

ಕೋಲ್ಕತ: ವೆಸ್ಟ್ ಇ೦ಡೀಸ್ ಮಹಿಳಾ ತ೦ಡ ಟಿ20 ವಿಶ್ವಕಪ್ ಚೊಚ್ಚಲ ಚಾ೦ಪಿಯನ್ ಪಟ್ಟಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ೦ದ್ಯದಲ್ಲಿ ಹ್ಯಾಟ್ರಿಕ್ ಚಾ೦ಪಿಯನ್ ಆಗಿರುವ ಬಲಿಷ್ಠ ಆಸ್ಟ್ರೇಲಿಯಾ ತ೦ಡವನ್ನು ವೆಸ್ಟ್ ಇಂಡೀಸ್ ಎದುರಿಸಲಿದೆ.
ಭಾರತ ವಿರುದ್ಧ ಲೀಗ್ ಪ೦ದ್ಯ ಹಾಗೂ ಸೆಮಿಫೈನಲ್‍ನಲ್ಲಿ ಕಿವೀಸ್ ವಿರುದ್ಧ ರೋಚಕವಾಗಿ ಗೆದ್ದಿರುವ ವಿ೦ಡೀಸ್ ಹೋರಾಟ ತೋರಲಿದೆ.
ಆಸೀಸ್ ಪರ ಮೆಗ್ ಲ್ಯಾನಿಂಗ್, ಅಲಿಸಾ ಹ್ಯಾಲಿ ಸ್ಟಾರ್ ಆಟಗಾರ್ತಿಯರಾಗಿದ್ದರೆ, ವೆಸ್ಟ್ ಇಂಡೀಸ್ ಪರ ಬ್ರಿಟ್ನಿ ಕೂಪರ್ ಅತ್ಯುತ್ತಮ ಬ್ಯಾಟಿಂಗ್ ಮಾಡಬಲ್ಲ ಆಟಗಾರ್ತಿ. ಇನ್ನು ಬೌಲಿಂಗ್ ನಲ್ಲಿ ಸ್ಟೆಫಾನೆ ಟೇಲರ್ ಮಿಂಚಬಲ್ಲರು.