ಅಂಕಣಗಳು

ಮೋದಿ ಎಂಬ ರೈಲ್ ಗಾಡಿಗೆ... ಕಾಂಗ್ರೆಸ್ ಎಂಬ ಲೂನಾ ಸಿಕ್ಕು...

Published On :

ತಿಮ್ಮಾ: ಇನ್ನೂ ಯಾಕ್ ಹೋಗಿಲ್ಲ ಅವಾಡ/ಹೋಗ್ತೇನಿ ಅಂದಾವಾಡಡ..ಮೋದಿ ಪ್ರಧಾನಿ ಆದ ದೇಶದಾಗ ನಾ ಇರಾಂಗಿಲ್ಲಾ ಅಂದಾವಾಡಡ..
ತಮ್ಮಾ: ಇದೇನ ತಿಮ್ಮಾ ಬೇಂದ್ರೆ ಅಜ್ಜನ ಸ್ಟೈಲ್‌ನ್ಯಾಗ ಬ್ಯಾರೆ ಹಾಡಾ ಹಾಡಕತ್ತಿಯಲಾಡ!!
ತಿಮ್ಮಾ: ನಮ್ಮ ರಾಜ್ಯದ ಸಾಹಿತಿ ಒಬ್ಬರ ಅಲ್ಲ, ಕಿಂಗ ಖಾನಸಾಹೇಬರು ಹಿಂಗಡ ಹೇಳಿದ್ದರು. ಅದಕ್ಕ ನಾನು ಸಾಮೂಹಿಕವಾಗಲಿ ಅಂತ ಜೋರ ಜೋರ ಹಿಂಗ ಹಾಡಾಕತ್ತೇನಿ...
ತಮ್ಮಾ: ನೀ ಎಷ್ಟು ಜೋರ ಹಾಡಿದರೂ ಅವರೇನು ಬಿಟ್ಟು ಹೋಗಂಗಿಲ್ಲ, ಯಾರ ಗಾಡಿ ಖರ್ಚು ಕೊಟ್ಟಾರು, ಈ ಊರು ಈ ದೇಶ ಬಿಟ್ಟು ಹೋಗಂಗಿಲ್ಲ ನಾವು ಅಂತ ಪಟ್ಟ ಹಿಡಿದ ಕೂತಾರ ಈಗವರು.
ತಿಮ್ಮಾ: ಯಾಕ್?
ತಮ್ಮಾ: ಯಾಕಂದರ ಯಾವ ದೇಶದವರು ಇವರನ್ನ ಒಳಗ ಕರಕೊಳ್ಳಾಕಿಲ್ಲಾ ನೋಡ.
ತಿಮ್ಮಾ: ಹೌದಡ ಬಿಡಡ, ಆಗೋಂದು ಈಗ ಇನ್ನೋಂದು ಮಾತಾಡವರನ್ನ ಕಟಿಗೊಂಡ ಏನ್ ಮಾಡ್ತಾರ ಆ ದೇಶದವರು?
ತಮ್ಮಾ: ಇರಲಿ ಬಿಡ್ ತಿಮ್ಮಾ 125 ಕೋಟಿ ಜನಸಂಖ್ಯಾದಾಗ ಇಂಥವರೊಂದು ಅರ್ಧ ಗಿರ್ಧ ಪರಸೆಂಟ್ ಇದ್ದರ ಏನೂ ಫರಕ ಬೀಳುದಿಲ್ಲ...
ತಿಮ್ಮಾ: ಕರೆಕ್ಟ ಹೇಳಿದಿ... ಪ್ರಗತಿ ಬಯಸೋ ಜನಸಾಮಾನ್ಯ ನೀಡಿದ ಜನಾದೇಶಕ್ಕ ನಾ ನಾ ಅಂತ ಹಾರ್ಯಾಡವರೆಲ್ಲಾ ಸೋತ ಹೈರಾಣಾಗ್ಯಾರ ಇನ್ನ ಹಿಂದೋಂದೋ ಒಂದಡ ಕಾಲದಾಗ ಏನ್ ಕಾರಣಕ್ಕೂ ಪ್ರಸಿದ್ಧರಾದವರು ಹಿಂಗ ಬಡಬಡಿಸಿದರ ಏನ್ ಫರಕ ಇಲ್ಲ.
