ಫ್ಲೋರಿಡಾ ಟಿ20: ವಿಂಡೀಸ್ ಭರ್ಜರಿ ಬ್ಯಾಟಿಂಗ್; ಭಾರತಕ್ಕೆ 246 ರನ್ ಬೃಹತ್ ಗುರಿ

ಅಮೆರಿಕದ ಫ್ಲೋರಿಡಾದಲ್ಲಿ ಶನಿವಾರ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಟೀಂ ಇಂಡಿಯಾಗೆ ಗೆಲ್ಲಲು 246 ರನ್ ಗಳ ಬೃಹತ್ ಗುರಿ ನೀಡಿದೆ.
ಭಾರತದ ವಿರುದ್ಧ ಶತಕ ಸಿಡಿಸಿದ ಎವಿನ್ ಲೂಯಿಸ್ (ಕ್ರಿಕ್ ಇನ್ಫೋ ಚಿತ್ರ)
ಭಾರತದ ವಿರುದ್ಧ ಶತಕ ಸಿಡಿಸಿದ ಎವಿನ್ ಲೂಯಿಸ್ (ಕ್ರಿಕ್ ಇನ್ಫೋ ಚಿತ್ರ)
Updated on: 

ಫ್ಲೋರಿಡಾ: ಅಮೆರಿಕ ಫ್ಲೋರಿಡಾದಲ್ಲಿ ಶನಿವಾರ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಟೀಂ ಇಂಡಿಯಾಗೆ ಗೆಲ್ಲಲು 246 ರನ್ ಗಳ ಬೃಹತ್ ಗುರಿ ನೀಡಿದೆ.

ಟಾಸ್ ಗೆದ್ದ ಭಾರತ ತಂಡದ ಮೊದಲು ಬೌಲಿಂಗ್ ಆರಿಸಿಕೊಂಡು ವಿಂಡೀಸ್ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕುವ ಕಾರ್ಯತಂತ್ರಕ್ಕೆ ಎವಿನ್ ಲೂಯಿಸ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಅಕ್ಷರಶಃ ತಣ್ಣೀರೆರಚಿದರು. ಪಂದ್ಯದ ಆರಂಭದಿಂದಲೂ ಭಾರತೀಯ ಬೌಲರ್ ಗಳನ್ನು ದಂಡಿಸುತ್ತಾ ಸಾಗಿದ ಲೂಯಿಸ್ 9 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಕೇವಲ 49 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಜಡೇಜಾ ಬೌಲಿಂಗ್ ನಲ್ಲಿ ಔಟ್ ಆದರು. ಲೂಯಿಸ್ ಗೆ ಮತ್ತೋರ್ವ ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್ ಉತ್ತಮ ಸಾಥ್ ನೀಡಿದರು.

33 ಎಸೆತ ಎದುರಿಸಿದ ಚಾರ್ಲ್ಸ್ ಕೂಡ 7 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ ಭರ್ಜರಿ 79 ರನ್ ಸಿಡಿಸಿ, ಶಮಿ ಬೌಲಿಂಗ್ ನಲ್ಲಿ ಔಟ್ ಆದರು. ಬಳಿಕ ಬಂದ ರಸೆಲ್ ಹಾಗೂ ಕೀರನ್ ಪೊಲ್ಲಾರ್ಡ್ ತಲಾ 22 ರನ್ ಗಳಿಸಿ ನಿರ್ಗಮಿಸಿದರು. ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ವಿಂಡೀಸ್ ದೈತ್ಯರ ವಿರುದ್ಧ ಭಾರತೀಯ ಬೌಲರ್ ಗಳು ತಿರುಗಿಬಿದ್ದರಾದರೂ, ಅಷ್ಟುಹೊತಿಗಾಗಲೇ ವಿಂಡೀಸ್ ತಂಡ 200 ರನ್ ಗಡಿ ದಾಟಿತ್ತು.

ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿದ್ದು, ಭಾರತಕ್ಕೆ ಗೆಲ್ಲಲು 246 ರನ್ ಗಳ ಬೃಹತ್ ಗುರಿ ನೀಡಿದೆ.

ಭಾರತದ ಪರ ರವೀಂದ್ರ ಜಡೇಜಾ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದರೆ, ಶಮಿ 1 ವಿಕೆಟ್ ಪಡೆದರು. ಬುಮ್ರಾ (4 ಓವರ್, 47 ರನ್), ಭುವನೇಶ್ವರ್ ಕುಮಾರ್ (4 ಓವರ್, 43ರನ್) ಹಾಗೂ ಶಮಿ (4 ಓವರ್, 48ರನ್) ದುಬಾರಿ ಬೌಲರ್ ಗಳೆನಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com