ಭುವನೇಶ್ವರ್ ಎಸೆದ ಚೆಂಡು ತಲೆಗೆ ಬಡಿದು ಕುಸಿದು ಬಿದ್ದ ಅಂಪೈರ್ ಪಾಲ್ ರೈಫೆಲ್

ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ವೇಗಿ ಭುವನೇಶ್ವರ್ ಕುಮಾರ್ ಎಸೆದ ಚೆಂಡು ಮೈದಾನದಲ್ಲಿ ಅಂಪೈರ್...
ಪಾಲ್ ರೈಫಲ್
ಪಾಲ್ ರೈಫಲ್
ಮುಂಬೈ: ಇಂಗ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ವೇಗಿ ಭುವನೇಶ್ವರ್ ಕುಮಾರ್ ಎಸೆದ ಚೆಂಡು ಮೈದಾನದಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಾಲ್ ರೈಫೆಲ್ ತಲೆಗೆ ಬಡಿದು ಕುಸಿದು ಬಿದ್ದ ಘಟನೆ ನಡೆದಿದೆ. 
ಚೆಂಡು ಬದಿಡು ಕುಸಿದು ಬಿದ್ದ ಪಾಲ್ ರೈಫೆಲ್ ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಸ್ಕಾನ್ ಮಾಡಲಾಯಿತು. ಸದ್ಯ ರೈಫಲ್ ಅವರು ಚೇತರಿಸಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ದಿನದ ಮಟ್ಟಿಗೆ ವಿಶ್ರಾಂತಿಗೆ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಊಟದ ನಂತರ ಈ ಘಟನೆ ನಡೆದಿದ್ದು ತಕ್ಷಣವೇ ಇಂಗ್ಲೆಂಡಿನ ವೈದ್ಯಕೀಯ ತಂಡ ಮೈದಾನದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಿತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 
ಬೌಂಡರಿ ಗೆರೆಯಲ್ಲಿದ್ದ ಭುವನೇಶ್ವರ್ ಚೆಂಡನ್ನು ಸ್ಟಂಪ್ ಬಳಿಯಿದ್ದ ಚೇತೇಶ್ವರ ಪೂಜಾರಾಗೆ ಎಸೆದರು. ಆದರೆ ಅದು ಮೈದಾನದಲ್ಲಿ ಅಂಪೈರ್ ಆಗಿದ್ದ ಪಾಲ್ ಅವರ ತಲೆಯ ಹಿಂದುಗಡೆ ಬಡಿದಿದ್ದು ಇದರಿಂದ ಪಾಲ್ ಸ್ಥಳದಲ್ಲೇ ಕುಸಿದು ಬಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com