ಕ್ರಿಕೆಟ್ ದುರಂತ: ಉದ್ರಿಕ್ತ ಬ್ಯಾಟ್ಸ್‌ಮನ್ ಕಿತ್ತೆಸೆದ ಸ್ಟಂಪ್ ಬಡಿದು ಆಟಗಾರ ಸಾವು

ಔಟ್ ಆಗಿದ್ದರಿಂದ ಕುಪಿತಗೊಂಡ ಬ್ಯಾಟ್ಸ್‌ಮನ್ ಕಿತ್ತೆಸೆದ ಸ್ಟಂಪ್ ಬಡಿದು ಕ್ಷೇತ್ರರಕ್ಷಣೆ ಮಾಡುತ್ತಿದ್ದ ಆಟಗಾರ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ....
ಸ್ಟಂಪ್ಸ್
ಸ್ಟಂಪ್ಸ್
ಢಾಕಾ: ಔಟ್ ಆಗಿದ್ದರಿಂದ ಕುಪಿತಗೊಂಡ ಬ್ಯಾಟ್ಸ್‌ಮನ್ ಕಿತ್ತೆಸೆದ ಸ್ಟಂಪ್ ಬಡಿದು ಕ್ಷೇತ್ರರಕ್ಷಣೆ ಮಾಡುತ್ತಿದ್ದ ಆಟಗಾರ ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. 
ಬಾಂಗ್ಲಾದೇಶದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ಆಟಗಾರನನ್ನು 14 ವರ್ಷದ ಫೈಸಲ್ ಹುಸೇನ್ ಎಂದು ಗುರುತಿಸಲಾಗಿದೆ. 
ಚಿತ್ತಗಾಂಗ್ ನಲ್ಲಿ ನೆರೆಹೊರೆಯ ಸ್ನೇಹಿತರು ಒಟ್ಟಾಗಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬ್ಯಾಟ್ಸ್ ಮನ್ ಬೌಲ್ಡ್ ಆಗಿದ್ದಾನೆ. ಇದರಿಂದ ಕುಪಿತಗೊಂಡ ಬ್ಯಾಟ್ಸ್‌ಮನ್ ವಿಕೆಟ್ ಕಿತ್ತೆಸೆದಿದ್ದಾನೆ. ಫೈಸಲ್ ಹುಸೇನ್ ಸ್ಟಂಪ್ ಪಕ್ಕದಲ್ಲೇ ಕ್ಷೇತ್ರರಕ್ಷಣೆ ಮಾಡುತ್ತಿದ್ದಾಗ ತಲೆಗೆ ವಿಕೆಟ್ ಬಡಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಹುಸೇನ್ ನನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ. 
ಹುಸೇನ್ ರನ್ನು ಕೊಲ್ಲಬೇಕು ಎನ್ನುವ ಉದ್ದೇಶ ಇರಲಿಲ್ಲ ಹೀಗಾಗಿ ಅನುದ್ದೇಶಿತ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com