ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪುತ್ರನ ಜತೆ ಚೆಸ್ ಆಡುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಧರ್ಮಾಂಧರ ಕೆಂಗಣ್ಣಿಗೆ ಗುರಿಯಾಗಿದ್ದರು.
ಚೆಸ್ ಆಡುವ ಮೂಲಕ ಇಸ್ಲಾಂ ಧರ್ಮಕ್ಕೆ ದ್ರೋಹ ಬಗೆದಿದ್ದಿರಾ ಎಂದು ಹಲವು ಟೀಕೆಗಳನ್ನು ಮಾಡಿದ್ದರು. ಇದಕ್ಕೆ ಮೊಹಮ್ಮದ್ ಕೈಫ್ ದಿಟ್ಟ ತಿರುಗೇಟು ನೀಡಿದ್ದಾರೆ.
ಚೆಸ್ ಆಟ ಇಸ್ಲಾಂ ವಿರೋಧಿ ಎಂದು ಟೀಕಿಸಿದ್ದ ಟೀಕಾಕಾರರಿಗೆ ಕೈಫ್ ಚೆಸ್ ಭಾರತದ್ದೇ ಆಟ. ಇದನ್ನು ಎಲ್ಲರೂ ಆಡಬೇಕೆಂದಿದ್ದಾರೆ. ಜಾತಿ ಮತ-ಧರ್ಮಗಳ ಕಟ್ಟುಪಾಡುಗಳನ್ನು ಬೇಧಿಸಲು ಕ್ರೀಡೆ ಉತ್ತಮ ಮಾರ್ಗ. ಎಲ್ಲರೂ ಹೆಚ್ಚು ಆಟಗಳನ್ನು ಆಡಬೇಕು. ಕ್ರೀಡೆ ಧರ್ಮವನ್ನು ಮೀರಿದ್ದು ಎಂದು ಟ್ವೀಟಿಸಿದ್ದಾರೆ.