ಗಂಗೂಲಿ ಕನಸಿನ ಐಪಿಎಲ್ ತಂಡದಲ್ಲಿ ಧೋನಿ, ವಾರ್ನರ್‌‌ಗೆ ಇಲ್ಲ ಸ್ಥಾನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಅಗ್ರಸ್ಥಾನ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಮ್ಮ ಕನಸಿನ ಐಪಿಎಲ್...
ಸೌರವ್ ಗಂಗೂಲಿ
ಸೌರವ್ ಗಂಗೂಲಿ
Updated on: 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಅಗ್ರಸ್ಥಾನ
ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಮ್ಮ ಕನಸಿನ ಐಪಿಎಲ್ ತಂಡದ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಗೆ ಸ್ಥಾನ ಇಲ್ಲ. 
ಇನ್ನು 2017ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ನಾಯಕ ವಿರಾಟ್ ಕೊಹ್ಲಿ ಅಗ್ರ ಪಂಥಿಯಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ ಮತ್ತು ಆರಂಭಿಕರಾಗಿದ್ದಾರೆ, ಮೂರನೇ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಇದ್ದರೆ, ನಾಲ್ಕನೇಯವರಾಗಿ ಎಬಿಡಿ ವಿಲಿಯರ್ಸ್ ಸ್ಥಾನ ಪಡೆದಿದ್ದಾರೆ. 
ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ನಿತೀಶ್ ರಾಣಾ ಐದನೇ ಆಟಗಾರನಾಗಿದ್ದು ಕನ್ನಡಿಗ ಮನೀಶ್ ಪಾಂಡೆ ಆರು ಮತ್ತು ರಿಶಭ್ ಪಂತ್ ಏಳನೇಯವರಾಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಸುನೀಲ್ ನರೈನ್, ಅಮಿತ್ ಮಿಶ್ರಾ, ವೇಗಿ ಭುವನೇಶ್ವರ್ ಕುಮಾರ್, ಕ್ರಿಸ್ ಮೋರಿಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com