

ಕೋಲ್ಕತಾ: ನಿಜಕ್ಕೂ ಇದು ವೆಸ್ಟ್ ಇಂಡೀಸ್ ಕ್ರಿಕೆಟ್ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣ. ಕೇವಲ 3 ತಿಂಗಳ ಅವಧಿಯಲ್ಲಿ 3 ವಿಶ್ವಕಪ್ ಗಳನ್ನು ಸಾಮಾನ್ಯ ಮಾತೇನಲ್ಲ. ವಿಂಡೀಸ್ ನ ಈ ಗೆಲುವಿನ ಜೈತ್ರ ಯಾತ್ರೆಗೆ ನಿಜಕ್ಕೂ ಸ್ಪೂರ್ತಿಯಾಗಿದ್ದು ಚಾಂಪಿಯನ್ ಡ್ಯಾನ್ಸ್.
ಇತ್ತೀಚೆಗೆ ವಿಂಡೀಸ್ ವಿರುದ್ಧ ಪಂದ್ಯಗಳನ್ನು ಗಮನಿಸಿದ್ದಾದರೆ ಪ್ರಮುಖವಾಗಿ ಭಾರತದ ವಿರುದ್ಧದ 2 ಸೆಮಿಫೈನಲ್ ಪಂದ್ಯ ಗೆದ್ದ ಬಳಿಕ ವಿಂಡೀಸ್ ಆಟಗಾರರ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಆಟಗಾರರು ಹೆಜ್ಜೆಹಾಕುತ್ತಿದ್ದುದು ಇದೇ ಚಾಂಪಿಯನ್ಸ್ ಡ್ಯಾನ್ಸ್ ಗೆ. ಕೇವಲ ಪುರುಷರ ತಂಡವಷ್ಟೇ ಅಲ್ಲ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ ಕೂಡ ಪ್ರಶಸ್ತಿ ಸ್ವೀಕರಿಸುವ ವೇಳೆ ಇದೇ ಚಾಂಪಿಯನ್ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದರು.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಆಲ್ ರೌಂಡರ್ ಆಟಗಾರ ಡ್ವೇಯ್ನ್ ಬ್ರಾವೋ ಅವರ ನೂತನ ವಿಡಿಯೋ ಆಲ್ಬಮ್ ಚಾಂಪಿಯನ್. ಖ್ಯಾತ ನಿರ್ಮಾಣ ಸಂಸ್ಥೆ ವೇಗಾ ಹೌಸ್ ಈ ವಿಡಿಯೋ ಆಲ್ಬಮ್ ಅನ್ನು ನಿರ್ಮಿಸಿದ್ದು, ಜೋಸೆಫ್ ಫರ್ನಾಂಡೋ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ವಿಡಿಯೋ ಆಲ್ಬಮ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಟಗಾರ ಕ್ರೀಡಾಕ್ಷೇತ್ರದಲ್ಲಿ ವಿಂಡೀಸ್ ಖ್ಯಾತಿಗಳಿಸಿರುವ ಆಟಗಾರರನ್ನು ಶ್ಲಾಘಿಸಿದ್ದಾರೆ.
ವಿಂಡೀಸ್ ಓಟದ ಆಟಗಾರ ಉಸೇನ್ ಬೋಲ್ಟ್, ದೈತ್ಯ ಕ್ರಿಸ್ ಗೇಯ್ಲ್, ಸಾಮಿ, ಬ್ರಾವೋ ಸೇರಿದಂತೆ ಕ್ರಿಕೆಟ್ ಮತ್ತು ಇತರೆ ಕ್ರೀಡೆಗಳ ಖ್ಯಾತ ಕ್ರೀಡಾಪಟುಗಳ ನಿಜವಾದ ಚಾಂಪಿಯನ್ ಗಳೆಂದು ಅವರನ್ನು ಶ್ಲಾಘಿಸಿದ್ದಾರೆ. ಬ್ರಾವೋ ಅವರ ಈ ಚಾಂಪಿಯನ್ ಡ್ಯಾನ್ಸ್ ಎಷ್ಟರ ಮಟ್ಟಿಗೆ ಯಶಸ್ಸು ಕಂಡಿದೆ ಎಂದರೆ, ಈ ವಿಡಿಯೋ ಯೂಟ್ಯೂಬ್ ಗೆ ಅಪ್ಲೋಡ್ ಆದ ಕೇವಲ 16 ದಿನಗಳಲ್ಲಿ ಸುಮಾರು 31 ಲಕ್ಷಕ್ಕೂ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ ಭಾರತ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ದೇಶದ ವಿವಿಧ ಮೂಲೆಗಳಲ್ಲಿರುವ ಕ್ಲಬ್ ಗಳಲ್ಲಿ ಇದೀಗ ಬ್ರಾವೋ ಅವರ ಈ ಚಾಂಪಿಯನ್ ಡ್ಯಾನ್ಸ್ ಗೆ ಹೆಜ್ಜೆ ಹಾಕಲಾಗುತ್ತಿದೆ.
ಇಡೀ ವಿಶ್ವದ ಗಮನ ಸೆಳೆದಿರುವ ಈ ಚಾಂಪಿಯನ್ ಡ್ಯಾನ್ಸ್ ನೋಡಬೇಕೇ ಹಾಗಾದರೇ ಈ ಲಿಂಕ್ ಕ್ಲಿಕ್ ಮಾಡಿ