ಅಂಕಣಗಳು

ಎಣ್ಣೆ ನಿನಗೆ ಸಾಟಿಯಿಲ್ಲ!

Published On :

ಬಿ.ವಿ.ಬಾರತಿಯವರೇ, ಬಾಸೆ ಮ್ಯಾಲಿರೋ ನಿಮ್ಮ ಅಬಿಮಾನ ಕಂಡು ನಂಗೆ ಎಮ್ಮೆ....

ಇಷ್ಟಕ್ಕೂ ಶಿವರಾಜ್ ಕುಮಾರ್ ನಮ್ಮ ಹಳೇ ಮೈಸೂರು ಮೂಲದವರು. ಹಾಗಾಗಿ, 'ಹೆಣ್ಣೇ' ಬದಲು 'ಎಣ್ಣೆ' ಅಂತ ಹೇಳಿದ್ರಲ್ಲಿ ಆಶ್ಚರ್ಯ ಪಡುವಂತಿಲ್ಲ. ಇಷ್ಟಕೂ ಭಾಷೆ ಅನ್ನೋದು ಪುಸ್ತಕದಲ್ಲಿ ಪ್ರಿಂಟ್ ಆಗಿರೋದು ಮಾತ್ರ ಶ್ರೇಷ್ಠ ಅಲ್ಲ. ಹಾಗೊಂದು ವೇಳೆ ನೀವು ಹಾಗೆ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಪ್ರತಿ ಹತ್ತಿಪ್ಪತ್ತು ಕಿಲೋ ಮೀಟರ್ ಗೂ ಭಾಷೆ ಬದಲಾಗುತ್ತಾ ಹೋಗುತ್ತೆ. ಹಾಗಾಗಿ, ಶಿವರಾಜ್ ಕುಮಾರ್ ಹಾಗೆ ಹೇಳಿರೋದ್ರಲ್ಲಿ ನೀವು ತಪ್ಪು ಹುಡುಕುವುದು ಸರಿಯಿಲ್ಲ. ನಾನೂ ಕೂಡ ಎಷ್ಟೋ ಸಲ 'ಹ'ಕಾರಕ್ಕೆ ಬದಲು 'ಅ'ಕಾರ ಬಳಸುತ್ತೇನೆ. ಹಾಗೇ ಬಳಸುವುದರಲ್ಲಿ, ನನಗೆ ಹೆಮ್ಮೆ ಇದೆ. ಅದು ನಾನು ಪ್ರೀತಿಸುವ ನನ್ನ ಹಳ್ಳಿಯ ಕನ್ನಡ, ನನ್ನ ತಂದೆತಾಯಿ, ತಾತ ಮುತ್ತಾತಂದಿರು ಶತಮಾನಗಳಿಂದ ಆಡಿದ ಕನ್ನಡ.

ಅಂದಹಾಗೆ, ಈ ಶಿಷ್ಟಕನ್ನಡ ನನಗೆ ಪರಿಚಯವಾಗಿದ್ದು ಅಕಸ್ಮಾತ್ ಶಾಲೆಗೆ ಸೇರಿಕೊಂಡ ನಂತರವಷ್ಟೇ. ನಾನು ಈಗಲೂ ನನ್ನ ಹಳ್ಳಿ ಕನ್ನಡವನ್ನೇ ಮಾತಾಡಲು ಬಯಸುತ್ತೇನೆ. ಪುಸ್ತಕದ ಶಿಷ್ಟ ಕನ್ನಡ ನನಗೆ ಎಷ್ಟೋ ಸಲ ಮೇಕಪ್ ಹಾಕೊಂಡಿರೋ ಆರ್ಟಿಫಿಶಿಯಲ್ ಹುಡುಗೀರ್ ಥರ ಕಾಣುತ್ತೆ. ಅದೇ ನನ್ನ ಹಳ್ಳಿ ಕನ್ನಡ ಸಹಜ ಸುಂದರಿಯರಂತೆ ಕಾಣುತ್ತೆ. ಶಿವರಾಜ್ ಕುಮಾರ್ ಇನ್ನಷ್ಟು ಇಂಥ ಪದಗಳನ್ನು ಬಳಸಲಿ, ನನ್ನಂಥವರನ್ನು ಖುಷಿ ಪಡಿಸಲಿ, ಆ ಮೂಲಕ ಕನ್ನಡ ಉಳಿಯುವಂತಾಗಲಿ ಎಂಬುದು ನನ್ನ ಹಾರೈಕೆ.

ಅಂದಹಾಗೆ, ನೀವೂ ಕೂಡ ನಮ್ಮದೇ ಹಳೇ ಮೈಸೂರಿಗೆ ಸೇರಿದ ಕೊಳ್ಳೇಗಾಲ ಕಡೆಯವರು ಅನ್ನೋ ಮಾತನ್ನ ಕೆಲವು ವರ್ಷಗಳ ಹಿಂದೆ ನೀವೇ ನನಗೆ ಹೇಳಿದ್ದ ನೆನಪು.

