

ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಗೆಲುವಿನೊಂದಿಗೆ ಟೀಂ ಇಂಡಿಯಾ ತವರಿನಲ್ಲಿ ಅಜೇಯ ದಾಖಲೆಯನ್ನು ಸಮಗಟ್ಟಿದೆ.
2012ರ ಡಿಸೆಂಬರ್ ನಲ್ಲಿ ನಾಗ್ಪುರದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಡ್ರಾ ಪಂದ್ಯದ ಮೂಲಕ ಭಾರತ ಆಡಿದ 16 ಟೆಸ್ಟ್ ಪಂದ್ಯಗಳಲ್ಲಿ ಅಜೇಯವಾಗುಳಿದಿದೆ. ಇದಕ್ಕೂ ಮುನ್ನ 1960-64ರಲ್ಲಿ 16 ಪಂದ್ಯಗಳಲ್ಲಿ ಅಜೇಯ ಸಾಧನೆ ಮಾಡಿತ್ತು.
ವಿಶಾಖಪಟ್ಟಣಂ ಪಂದ್ಯದ ಅಂತ್ಯಕ್ಕೆ 13 ಗೆಲುವು ಮತ್ತು 3 ಡ್ರಾ ಫಲಿತಾಂಶ ಕಂಡಿದೆ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 4-0 ಸರಣಿ ಜಯ, ಅದೇ ವರ್ಷ ವೆಸ್ಟ್ ಇಂಡೀಸ್ ವಿರುದ್ಧ 2-0 ಗೆಲುವು, ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ 3-0ಯಿಂದ ಜಯಿಸಿದೆ.