ಲಂಡನ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಗೆಲ್ಲಲು 229 ರನ್‍ಗಳ ಗುರಿ ನೀಡಿದೆ.
ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ಕಳೆದುಕೊಂಡು 228 ರನ್‍ಗಳನ್ನು ಪೇರಿಸಿದೆ.
ಇಂಗ್ಲೆಂಡ್ ಪರ ಲೌರೆನ್ ವಿನ್ ಫೀಲ್ಡ್ 24, ಟ್ಯಾಮಿ ಬೀಮೌಂಟ್ 23, ಸಾರಾ ಟೇಲರ್ 45, ಹೀದರ್ ನೈಟ್ 1, ನಟಾಲಿ ಸ್ಕೀವರ್ 51, ಕ್ಯಾಥರೀನ್ ಬ್ರಂಟ್ 34, ಜೆನ್ನಿ ಗುನ್ ಅಜೇಯ 25 ಮತ್ತು ಲೌರಾ ಮಾರ್ಷ್ 14 ರನ್ ಗಳಿಸಿದ್ದಾರೆ.
ಭಾರತ ಪರ ಜೂಲನ್ ಗೋಸ್ವಾಮಿ 3, ಪೂನಂ ಯಾದವ್ 2 ಮತ್ತು ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದಿದ್ದಾರೆ.