ಪ್ರತಿ ವರ್ಷ ಏಪ್ರಿಲ್ 1ಕ್ಕೆ ಟೆಸ್ಟ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ತಂಡಕ್ಕೆ ಐಸಿಸಿಯಿಂದ ಹಣ ಸಂದಾಯವಾಗಲಿದೆ. ಸದ್ಯ ಭಾರತ 121 ಅಂಕ ಸಂಪಾದಿಸಿ ನಂಬರ್ 1 ಸ್ಥಾನದಲ್ಲಿದೆ. 109 ಅಂಕ ಹೊಂದಿರುವ ಆಸ್ಟ್ರೇಲಿಯಾ ನಂ.2 ಸ್ಥಾನದಲ್ಲಿದೆ. ಏಪ್ರಿಲ್ 1ರ ಹೊತ್ತಿಗೆ ಯಾವ ತಂಡ ನಂ.1 ಸ್ಥಾನದಲ್ಲಿ ಉಳಿಯುತ್ತದೆಯೋ ಅದಕ್ಕೆ ಈ ಮೊತ್ತ ಸಂದಾಯವಾಗುತ್ತದೆ.