(ಬಿ.ವಿ.ಭಾರತಿಯವರು ಹೀಗೊಂದು ಸ್ಟೇಟಸ್ ಹಾಕವ್ರೆ : ನೆನ್ನೆ ಟಿ ವಿ ನ್ಯೂಸ್ ನಲ್ಲಿ ನಮ್ ಶಿವರಾಜ್ ಕುಮಾರ್ 'ಹಾಗಿದ್ರೆ ಅಪ್ಪಾಜಿ ಅವ್ರ ಮನೆಯಿಂದ ಎಣ್ಣೆ ತರ್ತಿರಲಿಲ್ಲ' ಅಂದಾಗ ಅಣ್ಣಾವ್ರು ಅದ್ಯಾರ ಮನೆಯಿಂದ ಎಣ್ಣೆ ತಂದಿರಬಹುದು ಅಂತ ತಲೆ ಕೆರ್ಕೊಂಡೆ. ಎರಡು ನಿಮಿಷದ ಮೇಲೆ ಅರ್ಥ ಆಯ್ತು ಅದು 'ಹೆಣ್ಣೇ' ಅಂತ ...!)
---------------
ಈ ಬಾರಿ ಫೇಸ್‌ಬುಕ್‌ನಲ್ಲಿ ಕಂಡಂತೆ ಅಂಕಣಕ್ಕೆ ಆಯ್ದುಕೊಂಡ ಸ್ಟೇಟಸ್ ಹೃದಯಶಿವ ಅವರದ್ದು...

ಹೃದಯಶಿವ ಅವರು ಫೇಸ್‌ಬುಕ್ ಗೋಡೆಯಲ್ಲಿ ಬರೆದ ಸ್ಟೇಟಸ್ ಗೆ  ಬಂದ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

Bharathi Bv : Shiva Ninna maathu nanage oppigeyagalilla ... Neenu bere mattu naanu bere. Shivanna halli bhashe mathadthirlilla ...madhye madhye english padagalna sersiye yaavagloo sandarshana kododu. Nange kooda alli baase matadakke battaithe kanla .. Angantha Ella kadyoo ange maathadakkadeetha? Adoove padagala artha bere aagvaaga a kaara matte hakaara DA made banana kodle beku

Bharathi Bv: Ohh shiva neevella yaava mooladinda yochisthidira anta arthavagthide ....

Bharathi Bv :Naanu kolledaladavlu anta nenpu madkollo ashtella hinds enoo helilla shiva ... Dina belgadre badkolthirthini

Hridaya Shiva @ Bharathi Bv : ನೀವ್ ಇವಾಗ ಏನೇ ಯೋಳ್ದ್ರೂ ನಿಮ್ ಸ್ಟೇಟಸಲಿ, ಸಿವ್ ರಾಜ್ ಕುಮಾರ್ ಗೆ ನೆಟ್ಟಗೆ ಕನ್ನಡ ಮಾತಾಡೋಕೆ ಬರಲ್ಲ ಅನ್ನೋ ಅರ್ತ ಅದೆ ಅಂತ ನಂಗೆ ಕಾಣ್ತಾದೆ ಕಣಕ್ಕ...
Bharathi Bv :Ayyaa artha iraadenu ... Naa elirodu adneya !!


Param Mandya:  ಅಣ್ಣಾವ್ರು ಮೂಲ ಚಾಮರಾಜನಗರದವರಾದರು ಯಾವ ಕನ್ನಡ ಪಂಡಿತನಿಗೂ ಕಡಿಮೆ ಇಲ್ಲದಂತೆ ಸ್ಪಷ್ಟವಾದ ಪದಗಳನ್ನು ಬಳಸುತ್ತಿದ್ದರು. ಕಳೆದ ೨೫ ವರ್ಷಗಳಿಂದ ನಾಯಕರಾಗಿರುವ ನಮ್ಮ ಶಿವಣ್ಣವ್ರು ಕೇವಲ ಹೊರಗೆ ಮಾತ್ರವಲ್ಲಾ ಪರದೆಯ ಮೇಲೂ ಆ ರೀತಿಯ ಅಸ್ಪಷ್ಟ ಪದಗಳನ್ನು ಬಳಸಿದ್ದುಂಟು. ನಾವು ಏನೇ ಸಮರ್ಥನೆ ಮಾಡಿಕೊಂಡರು ಸರಿಪಡಿಸಿಕೊಳ್ಳಲು ಇನ್ನು ಸಮಯವುಂಟು. ನಮಗೆ ಶಿವಣ್ಣವ್ರ ಮೇಲೆ ತುಂಬಾ ಅಭಿಮಾನವಿದೆ , ಹಾಗೆ ಅವರಿಗೆ ಕನ್ನಡದ ಮೇಲೆ ಹೆಚ್ಚಿನ ಅಭಿಮಾನವಿದೆ ಅದನ್ನು ಸಿದ್ದಪಡಿಸಿ ತೋರಿಸದಿದ್ದರೆ ಕೇವಲ ಅಂದಾಭಿಮಾನವಾಗುತ್ತದ. ಈ ರೀತಿಯ ಪ್ರತೀ post ಗಳಿಗೂ ನೀವು ಪ್ರತಿ post ಹಾಕಬೇಕಾಗುತ್ತದ. ಈ ಬಗ್ಗೆ ಮಾತನಾಡಲು ನಾನು ಚಿಕ್ಕವನು... ಆದರೂ ಅನಿಸಿಕೆ ತಿಳಿಸಿದ್ದೇನೆ . ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ.

