊಂಡ ಸ್ಟೇಟಸ್ ದೀಪದಮಲ್ಲಿ ಅವರದ್ದು

ಅವರ ಪರಿಚಯ
ದೀಪದ ಮಲ್ಲಿ
ಬೆಂಗಳೂರು

-ರಶ್ಮಿ ಕಾಸರಗೋಡು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.