ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಡಕ್‌ವರ್ಥ್ ಲೂಯಿಸ್ ನಿಯಮದಡಿ ಪಾಕಿಸ್ತಾನ 19 ರನ್ ಗಳ ಜಯ ಸಾಧಿಸಿದೆ.
ಬರ್ಮಿಂಗ್ ಹ್ಯಾಮ್ ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 219 ರನ್ ಮಾತ್ರ ಗಳಿಸಿತು.
ಆಫ್ರಿಕಾ ನೀಡಿದ ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ 27 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯ ರದ್ದು ಮಾಡಲಾಯಿತು. ನಂತರ ಡಕ್‌ವರ್ಥ್ ಲೂಯಿಸ್ ನಿಯಮದಡಿ ಪಾಕಿಸ್ತಾನಕ್ಕೆ 27 ಓವರ್ ನಲ್ಲಿ 101 ರನ್ ಟಾರ್ಗೆಟ್ ನೀಡಲಾಯಿತು. ಮಳೆಗೂ ಮುನ್ನ ಪಾಕಿಸ್ತಾನ 119 ರನ್ ಗಳಿಸಿದ್ದರಿಂದ 19 ರನ್ ಮುನ್ನಡೆ ಪಡೆದಿತ್ತು. ನಂತರ ಪಾಕಿಸ್ತಾನ 19 ರನ್ ಜಯ ಎಂದು ಐಸಿಸಿ ಘೋಷಿಸಿತು.
ದಕ್ಷಿಣ ಆಫ್ರಿಕಾ ಪರ ಡಿ ಕಾಕ್ 33, ಹಾಸೀಂ ಆಮ್ಲಾ 16, ಡುಪ್ಲೇಸಿಸ್ 26, ಮಿಲ್ಲರ್ ಅಜೇಯ 75 ರನ್ ಗಳಿಸಿದ್ದಾರೆ.
ಪಾಕಿಸ್ತಾನ ಪರ ಹಸನ್ ಅಲಿ 3, ಜುನೈದ್ ಖಾನ್, ಇಮಾದ್ ವಾಸೀಂ ತಲಾ 2 ವಿಕೆಟ್ ಪಡೆದಿದ್ದಾರೆ.