Hridaya Shiva: bharathi :ಅವರು ಅಂಗೆ ಮಾತಾಡಿರೋದ್ರಲ್ಲಿ ಏನ್ ತಪ್ಪದೆ? ಅವ್ರು ಇಂಗೇ ಮಾತಾಡ್ ಬೇಕು ಅಂತ ಹೇಳಕೆ ನೀವ್ಯಾರು?

Bharathi Bv :Hangidre nange helakke neevyaaru !

Hridaya Shiva :ಅಕ್ಕಯ್ಯ, ನೀವು ನಾನು ಪ್ರೀತಿಸೋ ನನ್ನ ಗ್ರಾಮೀಣ ಪ್ರದೇಶದ ಕನ್ನಡವನ್ನ ಅವಮಾನಿಸಿದ್ದೀರಿ. ಅದನ್ನ ಪ್ರತಿಭಾಟಿಸ್ತಾ ಐದ್ದೇನಿ. ಪ್ರತಿಭಟಿಸೋದು ನನ್ನ ಹಕ್ಕು. bharathi

Param Mandya: ಎಲ್ಲಾರೂ ರಸ್ತೇಲಿ ಮಾತಾಡೋದನ್ನ ಭಾರತಿಯವರು FB ಲಿ ಮಾತಡಿದ್ದಾರಷ್ಟೇ. ಅವರು ಹಳ್ಳಿಯಲ್ಲಿ ಬೆಳೆದವರಲ್ಲ chennai & Bangloreನಲ್ಲಿ ಬೆಳೆದವರು . ಅವರು ಹಳ್ಳಿಯವರಂತೆ ಮಾತನಾಡಬೇಕೆಂದು ನಾವು ಬಯಸಲು ಅವರೇನು ಜಾನಪದ ಕಲಾವಿದರಲ್ಲ. ಇಡೀ ಕರ್ನಾಟಕದ , ಕನ್ನಡದ ಕಲಾವಿದರು.

Basavaraj Sulibhavi :ನಾವು ಬೆಳೆದ ಪರಿಸರದಿಂದ ನಾವಾಡುವ ಭಾಷೆಯ ಉಚ್ಚಾರ ರೂಡಿಯಾಗುತ್ತದೆ.. ಉಚ್ಚಾರ ಯಾವತ್ತೂ ಭಾಷಿಕ ದೋಷವಲ್ಲ.. ಅದು ಸಹಜವಾಗಿ ಬರಹದಲ್ಲೂ ವ್ಯಕ್ತವಾಗಬಹುದು. ಕನ್ನಡ ಒಂದು ಭಾಷೆಯಲ್ಲ, ಹಲವು. ಕರ್ನಾಟಕದಲ್ಲಿ ಹಲವು ಕನ್ನಡ ಭಾಷೆಗಳಿವೆ.. ಈ ವಾಸ್ತವ ಗ್ರಹಿಸದೇ ನಾನಾಡುವುದೇ ಶ್ರೇಷ್ಠ ಎಂದು ವಾದಿಸಿದರೆ ಅವರ ಮಂಡೆ ಸಮ ಇಲ್ಲ ಎಂದು ಭಾವಿಸಬೇಕಾಗುತ್ತದೆ.


