ಕೆಲ ಪಂದ್ಯ ಸೋತರು ಸರಿ, ತಂಡದಲ್ಲಿ ಕೆಲ ಪ್ರಯೋಗಗಳನ್ನು ಮಾಡಲು ಸಿದ್ಧ: ವಿರಾಟ್ ಕೊಹ್ಲಿ

Published On :
ಡ್ಯಾಂಬುಲ್ಲಾ(ಶ್ರೀಲಂಕಾ): ಟೀಂ ಇಂಡಿಯಾ ಅದಾಗಲೇ 2019ರ ವಿಶ್ವಕಪ್ ಗೆ ತಯಾರಿ ನಡೆಸಿದ್ದು ಈ ಎರಡು ವರ್ಷಗಳಲ್ಲಿ ಆಟಗಾರರ ಕೆಲವೊಂದು ಜವಾಬ್ದಾರಿಗಳನ್ನು ನೀಡಿ ಪ್ರಯೋಗಗಳನ್ನು ನಡೆಸಬೇಕಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ತಂಡದ ಆಟಗಾರರಿಗೆ ನಿರ್ದಿಷ್ಟ ಜವಾಬ್ದಾರಿ ನೀಡಿ ಆ ಸವಾಲುಗಳನ್ನು ಅವರು ಅರ್ಥ ಮಾಡಿಕೊಂಡು ತಂಡಕ್ಕೆ ಏನು ಬೇಕು ಎಂದು ತಿಳಿದುಕೊಳ್ಳುವಂತೆ ಮಾಡಬೇಕು. ಇದಕ್ಕೆ ಕೆಲವೊಂದು ಪಂದ್ಯಗಳನ್ನು ಕೈಚೆಲ್ಲಿದರು ಪರವಾಗಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಐದು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತಿದ್ದು ಈ ಪಂದ್ಯಗಳಲ್ಲಿ ಪ್ರಯೋಗಗಳನ್ನು ಮಾಡಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ.
ಪಂದ್ಯಗಳನ್ನು ಸೋತಾಗ ಟೀಕೆಗಳು ಬರುವುದು ಸಾಮಾನ್ಯ. ತಂಡದಲ್ಲಿ ಇಂತಹ ಬದಲಾವಣೆ ಮಾಡಿದ್ದರೆ ಸರಿಯಾಗುತ್ತಿತ್ತು ಎಂದೆಲ್ಲಾ ಹೇಳುತ್ತಾರೆ ಹೀಗಾಗಿ ಇಂತಹ ಸಂದರ್ಭಗಳನ್ನು ಎದುರಿಸುವ ಸಲುವಾಗಿ ಕೆಲವೊಂದು ಪ್ರಯೋಗಳನ್ನು ಮಾಡಬೇಕಿದೆ. ಅದಕ್ಕಾಗಿ ಎಂತಹ ಅಪಾಯವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಕೊಹ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