ತಮ್ಮಾ: ಅದಡ ಮಜಾ ನೋಡ, ಮೋದಿಯವರದು ಪ್ರಗತಿ ಮಂತ್ರ... ಮಾತಾಡಿದರ ದೇಶ ಮೊದಲು ಅಂತಾರ
ತಿಮ್ಮಾ: ಆದರ ಕನ್ನಡದಾಗಿನ ಕೆಲವು ಪ್ರಗತಿಪರರು ಬಿಜೆಪಿಗೆ ಬಹುಮತ ಬರಬಾರದಾಗಿತ್ತು... ಬಂದದ್ದು ನಮ್ಮ ದೇಶದ ದುರಂತ ಅಂತಾರಲಾಡಡ...
ತಮ್ಮಾ: ದುರಂತ ದೇಶದ್ದಲ್ಲ, ಅವರ ದುರಂತ...
ತಿಮ್ಮಾ: ಯಾಕಂತಿ?
ತಮ್ಮಾ: ಯಾಕಂದರ ಇವರ ಮಾತನ್ನ ಯಾರು ಕೇಳಂಗಿಲ್ಲ... ಇವರ ಹೇಳಿರೋದನ್ನ ಗಂಭೀರವಾಗಿ ಪರಿಗಣಿಸಂಗಿಲ್ಲ...
ತಿಮ್ಮಾ: ಒಟ್ಟನ್ಯಾಗ ಇವರಿಗೆ 'ಕ್ಯಾರೆ' ಅನ್ನವರು ಇರುದಿಲ್ಲ...
ತಮ್ಮಾ: ಹೌದು... ಇಷ್ಟ ದಿವಸ... ಅಲ್ಲಲ್ಲಿ ಇಷ್ಟ ವರ್ಷ ಇವರ್ಯಾರಿಗೆ ಗೌರವ ಕೊಟ್ಟಿದ್ದರು? ಇವರು ಯಾರ ಮಾತು ಕೇಳಿದ್ದರು.. ದೇಶ, ದೇಶದ ಭದ್ರತೆ... ದೇಶ ಪ್ರೇಮ... ನನ್ನವರಿಗಾಗಿ ಇದು ಅಂತ ಎಂದರೆ ಹೇಳ್ಯಾರಿವರು?
ತಿಮ್ಮಾ: ನನಗಂತು ನೆನಪಿಲ್ಲ ಬಿಡು...
ತಮ್ಮಾ: ನಿನಗೊಬ್ಬಗಡ ಅಲ್ಲ, ಯಾರಿಗೂ ನೆನಪಿಲ್ಲ... ಯಾಕಂದರ ಇವರು ಅಂಥಾ ಮಾತನ್ನು ಹೇಳೇಯಿಲ್ಲ...
ತಿಮ್ಮಾ: ಹೌದು ಇವರು ಏನಿದ್ದರು 'ನಾನು'... 'ನಂದು'... ಅಂತ ಬಾಜಾ ಭಜಂತ್ರಿ ಊದಿದವರು...
ತಮ್ಮಾ: ಖರೇ ಬಿಡು, ಆ ಉದಾತ್ತ ವ್ಯಕ್ತಿತ್ವದ ಹತ್ತರ ಸಹಿತ ಸುಳದಾಡಬಾರದು ಇವರು...
ತಿಮ್ಮಾ: ಈ ರೇಲ್ವೇ ಕ್ರಾಸಿಂಗ್‌ನ್ಯಾಗ ಬಾಯ್ ಮಿಸ್ಟೇಕ್ ಲೂನಾ ಮೋಪೆಡ್‌ಗೆ ಮತ್ತ ರೈಲಗಾಡಿಗೆ ಆ್ಯಕ್ಸಿಡೆಂಡ್ ಆದರ ಪರಿಣಾಮ ಏನಾಗಿತದಲಾಡಡ... ಹಾಂಗಾಗೇತಿ ಈ ಚುನಾವಣದಾಗ.
