ಪಾಕ್ ವಿರುದ್ಧ ವಿಂಡೀಸ್ ಮಹಿಳೆಯರಿಗೆ ವಿರೋಚಿತ ಗೆಲುವು

ಬುಧವಾರ ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ 4 ರನ್..
ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಖರಿ  (ಚಿತ್ರಕೃಪೆ: ಕ್ರಿಕ್ ಇನ್ಫೋ)
ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: ಕ್ರಿಕ್ ಇನ್ಫೋ)
Updated on: 

ಚೆನ್ನೈ: ಬುಧವಾರ ನಡೆದ ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡ 4 ರನ್ ಗಳ ರೋಚಕ ಜಯ ಸಾಧಿಸಿದೆ.

ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ  ವೆಸ್ಟ್ ಇಂಡೀಸ್ ತಂಡ ಎಸ್ ಆರ್ ಟೇಲರ್ (40 ರನ್) ಅವರ ಸಮಯೋಚಿತ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 103 ರನ್ ಗಳ ಸಾಧಾರಣ ಮೊತ್ತ  ಕಲೆಹಾಕಿತು. ವಿಂಡೀಸ್ ತಂಡವನ್ನು ಪಾಕಿಸ್ತಾನದ ಬೌಲರ್ ಗಳಾದ ಆನಮ್ ಅಮೀನ್ (4 ವಿಕೆಟ್) ಮತ್ತು ಸಾದಿಯಾ ಯೂಸುಫ್ (2 ವಿಕೆಟ್) ಜೋಡಿ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ  ಯಶಸ್ವಿಯಾದರು.

ಬಳಿಕ 104 ರನ್ ಗಳ ಮೊತ್ತವನ್ನು ಬೆನ್ನುಹತ್ತಿದ ಪಾಕಿಸ್ತಾನ ತಂಡಕ್ಕೆ ವಿಂಡೀಸ್ ನ ಎ ಮೊಹಮದ್ (3 ವಿಕೆಟ್) ಮಾರಕವಾಗಿ ಪರಿಣಮಿಸಿದರು. ಸಾಂಘಿಕ ಹೋರಾಟ ಪ್ರದರ್ಶಿಸಿದ ವಿಂಡೀಸ್  ಮಹಿಳಾ ತಂಡ ಪಾಕಿಸ್ತಾನ ತಂಡವನ್ನು ನಿಗದಿತ 20 ಓವರ್ ಗಳಲ್ಲಿ ಕೇವಲ 99 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆ ಮೂಲಕ ತನ್ನ ಮೊದಲ ಪಂದ್ಯದಲ್ಲಿ 4 ರನ್ ಗಳ ರೋಚಕ  ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಪಾಕಿಸ್ತಾನದ ಪ್ರಭಾವಿ ಬೌಲಿಂಗ್ ಮಾಡಿದ ಆನಮ್ ಅಮೀನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com