ಅಭ್ಯಾಸ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಇಲವೆನ್ ತಂಡಕ್ಕೆ ಜಯ

ಭಾರಿ ನಿರೀಕ್ಷೆ ಹುಟ್ಟಿಸಿದ್ದ ಇಂಗ್ಲೆಂಡ್ ಇಲವೆನ್ ತಂಡದ ವಿರುದ್ಧದ ಏಕದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಸೋಲನ್ನು ಅನುಭವಿಸಿದೆ.
ಚಿತ್ರಕಪೆ: ಕ್ರಿಕ್ ಇನ್ಫೋ
ಚಿತ್ರಕಪೆ: ಕ್ರಿಕ್ ಇನ್ಫೋ
Updated on: 

ಮುಂಬೈ: ಭಾರತ ತಂಡದ ಯಶಸ್ವೀ ನಾಯಕ ಎಂ ಎಸ್ ಧೋನಿ ಅವರ ನಾಯಕತ್ವ ಕೊನೆಯ ಏಕದಿನ ಪಂದ್ಯ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಇಂಗ್ಲೆಂಡ್ ಇಲವೆನ್ ತಂಡದ ವಿರುದ್ಧದ ಏಕದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಸೋಲನ್ನು ಅನುಭವಿಸಿದೆ.

ಭಾರತ ನೀಡಿದ್ದ 305 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು ಮುಟ್ಟುವ ಮೂಲಕ ಏಕೈಕ ಅಭ್ಯಾಸ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ಸಾಂಘಿಕ ಹೋರಾಟ ಪ್ರದರ್ಶಿಸಿದ ಇಂಗ್ಲೆಂಡ್ ತಂಡ 48.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 307 ರನ್ ಗಳಿಸುವ ಮೂಲಕ  ಭಾರತ ಎ ತಂಡದ ವಿರುದ್ಧ 3 ವಿಕೆಟ್ ಗಳ ವಿರೋಚಿತ ಜಯಸಾಧಿಸಿತು.

ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಇಲೆವನ್ ತಂಡ ಫೀಲ್ಡಿಂಗ್ ಆರಿಸಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಧೋನಿ ಪಡೆ ಆರಂಭಿಕ ಆಘಾತದ ಹೊರತಾಗಿಯೂ ಇಂಗ್ಲೆಂಡ್ ತಂಡದ ಎದುರು ಅಂಬಾಟಿ ರಾಯುಡು ಶತಕ (100 ರನ್), ನಾಯಕರಾಗಿ  ಕೊನೆಯ ಪಂದ್ಯವನ್ನಾಡುತ್ತಿರುವ ಧೋನಿ (68), ಶಿಖರ್ ಧವನ್ (63 ರನ್) ಹಾಗೂ ಸುಧೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿರುವ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ (56 ರನ್) ಅವರ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 304 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್  ಪರ ವಿಲ್ಲೆ ಮತ್ತು ಜೆಟಿ ಬಾಲ್ ತಲಾ 2 ವಿಕೆಟ್ ಕಬಳಿಸಿದರು.