ಶಂಕರ ದೇವಾಡಿಗ ಕೆಂಚನೂರು: ಬೌದ್ಧಿಕ ಅಹಂಕಾರ ಯಾರಿಗೂ ಒಳ್ಳೆಯದಲ್ಲ ನಾವು ಎಷ್ಟೇ ತಿದ್ದಿಕೊಂಡರೂ ನಾವು ಬೆಳೆದು ಬಂದ ಪರಿಸರದ ಪ್ರಭಾವ ನಮ್ಮ ನಡೆನುಡಿಗಳಲ್ಲಿ ಕಂಡೇ ಕಾಣುತ್ತದೆ ಅದಕ್ಕೆ ಶಿವಣ್ಣನೂ ಹೊರತಲ್ಲ ಒಬ್ಬರ ಆಂಗಿಕ ಭಾಷಿಕ ನ್ಯೂನ್ಯತೆಗಳನ್ನು ಸಾರ್ವಜನಿಕವಾಗಿ ಆಡಿಕೊಳ್ಳುವುದು ಬುದ್ಧಿವಂತರಿಗೆ ಶೋಭಿಸುವುದಿಲ್ಲ

Radha Krishna : ಕನ್ನಡ ಬಳಸುವಾಗ ಶುದ್ಧ ಗ್ರಾಮ್ಯವಾಗಿದ್ರೂ ಅರ್ಥವಾಗೋಕೆ ಕಷ್ಟವಾಗಲ್ಲ... ೀಗ ಬಳ್ಳಾರಿ, ಧಾರವಾಢ, ಬೀದರ್, ಮಂಗಳೂರು ಹೀಗೆ ಬೇರೆ ಬೇರೆ ಪ್ರದೇಶಗಳ ಭಾಷೆ ಅಷ್ಟೆ ಮಾತಾಡ್ತಾ ಇದ್ರೆ ಆ ತಪ್ಪು ಹುಡುಕೋಡು ಸರಿಯಲ್ಲ.... ಶಿಷ್ಟ ಕನ್ನಡ, ಗ್ರಾಮ್ಯ ಕನ್ನಡ ಮತ್ತು ಇಂಗ್ಲಿಷ್ ಎಲ್ಲವನೂ ಬೆರೆಸಿ ಅಪಭ್ರಂಶಗೊಳಿಸಿದಾಗ ಮಾತ್ರ ಮಾತು ಅಪಸವ್ಯವಾಗತ್ತೆ....
ಶಿವಣ್ಣ ಪೂರ್ಣ ಗ್ರಾಮ್ಯವಾಗಿಯೇ ಮಾತಾಡಿದ್ರೆ ಯಾರಿಗೂ ಸಮಸ್ಯೆ ಇರಲ್ಲ... ಕಲಸು ಮೇಲೋಗರ ಮಾಡೋದ್ರ ಬಗ್ಗೆ ಕೂಡಾ ಪ್ರತಿಭಟಿಸಬಹುದು ಅಲ್ವಾ


Arkalgud Jayakumar:  Bharathi, Hridayashiva n Basavaraj sulibhavi ಇವರುಗಳ ಚರ್ಚೆ ಗಮನಿಸಿದೆ ಭಾಷೆ ವಿಷಯದಲ್ಲಿ ಇಂತಹದ್ದೊಂದು ಚರ್ಚೆ ಚಾಲ್ತಿಯಲ್ಲಿರಲಿ! ಅಂದ ಹಾಗೆ ಕನ್ನಡ ಭಾಷೆ ಪ್ರತೀ 20km ಗೆ ಬದಲಾಗುತ್ತಾ ಹೊಗುತ್ತದೆ, ಸುಮಾರು 40ಹೆಚ್ಚು ರೀತಿಯಲ್ಲಿ ಕನ್ನಡ ಭಾಷೆ ಆಡುವುದನ್ನು ಗಮನಿಸಿದ್ದೇವೆ, ಜನಪದರ ಭಾಷೆ ವೈವಿದ್ಯತೆಯನ್ನು ಆಯಾ ನೆಲೆಗಟ್ಟಿನಲ್ಲಿ ಸಾರ್ವತ್ರಿಕವಾಗಿ ಗೌರವಿಸ ಬೇಕು, ಆದರೆ ಸಮಾಜದಲ್ಲಿ ಅಬಿವ್ಯಕ್ತಿಸುವ ಸಂಧರ್ಭ ಬಂದಾಗ ಶಿಷ್ಟ ಭಾಷೆಯನ್ನು ಉಪಯೋಗಿಸುವುದು ಒಳ್ಳೆಯದು ಅನಿಸುತ್ತೆ. ಅವಿದ್ಯಾವಂತರಾದರೂ ಡಾ ರಾಜ್ ಕುಮಾರ್ ಕನ್ನಡ ನುಡಿಯನ್ನ ಅಪಭ್ರಂಶವಿಲ್ಲದಂತೆ ಆಡುತ್ತಿದ್ದುದು ಮಾದರಿ. ಭಾಷೆಯನ್ನು ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಅಬಿವ್ಯಕ್ತಿಸುವಾಗ ಅದು ಶಿಷ್ಟತೆ ಮತ್ತು ಸಭ್ಯತೆ ಬೇಡುತ್ತದೆ. ವ್ಯಾಕರಣ ಉಚ್ಚಾರಣೆ ದೋಷವಿಲ್ಲದಂತೆ ಬಳಸುವುದು ಮುಖ್ಯವಾಗುತ್ತೆ. ಶಿವರಾಜ್ ಹೆಣ್ಣೇ ಬದಲು ಎಣ್ಣೆ ಎಂದದ್ದು ಉಚ್ಚಾರಣ ದೋಷವೇ ಸರಿ ಅದು ಬದಲಾಗಬೇಕು. ಇತರರು ಸಹಾ ಅದನ್ನೆ ಸರಿ ಎಂದು ತಿಳಿಯುವ ಸಾದ್ಯತೆ ಇರುವುದರಿಂದ ಕನ್ನಡ ಭಾಷೆಯ ಶಿಷ್ಟತೆಗೆ ಭಂಗವಾದಂತೆ ಅಲ್ಲವೇ? ಇದು ನನ್ನ ವೈಯುಕ್ತಿಕ ಅಬಿಪ್ರಾಯ ಇದೇ ಸರಿ ಎಂದು ಭಾವಿಸ ಬೇಕಿಲ್ಲ ನಿಮ್ಮ ಅಬಿಪ್ರಾಯಗಳು ಸಾರ್ವತ್ರಿಕ ಮನ್ನಣೆಗೆ ಒಳಪಡುವಂತಿರಲಿ.


