

ನವದೆಹಲಿ: ಕ್ರಿಕೆಟಿಗ ಸುರೇಶ್ ರೈನಾ ಜನ್ಮ ದಿನದಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಶ್ ಮಾಡಿದ ಪರಿ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಸ್ ಟೇಲರ್ ರನ್ನು ಕಾಲೆಳೆದ ಸೆಹ್ವಾಗ್ ಅವರ ಟ್ವೀಟ್ ಗಳು ಹಾಸ್ಯಾಸ್ಪದವಾಗಿವೆ.
ಸುರೇಶಳ್ ರೈನಾರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ಸೆಹ್ವಾಗ್, ಎಲ್ಲರೂ ನೀವೇಕೆ ಐನಾ (ಕನ್ನಡಿ) ನೋಡಿದ್ದೀರಾ ಎಂದು ಕೇಳುತ್ತಾರೆ. ಅದಕ್ಕೆ ನನ್ನ ಉತ್ತರ ನಾನು ರೈನಾ ನೋಡಿದ್ದೇನೆ. ಹ್ಯಾಪಿ ಬರ್ತ್ ಡೇ ಸುರೇಶ್ ರೈನಾ ಎಂದು ಹೇಳಿದ್ದಾರೆ. ಇದಕ್ಕೆ ಸುರೇಶ್ ರೈನಾ ಕೂಡ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದಗಳು ವೀರೂ ಭಾಯ್ ಎಂದು ಟ್ವೀಟ್ ಮಾಡಿದ್ದಾರೆ. ಈ ನಡುವೆ ಅಖಾಡಕ್ಕಿಳಿದ ನ್ಯೂಜಿಲೆಂಡ್ ತಂಡದ ರಾಸ್ ಟೇಲರ್ ಅದೇನೋ ಟೈಪ್ ಮಾಡಲು ಹೋಗಿ ಮರೆತು ರೈನಾ ಮತ್ತು ಸೆಹ್ವಾಗ್ ರನ್ನು ಟ್ಯಾಗ್ ಮಾಡಿ ಖಾಲಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ವಿಭಿನ್ನವಾಗಿ ಉತ್ತರಿಸಿದ ಸೆಹ್ವಾಗ್, ವಾಟ್ ಹ್ಯಾಪೆಂಡ್ ಟೈಲರ್ ಜೀ...ನಮ್ಮನ್ನು ಟ್ಯಾಗ್ ಮಾಡಿ ಖಾಲಿ ಟ್ವೀಟ್ ಮಾಡಿದ್ದೀರಾ ಏನ್ ವಿಷ್ಯ...ನಿಮ್ಮ ಹೊಲಿಗೆಗಳು ಸರಿ ಎಂದು ಭಾವಿಸುತ್ತೇನೆ..ಬಹುಶಃ ಮುಂದಿನದಿನಗಳಲ್ಲಿ ನಿಮಗೆ ಹೆಚ್ಚೆಚ್ಚು ಆರ್ಡರ್ ಬರಬಹುದು ಎಂದು ಭಾವಿಸುತ್ತೇನೆ ಎಂದು ಟೇಲರ್ ಕಾಲೆಳೆದಿದ್ದಾರೆ. ಇದಕ್ಕೆ ತಕ್ಷಣ ಉತ್ತರಿಸಿದ ರಾಸ್ ಟೇಲರ್ ನನ್ನ ಮಗಳ ತುಂಟಾಟದಿಂದಾಗಿ ಖಾಲಿ ಟ್ವೀಟ್ ಬಂದಿದೆ ಎಂದು ಸಮರ್ಥನೆ ನೀಡಿದ್ದಾರೆ. ಬಳಿಕ ಸೆಹ್ವಾಗ್ ರಾಸ್ ಟೇಲರ್ ಅವರ ಉಭಯಕುಶಲೋಪರಿ ವಿಚಾರಿಸಿದ್ದಾರೆ.
ಒಟ್ಟಾರೆ ಈ ಮೂವರು ಕ್ರಿಕೆಟಿಗರ ಈ ಟ್ವೀಟ್ ಸರಣಿಗಳು ಕ್ರಿಕೆಟ್ ಅಭಿಮಾನಿಗಳಿಗೆ ಒಂದಷ್ಟು ಕ್ಷಣ ರಸದೌತಣ ನೀಡಿದ್ದಂತೂ ನಿಜ..
ಕ್ರಿಕೆಟಿಗರ ಹಾಸ್ಯಾತ್ಮಕ ಟ್ವೀಟ್ ಸರಣಿ ಇಲ್ಲಿದೆ.
@virendersehwag @ImRaina haha. Sorry mate. Daughter had my phone