ಭಾರತ ನೀಡಿದ 305 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ಇಲೆವನ್ ತಂಡಕ್ಕೆ ಜೇಸನ್ ರಾಯ್ (62 ರನ್) ಹಾಗೂ ಹೇಲ್ಸ್ (40 ರನ್ )ಉತ್ತಮ ಆರಂಭ ನೀಡಿದರು. 95 ರನ್ ಗಳ ಜೊತೆಯಾಟವಾಡಿದ ಈ ಜೋಡಿ ಇನ್ನಿಂಗ್ಸ್ ನ 15 ಓವರ್ ನಲ್ಲಿ ಕುಲ್ ದೀಪ್ ಯಾದವ್  ಬೌಲಿಂಗ್ ನಲ್ಲಿ ಬೇರ್ಪಟಿತು. ಕುಲ್ ದೀಪ್ ಎಸೆದ ಎಸೆತದಲ್ಲಿ ಭಾರಿ ಹೊಡೆತ ಭಾರಿಸಲು ಮುಂದಾದ ಹೇಲ್ಸ್ ಭಾರತದ ಸ್ಯಾಮ್ಸನ್ ಅವರಿಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು. ಬಳಿಕ ರಾಯ್ ಜೊತೆ ಗೂಡಿದ ಬಿಲ್ಲಿಂಗ್ಸ್ ಕೂಡ ಇಂಗ್ಲೆಂಡ್ ಪರ ಉತ್ತಮ ಇನ್ನಿಂಗ್ಸ್ ಕಟ್ಟಲು  ಮುಂದಾದರು. ಆದರೆ ಈ ಹಂತದಲ್ಲಿ ಅರ್ಧಶತಕ ದಾಟಿ ಶತಕದತ್ತ ಮುನ್ನುಗ್ಗುತ್ತಿದ್ದ ಜೆಸನ್ ರಾಯ್ ಭಾರಿ ಹೊಡೆತಕ್ಕೆ ಮುಂದಾಗಿ ಮತ್ತದೇ ಕುಲ್ ದೀಪ್ ಬೌಲಿಂಗ್ ನಲ್ಲಿ ಶರ್ಮಾ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಬಂದ ಮಾರ್ಗನ್ ಕೇವಲ 3 ರನ್ ಗೆ ಚಾಹಲ್ ಬೌಲಿಂಗ್ ನಲ್ಲಿ ಔಟ್ ಆದರೆ, ಬಿಲ್ಲಿಂಗ್ಸ್ ಜೊತೆ ಗೂಡಿದ ಬಟ್ಲರ್ ಉತ್ತಮ ಜೊತೆಯಾಟವಾಡಿದರು. ಬಿಲ್ಲಿಂಗ್ಸ್ ಮತ್ತು ಬಟ್ಲರ್ ಭಾರತೀಯ ಬೌಲರ್ ಗಳನ್ನು ಉತ್ತಮವಾಗಿ ಎದುರಿಸಿದರು. ಈ ಹಂತದಲ್ಲಿ ಬಿಲ್ಲಿಂಗ್ಸ್ ಅರ್ಧಶತಕ ಸಿಡಿಸಿ  ಶತಕದತ್ತ ಮುನ್ನುಗ್ಗಿದರೆ 46 ರನ್ ಗಳಿಸಿದ್ದ ಬಟ್ಲರ್ ಕುಲ್ ದೀಪ್ ಬೌಲಿಂಗ್ ನಲ್ಲಿ ಶರ್ಮಾ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ ಬಂದ ಅಲಿ ಶೂನ್ಯಕ್ಕೆ ನಿರ್ಗಮಿಸಿದರೆ, ಬಳಿಕ ಬಂದ ಡಾವ್ಸನ್ 41 ರನ್ ಗಳಿಸಿ ಇಂಗ್ಲೆಂಡ್ ಗೆಲುವಿನ ಸನಿಹದಲ್ಲಿದ್ದಾಗ  ಮತ್ತದೇ ಕುಲ್ ದೀಪ್ ಯಾದವ್  ಬೌಲಿಂಗ್ ಔಟ್ ಆದರು. ಇದೇ ವೇಳೆ 93 ರನ್ ಗಳಿಸಿ ಶತಕದಂಚಿನಲ್ಲಿದ್ದ ಬಿಲ್ಲಿಂಗ್ಸ್ ಕೂಡ 93 ರನ್ ಗಳಿಸಿ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವೋಕ್ಸ್ (11 ರನ್) ಮತ್ತು ರಷೀದ್ (6 ರನ್)ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತದ ಪರ ಉದಯೋನ್ಮುಖ ಆಟಗಾರ ಕುಲ್ ದೀಪ್ ಯಾದವ್ 5 ವಿಕೆಟ್ ಗಳಿಸಿದರೆ, ತಲಾ 1 ವಿಕೆಟ್ ಪಡೆದ ಚಾಹಲ್ ಮತ್ತು ಪಾಂಡ್ಯಾ ಯಶಸ್ವೀ ಬೌಲರ್ ಗಳೆನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com