Prashanth Kanichar: ಕನ್ನಡ ಸಿನಿಮಾ ನೋಡುಗನಾಗಿ ನಾನು ಭಾರತಿ ಅಕ್ಕನ ಮಾತನ್ನ ಬೆಂಬಲಿಸ್ತೀನಿ.ಸಿನಿಮಾ ನಟರಾಗಿ 25 ವರ್ಷ ಆಯ್ತು.ಇನ್ನೂ ಸ್ಪಷ್ಟ ಕನ್ನಡ ಮಾತನಾಡದ, ಮಾತು ಮಾತಿಗೆ ಇಂಗ್ಲೀಷ್ ಪದ ಬಳಸುವ ಶಿವರಾಜಕುಮಾರ್ ಇನ್ನಾದರೂ ಕನ್ನಡ ಉಚ್ಚಾರ ಕಲಿಯಲೇಬೇಕು... ಶಿವ ನೀವು ಅದೇ ಕ್ಷೇತ್ರದಲ್ಲಿದೀರಿ ಅಂತ ವಹಿಸಿಕೊಂಡು ಮಾತನಾಡಿದರೆ ಸತ್ಯ ಸುಳ್ಳಾಗೊಲ್ಲ.ಶಿವರಾಜ್ ಕುಮಾರ್ ತಮಿಳು ಮನೆಭಾಷಿಕರಿರಬಹುದು.ಆದರೆ ತಾನು ಕೆಲಸ ಮಾಡುವ ಕನ್ನಡದಲ್ಲಿ ಬಂದು 25 ವರ್ಷಗಳಾದರೂ ಕಲಿಯದಿರೋದು ಮಾತ್ರ ಸರ್ವಥಾ ತಪ್ಪು.


