

ಇಂಧೋರ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾಗೆ ಭಾರಿ ದಂಡ ವಿಧಿಸಲಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಹೊಸ ನೀತಿಸಂಹಿತೆಯನ್ವಯ ರವೀಂದ್ರ ಜಡೇಜಾಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಇದೇ ವೇಳೆ ರವೀಂದ್ರ ಜಡೇಜಾ ಮುಂದಿನ 1 ಟೆಸ್ಟ್ ಅಥವಾ 2 ಏಕದಿನ ಅಥವಾ 2 ಟಿ20 ಪಂದ್ಯಗಳಿಂದ ನಿಷೇಧಕ್ಕೊಳಗಾಗುವ ಭೀತಿ ಎದುರಿಸುತ್ತಿದ್ದಾರೆ.
ಪಂದ್ಯದ ವೇಳೆ ಜಡೇಜಾ 2 ಅನೌಪಚಾರಿಕ ಮತ್ತು 1 ಅಧಿಕೃತ ವಾರ್ನಿಂಗ್ ನಂತರವೂ 4ನೇ ಬಾರಿ ಪಿಚ್ ಮೇಲೆ ಓಡಾಡಿದ್ದರು. ಇದರಿಂದ ಭಾರತ ತಂಡಕ್ಕೆ 5 ರನ್ ಪೆನಾಲ್ಟಿ ಕೂಡ ಹಾಕಲಾಗಿತ್ತು.