ನವದೆಹಲಿ: ಏಕದಿನ ಪಂದ್ಯಗಳಲ್ಲಿ ಚೆಂಡನ್ನು ಬಾರಿಸುವಂತೆ ಟೆಸ್ಟ್ ಪಂದ್ಯಗಳಲ್ಲಿ ಬಾರಿಸುತ್ತಿದ್ದೇನೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಐದು ದಿನಗಳ ಟೆಸ್ಟ್ ಪಂದ್ಯಕ್ಕೂ ಏಕದಿನ ಪಂದ್ಯಕ್ಕೂ ಇರುವ ವ್ಯತ್ಯಾಸವನ್ನು ಮರೆತ್ತಿದ್ದೇನೆ. ಏಕದಿನದಲ್ಲಿ ಆಡುವಂತೆ ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿದ್ದೇನೆ ಎಂದು ಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಳಿಕ ಹೇಳಿದ್ದಾರೆ.
ಟೆಸ್ಟ್ ನಲ್ಲಿ ಆರು ದ್ವಿಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧದ ದೆಹಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ 25 ಬೌಂಡರಿ ಸೇರಿದಂತೆ 287 ಎಸೆತಗಳಲ್ಲಿ ಭರ್ಜರಿ 243 ರನ್ ಗಳನ್ನು ಸಿಡಿಸಿದ್ದರು.
ಏಕದಿನ ಪಂದ್ಯದಲ್ಲಿ ಆಡುವಂತೆ ವೇಗವಾಗಿ ಟೆಸ್ಟ್ ಕ್ರಿಕೆಟ್ ನಲ್ಲೂ ಆಡಬಲ್ಲೆ. ಈ ಹಿಂದೆ ನಾನು ಈ ರೀತಿ ಆಡಲು ಹಿಂಜರಿಯುತ್ತಿದ್ದೆ. ಆದರೆ ಇಗ ಟೆಸ್ಟ್ ಪಂದ್ಯಗಳಲ್ಲು ವೇಗವಾಗಿ ಆಡುವ ಮೂಲಕ ಪಂದ್ಯಕ್ಕೆ ಚುರುಕು ನೀಡಬಹುದು ಎಂಬುದು ಮನವರಿಕೆಯಾಗಿದೆ ಎಂದರು.