Benaka Kumbar: ಭಾಷೆಯ ಬಹುತ್ವ ಮತ್ತು ಬಳಕೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಒಂದು ಅಭಿಪ್ರಾಯ . ಇಲ್ಲಿನ ಚರ್ಚೆ ವಿಮರ್ಶೆ ಟೀಕೆ ಗಮನಿಸಿದರೆ ನಾನು ಪ್ರತಿಕ್ರಿಯೆ ನೀಡಲೇ ಬೇಕಾಗಿದೆ. ಭಾಷೆಯು ಆಡು ಮಾತಿನಲ್ಲಿ ಯಾವುದೋ ಒಂದು ರೀತೀಲಿ ಬಳಸಲಾಗಿದ್ರೆ ಅದು ಆಡುವ ವ್ಯಕ್ತಿಗೆ ಒದಗಿರುವ ಭಾಷಿಕ ಪರಿಸರ ಮತ್ತು ಪರಿಕರಗಳಿಂದ. ಔಪಚಾರಿಕ ಕನ್ನಡ ಕೇವಲ ಕೆಲವೇ ಜನರ ಹಿತಾಸಕ್ತಿಯಿಂದ ನಮ್ಮ ಮೇಲೆ ಹೇರಲ್ಪಟ್ಟಿದೆ. ಹೀಗಿರುವಾಗ ನಾವು ಕನ್ನಡ ಮಾತಾಡುವ ಎಲ್ಲರೂ ಒಂದೇ ರೀತಿಯಲ್ಲಿ ಮಾತನಾಡಬೇಕು ಎಂಬುದು ಫಾರ್ಮಾನು ಹೊರಡಿಸಿದಂತೆ. ನಾನು ಹುಟ್ಟಿದ್ದು ಬಾಗಲಕೋಟೆ, ಬೆಳೆದಿದ್ದು ಮಂಡ್ಯ, ಧಾರವಾಡ, ಹೈದೆರಾಬಾದ್ ಗಳಲ್ಲಿ. ನಾನು ಅರ್ಥ ಮಾಡಿಕೊಂಡಂತೆ ಶಿಷ್ಟ ಕನ್ನಡವೆಂಬುದು ಕರ್ನಾಟಕದ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗಳ ಪ್ರತೀಕ ಅಲ್ಲವೇ ಅಲ್ಲ. ಹೀಗಿರುವಾಗ ಉಚ್ಛಾರಣೆ ತಪ್ಪು ಅನ್ನುವುದು ಕೂಡ ಒಪ್ಪತಕ್ಕ ವಿಷಯವಲ್ಲ. ಸಂಸ್ಕೃತ ಇವತ್ತು ಮೃತ ಭಾಷೆ ಆಗಿರುವುದು ಇಂಥ ಶಿಷ್ಟಾಚಾರ, ಸ್ಪಷ್ಟತೆ, ಮತ್ತು ಇನ್ನಿತರ ಕರ್ಮಠ ನಂಬಿಕೆಗಳಿಂದ ಅನ್ನೋದು ಎಲ್ರಿಗೂ ಗೊತ್ತಿರೋದೆ. ಇಂಗ್ಲಿಷ್ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಎರಡನ್ನು ಅಭ್ಯಾಸ ಮಾಡಿರುವ ನನಗೆ ಇಂಥ ವಿಚಾರಗಳು {ಭಾರತಿ ಅವರದು} ಕನಿಕರದ ನಗೆ ತರಿಸುತ್ತವೆ. ಇವತ್ತು ಕನ್ನಡದ ಅತ್ತ್ಯುತ್ತಮ ಸಾಹಿತ್ಯ ರಚನೆ ಆಗ್ತಿರೋದು ಶಿಷ್ಟ ಕನ್ನಡ ಹೊರತುಪಡಿಸಿದ ಜವಾರಿ ಭಾಷೆಗಳಲ್ಲೇ ಅನ್ನೋದು ಮರೆಯುವ ಹಾಗಿಲ್ಲ. ಒಂದು ಇಂಗ್ಲಿಷ್ ಉದಾಹರಣೆ ನೀಡಿ ಮುಗಿಸುತ್ತೇನೆ- ನಮಗೆಲ್ಲರಿಗೂ ತಿಳಿದಿರುವಂತೆ ಇಂಗ್ಲಿಷ್ನಲ್ಲಿ ಕವಿ John Keats ಬರೆದ "Ode to a Nightingale" ತುಂಬಾ ಪ್ರಸಿದ್ಧ ಪದ್ಯ, ಅದರ ಮೊದಲ ಸಾಲು ಹೀಗಿದೆ- " My heart aches, and a drowsy numbness pains" - ಇದನ್ನು Keats ಓದಿದರೆ ಅದು ಹೀಗಿರುತ್ತಿತ್ತು - " ಮಿ ಆರ್ಟ್ ಏಕ್ಸ್ ಅಂಡ್ ಅ ಡ್ರೌಸಿ ನಮ್ನೆಸ್ಸ್ ಪೇನ್ಸ್" ಯಾಕೆಂದರೆ ಅವನದು Cockney ಎಂಬ ಒಂದು ಇಂಗ್ಲಿಷ್ Dialect. ಇಲ್ಲಿ ನಾವು Keats ಬಳಸುವ ಉಚ್ಛಾರ ತಪ್ಪು ಅಂತ ಅಂದುಕೊಂಡರೆ ಅದು ನಮ್ಮ ಮೂಢತನ ಅಷ್ಟೇ. ಹಾಗೆ ಕನ್ನಡದಲ್ಲಿ ಸಾವಿರ "ಆಡು" ಕನ್ನಡಗಳಿವೆ ಎಂದು ತಿಳಿಯದವರು ರೋಗಗ್ರಸ್ತ ಮನಸ್ಥಿತಿ ಉಳ್ಳವರು ಅನಿಸಿಕೊಳ್ಳುತ್ತಾರೆ.


