ರಾಜ್‌ಕೋಟ್: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದ್ದು, 150 ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 513 ರನ್ ಗಳಿಸಿದೆ.
ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಸುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್, ಪ್ರಥಮ ಇನ್ನಿಂಗ್ಸ್ ನಲ್ಲಿ 513 ರನ್ ಗಳಿಸಿ ಆಡುತ್ತಿದೆ. ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 93 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿತ್ತು. ಇಂದು ಎರಡನೇ ದಿನ ಆರಂಭಿಸಿದ ಇಂಗ್ಲೆಂಡ್ ಉತ್ತಮವಾಗಿ ಆಡುತ್ತಿದ್ದು ಬೃಹತ್ ಮೊತ್ತ ಗಳಿಸಿದೆ.
ಇಂಗ್ಲೆಂಡ್ ಪರ ಆರಂಭಿಕರಾದ ಅಲಸ್ಟೈರ್ ಕುಕ್ 21, ಹಸೀಬ್ ಹಮೀದ್ 31, ಬೆನ್ ಡಟೆಕ್ 13, ಜೋ ರೂಟ್ 124, ಮೋಯಿನ್ ಅಲಿ 117, ಹಾಗೂ ಬೆನ್ ಸ್ಟೋಕ್ಸ್ ಅಜೇಯ 125 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತ ಪರ ರವೀಂದ್ರ ಜಡೇಜಾ 3, ಆರ್ ಅಶ್ವಿನ್, ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ.