ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಪ್ರಥಮ ಇನ್ನಿಂಗ್ಸ್ ಪ್ರಾರಂಭಿಸಿದೆ. ಇಂಗ್ಲೆಂಡ್ ಪರ ಆರಂಭಿಕರಾದ ಅಲಸ್ಟೈರ್ ಕುಕ್ 21, ಹಸೀಬ್ ಹಮೀದ್ 31 ಹಾಗೂ ಬೆನ್ ಡಟೆಕ್ 13 ರನ್ ಗಳಿಸಿ ಔಟಾದರೆ, ಜೋ ರೂಟ್ ಅಜೇಯ 93 ಹಾಗೂ ಮೋಯಿನ್ ಅಲಿ ಅಜೇಯ 48 ರನ್ ಗಳಿಸಿ ಆಡುತ್ತಿದ್ದಾರೆ.