Anikethana Sharma: ೧೫ ೨೦ ಕಿಲೋಮೀಟ್ರುಗೆ ಭಾಷೆ ಧಾಟಿ ಬದಲಾಗಬಹುದು , ಆದ್ರೆ ಪದ ಪದಗಳ ಅರ್ಥ ಬದಲಾಗಲ್ಲ ಅಲ್ವ

ಪ್ರತಿಯೊಂದು ಪದಕ್ಕೂ ಅದರದ್ದೇ ಆದ ಅರ್ಥ ಇರುವಾಗ ತಪ್ಪು ಉಚ್ಛಾರಣೆ ಯನ್ನ ಸಮರ್ಥಿಸಿಕೊಳ್ಳು(ಕೊಲ್ಲು)ವುದು ಎಷ್ಟರಮಟಿಗೆ ಸರಿ,
ಅಭಿಮಾನ ಅಂತರಂಗದ ಭಾಷೆ ಅದಕ್ಕೆ ಯಾವುದೇ ಕಟ್ಟುಪಾಡುಗಳಿಲ್ಲ,
ಆದರೆ ವಿಷಯಗಳನ್ನ ಮತ್ತೊಬ್ಬರಿಗೆ ಮುಟ್ಟಿಸುವಾಗ ಭಾಷೆ ಪದಬಳಕೆ ಧಾಟಿ ಎಲ್ಲವೂ ಗಣ್ಯ .

ಬೇಜಾರ್ ಮಾಡ್ಕೋಬೇಡಿ ಅರ್ಥಮಾಡ್ಕೊಳಿ
ತಪ್ಪಿದ್ರೆ ಹೇಳಿ(ಹೇಲಿ) ಸರಿ ನಾ.. ( ಏಳಿ ಹೇಳಿ ) ಏಳಿ ಎದ್ದೇಳಿ ,ಹೇಳಿ ಎದ್ದೇಳಿ ,ಹೇಳಿ ಎದ್ದೇಲಿ ,
ಕೆಲವು ವಿಷೇಶ ಅರ್ಥ ಕೊಡುವ ಪದಗಳು ಈ ಥರ ಅನರ್ಥಕ್ಕೆ ಕಾರಣ ವಾಗುತ್ತವೆ ಅದು ಸಹಜ ಕೆಲವು ಸಲ ತಿದ್ದ್ಕೋ ಬೇಕಾಗುತ್ತೆ.
ಅದುಬಿಟ್ಟು, ನಾ ಮಾಡಿದ್ದೇ ಸರಿ ನಾ ಆಡಿದ್ದೇ ಸರಿ, ತಪ್ಪು ನನ್ನ ಹೆಮ್ಮೆ ಅಂದರೆ ನಿಮ್ಮ ತರ್ಕಕ್ಕೆ ನಮ್ದು ಒಂದು ಜೈ ಹೆಂಗಾರ ಬಾಯ್ ಬಡ್ಕಳಿ ,
ಗ್ರಾಮೀಣ ಸೊಗಡಿನಲಿ ಒಂದು ಶೈಲಿ ಇದೆ ಅದು ಪದಗಳ ಅರ್ಥ ಹಾಳು ಮಾಡಿಲ್ಲ ಉದಾಹರಣೆ: ಬಂದ ಹೋದ ಹ್ವಾದ ಕುಂತ್ಕ ನಿಂತ್ಕ ಬತ್ತೀಯ ಹೊಯ್ತೀಯಾ ಮೂದೇವಿ ಸಿವಾ(ಶಿವಾ) ಇಲ್ಲಿ ಸಿವಾ ಅನ್ನೊ ಮತ್ತೊಂದು ಅರ್ಥಕೊಡುವ ಪದ ಕನ್ನಡ ದಲ್ಲಿ ಇಲ್ಲ ಹಾಗಾಗಿ ಇದು ಸ್ವೀಕೃತ , ಸ್ವಾಮಿ, ಬುಡ್ಬ್ಯಾಡಿ ಕನ್ರಲ ಓಗ್ಲ ಬಲ , ವತಾರೆ ಮಾದೇಸ ಮಯೆಸಾ ಸಂದೆ ಒಪ್ಪೊತ್ತು ಸ್ಯಾನೆ ದಪ ಹೈಕ್ಳು ಐಕ-ಮಕ್ಕ ತೀಟೆ ಮುದೆವಿ ಕ್ಯಾಮೆ ಒಸಿ , ಅಪ್ಪ ನ್ನ ಅಣ್ಣ ಅಮ್ಮನ್ನ ಅಕ್ಕ ಈಥರ, ಸಂಭಂಧಗಳಲ್ಲೂ ಸಹ ಅರ್ಥಕ್ಕೆ ಧಕ್ಕೆ ಬರದ ಹಾಗೆ ಪರ್ಯಾಯ ಬಳಕೆ ಇದೆ. ( ಹಾಗಂತ ಗಂಡನ್ನ ಅಣ್ಣ ಅಂತಾನೋ ಹೆಂಡತಿ ನ ಅಕ್ಕ ಅಂತಾನೋ ಹೇಳಿ, ಇದು ನನ್ನ ಸೊಗಡು ಅಂದ್ರೆ ಸರಿ ಅನ್ನಬಹುದ )

