

ಕೊಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾದ ಡೆಲ್ಲಿ ಡೇರ್ ಡೇವಿಲ್ಸ್ ತಂಡವನ್ನು ಮಣಿಸಿದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ 17.4 ಓವರ್‌ಗಳಲ್ಲಿ ಕೇವಲ 98 ರನ್‌ಗೆ ಸರ್ವಪತನ ಕಂಡಿತು. 99 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 14.1 ಓವರ್ ಗಳಲ್ಲಿ 1 ವಿಕೆಟ್ ಗೆ 99 ಗಳಿಸಿ ಟೂರ್ನಿಗೆ ಶುಭಾರಂಭ ಮಾಡಿದರು.
ಕೊಲ್ಕತ್ತಾ ಪರ ರಾಬಿನ್ ಉತ್ತಪ್ಪ 35 ರನ್ ಗಳಿಸಿ ಔಟಾದರೆ, ನಾಯಕ ಗೌತಮ್ ಗಂಭೀರ್ ಅಜೇಯ 38 ಹಾಗೂ ಮನೀಷ್ ಪಾಂಡೆ 15 ರನ್ ಗಳಿಸಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ಪರ ಮಯಾಂಕ್ ಅಗರ್ವಾಲ್ 9, ಕ್ವಿಂಟನ್ ಡಿ ಕಾಕ್ 17, ಶ್ರೇಯಸ್ ಅಯ್ಯರ್ 0, ಕರುಣ್ ನಾಯರ್ 3, ಸಂಜು ಸ್ಯಾಮ್ಸನ್ 15, ಪವನ್ ನೇಗಿ 11, ಬ್ರಾಥ್‌ವೇಟ್ 6, ಕ್ರಿಸ್ ಮೋರಿಸ್ 11, ಜಹೀರ್ ಖಾನ್ 4, , ಅಮಿತ್ ಮಿಶ್ರಾ 3 ಹಾಗೂ ಕೌಲ್ಟರ್ ನಿಲ್ ಅಜೇಯ 7 ರನ್ ಗಳಿಸಿದ್ದಾರೆ.
ಕೋಲ್ಕತ್ತಾ ಪರ ಅಂಡ್ರೆ ರಸೆಲ್ ಹಾಗೂ ಬ್ರಾಡ್ ಹಾಗ್ ತಲಾ 3 ವಿಕೆಟ್ ಪಡೆದರೆ, ಹೇಸ್ಟಿಂಗ್ಸ್ ಮತ್ತು ಪೀಯುಷ್ ಚಾವ್ಲಾ ತಲಾ 2 ವಿಕೆಟ್ ಪಡೆದಿದ್ದಾರೆ.