ತಮ್ಮಾ: ಆದರ  ಬಿಜೆಪಿ ಮಂದಿ ಇದ್ದದ್ದನ್ನ ಇದ್ದಹಂಗ ಹೇಳಿ ಎದ್ದ ಬಂದಾರ ಅವರು. ಭ್ರಷ್ಟರನ್ನ ನಂಬಬ್ಯಾಡರಿ ಅಂದಾರ... ದೇಶ ಮಾರವರನ್ನ ಅಧಿಕಾರಕ್ಕ ತರಬ್ಯಾಡರಿ ಅಂತ ಹೇಳ್ಯಾರ... ದೇಶಕ್ಕ ಹೆದರಸೋ ಹುಂಬರನ್ನ ದೂರ ಇಡರಿ ಅಂತ ಕೇಳಿಕೊಂಡಾರ...
ತಿಮ್ಮಾ: ಹೌದು, ನಾವು ಹಿಂಗಡ ನಡಕೋತೇವಿ... ಅವರಿಗೆ ಅರವತ್ತು ವರ್ಷ ಅವಕಾಶ ಕೊಟ್ವೀರಿ. ನಮಗ 60 ತಿಂಗಳ ಕೋಡ್ರಿ ಅಂತ ವಿನಂತಿಸಿಕೊಂಡಾರ...
ತಿಮ್ಮಾ: ಯಸ್ ಆ ವಿನಂತಿಯೋಳಗ ವಿನಯ ಅದ, ದೇಶ ಪ್ರೀತಿ ಎದ್ದ ಕಾಣಸ್ತದ...
ತಿಮ್ಮಾ: ಹೌದರಿ, ಮೊನ್ನೆ ಪಾರ್ಲಿಮೆಂಟ್‌ನ್ಯಾಗ ಕಾಲಿಡೋದಕ್ಕಿಂತ ಮೊದಲ, ಮಂಡಿ ಊರಿ ನಮಸ್ಕಾರ ಮಾಡಿ, ಕಾಲಿಟ್ಟರಲ್ಲರಿ ಆ ಪುಣ್ಯಾತ್ಮ.!!
ತಮ್ಮಾ: ಹೌದು... ಆದರ ದಶಕಗಳಿಂದ ಆ ಹೊಸಲು ತುಳದ ಯಾವ ರಾಜಕಾರಣಿಗೂ ಅದೊಂದು ಪವಿತ್ರ ಸ್ಥಳ ಅನಿಸಿರಲಿಲ್ಲ...
ತಿಮ್ಮಾ: ಯಸ್, ಅದೊಂದು ಅಧಿಕಾರ ಚಲಾಯಿಸುವ ಕೇಂದ್ರ... ತಾನು ತನ್ನವರು ಶ್ರೀಮಂತರಾಗುವ ಸಾಧಿ ಅಂತ ಅನಕೊಂಡಿದ್ದರು ಅವರು.
ತಮ್ಮಾ: ಅದಕ್ಕ ಮಾಡಿದ್ದುಣ್ಣೋ ಮಾರಾಯಾ...
ತಿಮ್ಮಾ: ಆದರ ಸುಮ್ಮನ ಉಣಕೊಂಡ ಇರಲಾರದ... ಇದು ಗಿಮಿಕ್ಕು, ಪಬ್ಲಿಸಿಟಿ ಸ್ಟಂಟ್, ಕಾರ್ಪೋರೆಟ್ ಪದ್ಧತಿ ಪ್ರಚಾರ, ನಿಜವಾದ ಗೆಲುವು ಅಲ್ಲವೇ ಅಲ್ಲ ಅಂತಾರ.!!
ತಮ್ಮಾ: ಸಿಗಲಾರದ ದ್ರಾಕ್ಷಿ ಹುಳಿಯಪಾ... ಬೇಕಾದಷ್ಟು ಕಾರಣ ಕೊಡಬಹುದು ಬಿಡೋ... ನನ್ನ ಪ್ರಕಾರ ಮೋದಿ ಅವರ ಗೆಲುವಿಗೆ ಕಾರಣ ಹುಡುಕೋದಕ್ಕಿಂತ ತಾವು ಯಾಕ್ ಸೋತಿವಿ ಅಂತ ಸೋತವರು ಕಂಡಕೊಳ್ಳೋದರಾಗ ನಮ್ಮ ದೇಶದ ಪ್ರಗತಿ ಅದ ಅಂತ ಅನಸ್ತದಪಾ...

ಯಶವಂತ ಸರದೇಶಪಾಂಡೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.