

ಮುಂಬೈ: ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಕಮ್ ಬ್ಯಾಕ್ ಮಾಡಿರುವ ಸ್ಪಿನ್ನರ್ ಹರ್ಭಜನ್ ಸಿಂಗ್, ಟಿ20ಯಲ್ಲಿ ತಮ್ಮ 200ನೇ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
ಹರ್ಭಜನ್ ಸಿಂಗ್ ಟಿ20 ಕ್ರಿಕೆಟ್ನಲ್ಲಿ 200 ವಿಕೆಟ್ ಕಬಳಿಸಿದ ಸಾಧನೆ ಮಾಡಿದರಲ್ಲದೆ, ಅಷ್ಟೇ ವಿಕೆಟ್ ಪಡೆದಿರುವ ಟೀಮ್ ಇಂಡಿಯಾದ ಅಗ್ರ ಸ್ಪಿನ್ನರ್ ಆರ್ ಅಶ್ವಿನ್ ದಾಖಲೆ ಸರಿಗಟ್ಟಿದರು. ನಿನ್ನೆ ಐಪಿಎಲ್ ಟೂರ್ನಿ ನಿಮಿತ್ತ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಸ್ಮಿತ್ ಅವರ ವಿಕೆಟ್ ಪಡೆಯುವ ಮೂಲಕ ಟಿ20 ಮಾದರಿ ಕ್ರಿಕೆಟ್ ನಲ್ಲಿ 200 ವಿಕೆಟ್ ಕಬಳಿಸಿದ ಸಾಧನೆ ಗೈದರು. ಇದಕ್ಕೂ ಮೊದಲು ಆರ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ಸಾಧನೆ ಗೈದ ಭಾರತೀಯ ಬೌಲರ್ ಗಳಾಗಿದ್ದಾರೆ.
ಇನ್ನು ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆತ್ತು ವಿಕೆಟ್ ಗಳಿಸಿದ ಬೌಲರ್ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ (367ವಿಕೆಟ್) ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಶ್ರೀಲಂಕಾದ ಲಸಿತ್ ಮಲಿಂಗಾ (315 ವಿಕೆಟ್) ಇದ್ದಾರೆ. ಇನ್ನು ಪಟ್ಟಿಯಲ್ಲಿ ಅಮಿತ್ ಮಿಶ್ರಾ (208 ವಿಕೆಟ್) 16ನೇ ಸ್ಥಾನದಲ್ಲಿದ್ದು, 200 ವಿಕೆಟ್ ಗಳಿಸಿರುವ ಆರ್ ಅಶ್ವಿನ್ 17ನೇ ಸ್ಥಾನದಲ್ಲಿದ್ದಾರೆ.