ರಾಜ್ ಕೋಟ್: ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ಘಟ್ಟಕ್ಕೆ ತಲುಪಿದ್ದು ವಿಕೆಟ್ ಉಳಿಕೊಳ್ಳಲು ಟೀಂ ಇಂಡಿಯಾ ಪರದಾಡುವಂತಾಗಿದೆ.
ಇನ್ನಿಂಗ್ಸ್ ಪ್ರಾರಂಭಿಸಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 537 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ್ದ ಟೀಂ ಇಂಡಿಯಾ 488 ರನ್ ಗಳಿಗೆ ಆಲೌಟ್ ಆಗುವ ಮೂಲಕ 49 ರನ್ ಗಳ ಹಿನ್ನಡೆ ಅನುಭವಿಸಿತ್ತು.
ಭಾರತ ಸರ್ವಪತನದ ನಂತರ ದ್ವಿತೀಯ ಇನ್ನಿಂಗ್ಸ್ ಪ್ರಾರಂಭಿಸಿದ್ದ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 310 ರನ್ ಗಳ ಗುರಿ ಪಡೆದ ಭಾರತ ಕೊನೆಯ ದಿನದಾಟದಲ್ಲಿ 4 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ಇನ್ನು 25 ಓವರ್ ಗಳಲ್ಲಿ ಭಾರತ ತನ್ನ 6 ವಿಕೆಟ್ ಉಳಿಸಿಕೊಂಡಲ್ಲಿ ಮಾತ್ರ ಪಂದ್ಯ ಡ್ರಾ ಆಗಲಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ ಪರ ಮುರಳಿ ವಿಜಯ್ 31, ಗೌತಮ್ ಗಂಭೀರ್ 0, ತೇಜೇಶ್ವರ್ ಪೂಜಾರ 18, ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಔಟಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅಜೇಯ 25 ರನ್ ಹಾಗೂ ಆರ್ ಅಶ್ವಿನ್ ಅಜೇಯ 0 ರನ್ ಗಳಿಸಿ ಆಡುತ್ತಿದ್ದಾರೆ.