ದುಬಾರಿ ಬೆಲೆಯ ಟಿಕೆಟ್ ಬೇಗನೆ ಖಾಲಿಯಾದ ಹಿನ್ನೆಲೆಯಲ್ಲಿ 500 ರು ಮತ್ತು 1250 ರುಪಾಯಿ ಮೌಲ್ಯದ ಟಿಕೆಟ್ ಗೆ ಬಾರಿ ಭಾರಿ ಬೇಡಿಕೆ ಕಂಡು ಬಂತು, ಬಿರುಬಿಸಿಲನ್ನೂ ಲೆಕ್ಕಿಸದೆ ಅಭಿಮಾನಿಗಳು 1 ಕಿಮೀ ಉದ್ದರ ಸರತಿ ಸಾಲಿನಲ್ಲಿ ನಿಂತು ಸಂಜೆವರೆಗೆ ಟಿಕೆಟ್ ಗೆ ಕಾದರು. ಕೆಲವರಿಗೆ ಟಿಕೆಟ್ ಸಿಕ್ಕಿದರೆ, ಎಂಟು ಗಂಟೆಗೂ ಅಧಿಕ ಹೊತ್ತು ಕಾದ ಹಲವರು ಟಿಕೆಟ್ ಸೋಲ್ಡ್ ಔಟ್ ಆಗಿದ್ದರಿಂದ ಬರಿಗೈಲಿ ವಾಪಾಸಾಗಿ ನಿರಾಸೆ ಅನುಭವಿಸಿದರು. ಇನ್ನೊಂದೆಡೆ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.