

ನವದೆಹಲಿ: ಕೋಚ್ ಆಯ್ಕೆ ಸಂದರ್ಶನ ಸಂಪೂರ್ಣ ಗೌಪ್ಯವಾಗಿತ್ತು. ನಾನು ಶಾಸ್ತ್ರಿಯವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನೀವು ಕ್ರಿಕೆಟ್ ಸಲಹಾ ಸಮಿತಿಯ ಇತರ ಸದಸ್ಯರನ್ನೂ ಕೇಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಕೋಚ್ ಸ್ಥಾನ ಕೈ ತಪ್ಪಿ ಹೋಗಲು ಸೌರವ್ ಗಂಗೂಲಿ ಕಾರಣ ಎಂದು ರವಿ ಶಾಸ್ತ್ರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗಂಗೂಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಮಂಗಳವಾರ ತಾಜ್ ಬೆಂಗಾಲ್ ನಲ್ಲಿ ಸಾಯಂಕಾಲ 5ರಿಂದ 6ಗಂಟೆಯೊಳಗೆ ರವಿ ಶಾಸ್ತ್ರಿಯವರ ಸಂದರ್ಶನವಿತ್ತು. ಆ ಸಮಯದಲ್ಲಿ ತಾನು ಈಡನ್ ಗಾರ್ಡನ್ ಗೆ ಕ್ರಿಕೆಟ್ ಸಲಹಾ ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಅಲ್ಲದೆ ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡೂಲ್ಕರ್, ಸಂಜಯ್ ಜಗದಲೆಯವರ ಜತೆ ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.