ಸುಪ್ರೀಂಕೋರ್ಟ್‌ಗೆ ಬೇಷರತ್ ಕ್ಷಮೆ ಕೇಳಿದ ಅನುರಾಗ್ ಠಾಕೂರ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸುಳ್ಳು ಸಾಕ್ಷ್ಯ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಎದುರು ಬೇಷರತ್ ಕ್ಷಮೆ...
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Updated on: 
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಸುಳ್ಳು ಸಾಕ್ಷ್ಯ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಎದುರು ಬೇಷರತ್ ಕ್ಷಮೆ ಯಾಚಿಸಿದ್ದಾರೆ. 
ಲೋಧಾ ಸಮಿತಿ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ವಿಳಂಬ ಧೋರಣೆ ಹಾಗೂ ಐಸಿಸಿಯಿಂದ ಪತ್ರ ಕೇಳಿದ ವಿಚಾರವಾಗಿ ತಪ್ಪು ಮಾಹಿತಿಯ ಅಫಿಡವಿಟ್ ಸಲ್ಲಿಸಿದ ಆರೋಪ ಹೊರಿಸಿ ಸುಳ್ಳು ಸಾಕ್ಷ್ಯದ ಪ್ರಕರ ದಾಖಲಿಸಲಾಗಿತ್ತು. 
ಅನುರಾಕ್ ಠಾಕೂರ್ ತಮ್ಮ ವಕೀಲರ ಮೂಲಕ ಫೆಬ್ರವರಿ 10ರಂದು ಸುಪ್ರೀಂಕೋರ್ಟ್ ಗೆ ಅಫಿಡವಿಡ್ ಸಲ್ಲಿಸಿದ್ದು ಅದರಲ್ಲಿ ಕೋರ್ಟ್ ಆದೇಶವನ್ನು ಧಿಕ್ಕರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಸುಪ್ರೀಂ ಕೋರ್ಟ್ ಭಾವಿಸಿದ್ದರೆ ಈ ಕುರಿತಾಗಿ ಬೇಷರತ್ ಹಾಗೂ ವಿನಮ್ರನಾಗಿ ಕ್ಷಮೆ ಕೇಳುತ್ತಿದ್ದೇನೆ. ಸುಪ್ರೀಂಕೋರ್ಟ್ ನ ಆದೇಶಕ್ಕೆ ಅಗೌರವ ತೋರುವ ಯಾವ ಉದ್ದೇಶವೂ ತಮಗಿರಲಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com