ಕ್ರಿಕೆಟ್

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್

ಕೊಲಂಬೊ 2ನೇ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ಭಾರತ 622 ಡಿಕ್ಲೇರ್; ಶ್ರೀಲಂಕಾ 2 ವಿಕೆಟ್ ಗೆ 50 ರನ್
ಆರ್ ಅಶ್ವಿನ್
Published On :
ಕೊಲಂಬೊ: ಕೊಲಂಬೋದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ. 
ಕೊಲಂಬೊದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್ ಅನ್ನು 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾಗೆ ಆರ್ ಅಶ್ವಿನ್ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ತರಂಗರನ್ನು ಡಕ್ ಔಟ್ ಮಾಡಿದರು. ಇನ್ನು 25 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕರುಣರತ್ನೆ ಅವರ ವಿಕೆಟ್ ಕಿತ್ತರು. ಇನ್ನು ಮೆಂಡಿಸ್ 16 ಮತ್ತು ಚಂಢಿಮಲ್ 8 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಮೂರನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ. 
ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ 35 ಮತ್ತು ಕೆಎಲ್ ರಾಹುಲ್ 57 ರನ್ ಗಳಿಗೆ ಔಟಾದರೆ ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ ಗಳಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಪೂಜಾರ 133 ಮತ್ತು ಅಜಿಂಕ್ಯ ರಹಾನೆ 132 ರನ್ ಗಳನ್ನು ಸಿಡಿಸಿ ಔಟಾದರು. ಈ ಮಧ್ಯೆ ಆರ್ ಅಶ್ವಿನ್ 54 ರನ್ ಸಿಡಿಸಿದರೆ, ವೃದ್ಧಿಮಾನ್ ಸಹಾ 67 ರನ್ ಸಿಡಿಸಿ ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ನಿಂದಾಗಿ ತಂಡ 600ರ ಗಡಿ ದಾಟಲು ಸಾಧ್ಯವಾಯಿತು. 
ಶ್ರೀಲಂಕಾ ಪರ ಹೆರತ್ 4, ಪುಷ್ಪಕುಮಾರ 2 ಮತ್ತು ಕರುಣರತ್ನೆ ಹಾಗೂ ಪೆರೇರಾ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.