ಟಿ20 ವಿಶ್ವಕಪ್‌ ಗೆದ್ದ ತಂಡಕ್ಕೆ ಐಸಿಸಿಯಿಂದ ಸಿಗುವ ಬಹುಮಾನ ಎಷ್ಟು ಗೊತ್ತಾ...?

ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಎಷ್ಟು ಸಿಗುತ್ತದೆ ಗೊತ್ತಿದೆಯಾ....
2014ರ ವಿಶ್ವಕಪ್ ಟಿ20 ವಿಜೇತ ತಂಡ
2014ರ ವಿಶ್ವಕಪ್ ಟಿ20 ವಿಜೇತ ತಂಡ
Updated on: 

ದುಬೈ: ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಬಹುಮಾನದ ಮೊತ್ತ ಎಷ್ಟು ಸಿಗುತ್ತದೆ ಗೊತ್ತಿದೆಯಾ.

ಐಸಿಸಿ ಪ್ರಸಕ್ತ ಟಿ20 ವಿಶ್ವಕಪ್ ನಿಂದ ಬಹುಮಾನದ ಮೊತ್ತವನ್ನು ಶೇಖಡ 33 ರಷ್ಟು ಏರಿಸಿದ್ದು, ಆ ಮೂಲಕ ಟಿ20 ವಿಶ್ವಕಪ್ ಗೆದ್ದ ತಂಡ 3.5 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಇನ್ನು ರನ್ನರ್ ಅಪ್ ತಂಡ 1.5 ಮಿಲಿಯನ್ ಡಾಲರ್ ಬಹುಮಾನ ಪಡೆಯಲಿದೆ. ಸೆಮಿಫೈನಲ್ ನಲ್ಲಿ ಸೋತ ತಂಡಗಳು 7.50 ಲಕ್ಷ ಡಾಲರ್ ಸಿಗಲಿದೆ. ಇನ್ನೂ ಅಂತಿಮ 10ರ ತಂಡದಲ್ಲಿ ಪ್ರವೇಶ ಪಡೆದ ತಂಡಗಳಿಗೆ ಪ್ರತಿ ಪಂದ್ಯಕ್ಕೆ 3 ಲಕ್ಷ ಡಾಲರ್‌(2 ಕೋಟಿ) ಸರಣಿ ಶ್ರೇಷ್ಟ ಆಟಗಾರನಿಗೆ 10 ಸಾವಿರ ಡಾಲರ್‌(6.6 ಲಕ್ಷ ) ಸಿಗಲಿದೆ.

ಈ ಬಹುಮಾನ ಮೊತ್ತ ಮುಂದಿನ 2019 ಹಾಗೂ 2023ರ ಐಸಿಸಿ 50-50 ವಿಶ್ವಕಪ್‌‌ ಹಾಗೂ 2020ರ ಟಿ-20 ವಿಶ್ವಕಪ್‌‌ ತನಕ ಜಾರಿಯಲ್ಲಿರಲಿದೆ.

2014ರ ಟಿ20 ವಿಶ್ವಕಪ್ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಶ್ರೀಲಂಕಾ ತಂಡ 1.1 ಮಿಲಿಯನ್ ಡಾಲರ್(7.35 ಕೋಟಿ ರು.) ಪಡೆದುಕೊಂಡಿತ್ತು. ಇನ್ನು ರನ್ನರ್ ಅಪ್‌ ಆದ ಭಾರತ 5.5 ಲಕ್ಷ ಡಾಲರ್(3.67 ಕೋಟಿ ರೂ.) ಪಡೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com