

ಗುಜರಾತ್ ವಿರುದ್ಧ ಹ್ಯಾಟ್ರಿಕ್ ಪಡೆದು ತಂಡದ ಗೆಲುವಿಗೆ ಕಾರಣನಾದ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನ ಬದಲಾವಣೆ ಮಾಡಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿದೆ. ತಂಡವನ್ನು ಉತ್ತಮವಾಗಿ ಮುನ್ನಡೆಸಿದ ಮುರಳಿ ವಿಜಯ್ ತಂಡಕ್ಕೆ ಗೆಲುವಿನ ಸಿಹಿ ಉಣಿಸಿದರು.
ಅಕ್ಷರ್ ಪಟೇಲ್ ತನ್ನ 7ನೇ ಓವರ್ ನ ಕೊನೆಯ ಎರಡು ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಹಾಗೂ ಡ್ವೇನ್ ಬ್ರಾವೋ ವಿಕೆಟ್ ಪಡೆದರು. ಬಳಿಕ 11ನೇ ಓವರ್ ಮಾಡಿದ ಅಕ್ಷರ್ ಮೊದಲನೇ ಎಸೆತದಲ್ಲಿ ರವೀಂದ್ರ ಜಡೇಜಾ ಅವರ ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿ ಸಂಭ್ರಮಿಸಿದರು.
ಐಪಿಎಲ್ ಟಿ20ಯಲ್ಲಿ ಅಕ್ಷರ್ ಪಟೇಲ್ ಅವರು ಮೊದಲ ಹ್ಯಾಟ್ರಿಕ್ ಸಾಧನೆ ಆಗಗಿದೆ. ಇನ್ನು ಪಂದ್ಯಾವಳಿಯ 14ನೇ ಹ್ಯಾಟ್ರಿಕ್ ಸಾಧನೆಯಾಗಿದೆ.