ಇನ್ನು ಹಲವು ಇದು ಸೊಗಡು ಇದು ಅದರ ಚಲುವು ಅದರ ವರಸೆ ,ಇದು ಖುಷಿ ಕೊಡುತ್ತೆ

"ಅ" ಕಾರ "ಹ" ಕಾರ ಬಹಳಾ ಜನ ತಪ್ತಾರೆ ಅದು ಉಚ್ಛಾರಣೆ ಬಗ್ಗೆ ಇರುವ ಒಂದು ಗೊಂದಲ ಮತ್ತು ಅಳುಕು ಹಿಂಜರಿಕೆ ಸ್ವಭಾವ ಇರುವ ಮನಸ್ತಿತಿಯ ವ್ಯಕ್ತಿತ್ವ್ಚ ದಲ್ಲಿ ಕಂಡುಬರುವ ಲಕ್ಷಣಗಳು ತೊದಲು ಇದೆಯಲ್ಲ ಹಾಗೆ ಅಷ್ತೇ ಅದನ್ನ ಸರಿಯಾಗಿ ಹೇಳಿಕೊಟ್ಟು ತಿದ್ದಿದ್ರೆ ಸರಿ ಹೋಗುತ್ತೆ ಅದುನ್ನ ಸೊಗಡು ಅಂದು ಸುಮ್ನೆ ಯಾಕೆ ಸಮರ್ಥಿಸಿಕೊಳ್ತೀರಿ,
ಚಿಕ್ಕಮಕ್ಕಳು ಉಚ್ಛೆ ಹುಯ್ಕೊಂಡ್ರೆ ಮಕ್ಳು ಸಹಜಾ ಅಂತ ಸುಮ್ಮಗಿರ್ಬೋದು , ದೊಡ್ಡೋರು ಆದ್ಮೇಲೂ ...

ಹಳ್ಳಿ ಭಾಷೆ ಲಿ ಸೊಗಡಿದೆ ಅದಕ್ಕೆ ಅದರದೇ ಆದ ಶೈಲಿ ಇದೆ ಆದ್ರೆ ಪದಗಳ ಅರ್ಥ ಖಂಡಿತಾ ಕೆಡಿಸೋಲ್ಲ ಪದಗಳ ಅರ್ಥ ಬದಲಾಗಿಲ್ಲ ಬದಲಾಗಿಲ್ಲ ,

ಅಕ್ಕಿ (ಹಕ್ಕಿ) ಒಂದೇನಾ
ಮನೆ ಇಂದ ಎಣ್ಣೆ ತನ್ನಿ.. ಯಾರ್ದಾದ್ರು ಮನೆಲಿ ಎಣ್ಣೆ ತರುವ, ಸಿಗುತ್ತೆ .
ಆದ್ರೆ ಅಂಗಡಿ ಇಂದ ಹೆಣ್ಣೆ ತನ್ನಿ, ತರ್ತೀರ ಸಾದ್ಯನ?
ಶಾಲೇ ಲಿ ಮಾಸ್ತರ್ರು ಕಲಿಸಿದ್ದೇ ತಪ್ಪಾ ಹಾಗಾದ್ರೆ ,

ಇದನ್ನ ಯಾವುದೇ ಒಬ್ಬ ವ್ಯಕ್ತಿಯ ದೃಷ್ಟಿ ಇಂದ ಹೇಳಿದ್ದಲ್ಲಾ ಇದೊಂದು ಸರ್ವಜನಿಕ ವಿಷಯ ಸಾಮಾನ್ಯ ಜ್ಞಾನ , ತಪ್ಪುತಿಳ್ಕೊಂಡ್ರೆ ತಿಳ್ಕೊಂಡಿರಿಗೆ ನಷ್ಟ ಅಂತ ಸುಮ್ನಾಗೋದಲ್ಲ , ಇನ್ನೂ ನಾಲ್ಕು ಜನ ಅದೇದಾರಿ ಹಿಡಿತಾರೆ ಅನ್ನೋ ವಿಷಾದ

ಕನ್ನಡ ನುಡಿ ಬಲು ಚೆಂದ , ತಪು ಉಚ್ಛಾರಣೆ ಮಾಡಿ ಇದರ ಅರ್ಥ ಹಾಳು ಮಾಡಬೇಡ ಕನ್ನಡದ ಮುದ್ದುಕಂದ .



ಹೃದಯಶಿವ ಅವರ ಕಿರುಪರಿಚಯ
ಹೃದಯಶಿವ
ಊರು: ಕನಕಪುರ
ವಾಸ: ಬೆಂಗಳೂರು

-ರಶ್ಮಿ ಕಾಸರಗೋಡು




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.