ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾಧನೆಗಳು ಅಪಾರ. ಅಂತಹ ಸಚಿನ್ ಅವರ ಸಾಧನೆಯೊಂದನ್ನು ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಮುರಿದಿದ್ದಾರೆ.
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ರಾಜ್ 69 ರನ್ ಪೇರಿಸಿದ್ದು ಆ ಮೂಲಕ 6 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿ ಮಿಥಾಲಿ ರಾಜ್ ಗೆ ಸಲ್ಲುತ್ತದೆ.
ಮಿಥಾಲಿ ರಾಜ್ 164ನೇ ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿದ್ದು, ಸಚಿನ್ ಅವರು 6 ಸಾವಿರ ಗಡಿ ದಾಟಲು 170 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮಿಥಾಲಿ ರಾಜ್ ಅವರ ವಿಶ್ವದಾಖಲೆಯನ್ನು ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಶಂಸಿಸಿದ್ದಾರೆ. ಶುಭಾಶಯ ಮಿಥಾಲಿ ರಾಜ್, ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಸಾಧನೆಯನ್ನು ಮಿಥಾಲಿ ರಾಜ್ ಮಾಡಿದ್ದಾರೆ ಎಂದು ಟ್ವೀಟಿಸಿದ್ದಾರೆ.
Congratulations, @M_Raj03! Becoming the highest run scorer in Women's ODIs is a huge achievement. Also, superb knock today!