ಪುಮಾ ಜತೆ ವಿರಾಟ್ ಕೊಹ್ಲಿ 110 ಕೋಟಿ ಜಾಹಿರಾತು ಒಪ್ಪಂದ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಒಂದೇ ಸಂಸ್ಥೆ ಪುಮಾ ಜತೆ 110 ಕೋಟಿ ರುಪಾಯಿ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಒಂದೇ ಸಂಸ್ಥೆ ಪುಮಾ ಜತೆ 110 ಕೋಟಿ ರುಪಾಯಿ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದಾರೆ. 
ಕ್ರೀಡಾ ವಸ್ತುಗಳ ಉತ್ಪಾದಕ ಸಂಸ್ಥೆ ಪುಣೆ ಜತೆ ವಿರಾಟ್ ಕೊಹ್ಲಿ ಎಂಟು ವರ್ಷಕ್ಕೆ 110 ಕೋಟಿ ರುಪಾಯಿ ಜಾಹಿರಾತು ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಪುಮಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೊಹ್ಲಿ ವಿಶ್ವದ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್, ಅಸಫ ಪೊವೆಲ್ ಮತ್ತು ಫುಟ್ಬಾಲ್ ಆಟಗಾರ ಥಿಯರಿ ಹೆನ್ರಿರಂತೆ ಜಾಗತಿಕ ರಾಯಭಾರಿಯಾಗಿದ್ದಾರೆ. 
ಜರ್ಮನಿ ಕಂಪನಿ ಪುಮಾ ಜತೆ ಕ್ರೀಡಾ ವಸ್ತುಗಳ ಜಾಹಿರಾತಿನಲ್ಲಿ ಪಾಲ್ಗೊಳ್ಳಲಿದ್ದು, ವಾರ್ಷಿಕ 12 ರಿಂದ 14 ಕೋಟಿ ರುಪಾಯಿ ವಿರಾಟ್ ಕೊಹ್ಲಿಯ ಕೈ ಸೇರಲಿದೆ. 
ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಸಹ 100 ಕೋಟಿ ಕ್ಲಬ್ ನಲ್ಲಿದ್ದಾರೆ. 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಸಚಿನ್ 50 ಬ್ರಾಂಡ್ ಜತೆಗೆ ಸರಿ ಸುಮಾರು 500 ಕೋಟಿ ಒಪ್ಪಂದವನ್ನು ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com