ಚೆನ್ನೈ: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಗೆ 391 ರನ್ ಗಳಿಸಿದೆ.
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇನ್ನಿಂಗ್ಸ್ ಪ್ರಾರಂಭಿಸಿದ ಇಂಗ್ಲೆಂಡ್ 477 ರನ್ ಗಳಿಗೆ ಸರ್ವಪತನ ಕಂಡಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಟೀಂ ಇಂಡಿಯಾ ಪರ ಕನ್ನಡಿಗ ಕೆಎಲ್ ರಾಹುಲ್ 199 ರನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ 391 ರನ್ ಗಳಿಸಿದೆ. ಪಾರ್ಥಿವ್ ಪಟೇಲ್ 71, ಚೇತೇಶ್ವರ ಪೂಜಾರ 16, ವಿರಾಟ್ ಕೊಹ್ಲಿ 15 ರನ್ ಗಳಿಸಿ ಔಟಾಗಿದ್ದಾರೆ. ಕರುಣ್ ನಾಯರ್ ಅಜೇಯ 71 ಹಾಗೂ ಮುರಳಿ ವಿಜಯ್ 17 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ಪರ ಬ್ರಾರ್ಡ್, ಮೊಹಿನ್ ಅಲಿ, ಸ್ಟೋಕ್ಸ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದಿದ್ದಾರೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಕೂಕ್ 10, ಜೆನ್ನಿಂಗ್ಸ್ 1, ರೂಟ್ 88, ಮೊಹಿನ್ ಅಲಿ 146, ಬೈರ್ಸ್ಟೋವ್ 49, ರಶೀದ್ 60, ಬ್ರಾರ್ಡ್ 19, ಬಾಲ್ 12 ರನ್ ಗಳಿಸಿದ್ದಾರೆ.