ಐಸಿಸಿ ರ್ಯಾಂಕಿಂಗ್: ಕೊಹ್ಲಿ ವಿಶ್ವದ ನಂ.2 ಬ್ಯಾಟ್ಸ್ ಮನ್, ಅಶ್ವಿನ್ ನಂ.1 ಬೌಲರ್

ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ದುಬೈ: ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಮುಂಬೈ ಟೆಸ್ಟ್ ನಲ್ಲಿ ದ್ವಿಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ರ್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 235 ರನ್ ಹೊಡೆಯುವ ಮೂಲಕ 53 ಪಾಯಿಂಟ್ ಸಂಪಾದಿಸಿ ಒಟ್ಟು 886 ರೇಟಿಂಗ್ ಪಾಯಿಂಟ್ ಗೆ ಏರಿಕೆ ಕಂಡಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ 897 ರೇಟಿಂಗ್ ಪಾಯಿಂಟ್ ನೊಂದಿಗೆ ಅಗ್ರಸ್ಥಾನದಲ್ಲಿದ್ದು ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಲು ಕೇವಲ 11 ಅಂಕಗಳ ಅವಶ್ಯಕತೆ ಇದೆ. ಇನ್ನು ಟಿ20ಯ ವಿಶ್ವದ ನಂಬರ್ 1 ಬ್ಯಾಟ್ಸ್ ಮನ್ ಆಗಿರುವ ವಿರಾಟ್, ಏಕದಿನ ಹಾಗೂ ಟೆಸ್ಟ್ ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ಆರ್ ಅಶ್ವಿನ್ ಟಾಪ್ ಬೌಲರ್
ಟೀಂ ಇಂಡಿಯಾದ ಕೇರಂ ಸ್ಪಿನ್ ಸ್ಪೆಷಲಿಸ್ಟ್ ಆರ್ ಅಶ್ವಿನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಮೊದಲ ಬಾರಿಗೆ 900 ರ ಗಡಿ ದಾಟಿರುವ ಅಶ್ವಿನ್ 904 ಪಾಯಿಂಟ್ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com