ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಜಾದವ್ ಜಾದೂ: ಬೃಹತ್ ಮೊತ್ತ ಪೇರಿಸುವಲ್ಲಿ ಬಾಂಗ್ಲಾಗೆ ತಡೆ ಹಾಕಿದ ಆಲ್ ರೌಂಡರ್!

ಬಾಂಗ್ಲಾದೇಶ ವಿರುದ್ಧದ ಗೆಲುವಿನಲ್ಲಿ ಭಾರತದ ಪ್ರಮುಖ ಆಲ್ ರೌಂಡರ್ ಕೇದಾರ್ ಜಾದವ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಪಾತ್ರವಿದೆ.
ಲಂಡನ್: ಬಾಂಗ್ಲಾದೇಶ ವಿರುದ್ಧದ ಗೆಲುವಿನಲ್ಲಿ ಭಾರತದ ಪ್ರಮುಖ ಆಲ್ ರೌಂಡರ್ ಕೇದಾರ್ ಜಾದವ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ಪಾತ್ರವಿದೆ.
ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ತಂಡ ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸುತ್ತಿತ್ತು. ಇನ್ನಿಂಗ್ಸ್ ನ 25 ನೇ ಓವರ್ ವರೆಗೂ ಬಾಂಗ್ಲಾದೇಶ 5.68 ಸರಾಸರಿಯಲ್ಲಿ ಕೇವಲ 2 ವಿಕೆಟ್ ಗಳನ್ನುಕೆಳೆದುಕೊಂಡು ಭರ್ಜರಿ 142  ರನ್ ಕಲೆ ಹಾಕಿತ್ತು. ಈ ಹಂತದಲ್ಲಿ ಬೌಲಿಂಗ್ ನಲ್ಲಿ ಬದಲಾವಣೆ ತಂದ ನಾಯಕ ಕೊಹ್ಲಿ ಜಾದವ್ ಕೈಗೆ ಚೆಂಡನ್ನಿತ್ತರು. ಜಾದವ್ ಕೈಗೆ ಬಾಲ್ ಬಂದಿದ್ದೇ ತಡ ಬಾಂಗ್ಲಾದೇಶ ರನ್ ವೇಗಕ್ಕೆ ಕಡಿವಾಣ ಬಿತ್ತು. 1 ರಿಂದ 25ನೇ ಓವರ್ ವರೆಗೂ ಬಾಂಗ್ಲಾದೇಶ 5.68 ಸರಾಸರಿಯಲ್ಲಿ ರನ್  ಗಳಿಸಿದ್ದರೆ, 25ನೇ ಓವರ್ ನಿಂದ 50ನೇ ಓವರ್ ವರೆಗೂ ಬಾಂಗ್ಲಾದೇಶ ತಂಡ ಕೇವಲ 3.73ರ ಸರಾಸರಿಯಲ್ಲಿ 122 ರನ್ ಗಳಿಕೆ ಮಾಡಿತ್ತು.
ಅಂತಿಮ ಹಂತದ ಓವರ್ ಗಳಲ್ಲಿಯಂತೂ ಬಾಂಗ್ಲಾದೇಶ ರನ್ ಗಳಿಸಲು ಪರದಾಡಿದ್ದಂತೂ ಸತ್ಯ. ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶ ಕವೇಲ 6 ರನ್ ಗಳಿಸಿದ್ದು ಇದಕ್ಕೆ ಸ್ಪಷ್ಟ ನಿದರ್ಶನ. ಒಂದು ಹಂತದಲ್ಲಿ ಬಾಂಗ್ಲಾದೇಶ 300ರ ಗಡಿ ದಾಟಬಹುದು ಎಂದು ಎಣಿಸಲಾಗಿತ್ತು. ಆದರೆ  ಜಾದವ್ ಜಾದೂ ಭಾರತಕ್ಕೆ ಆನೆ ಬಲ ತಂದಿತ್ತು. ಇಂದಿನ ಪಂದ್ಯದಲ್ಲಿ ಕೇದಾರ್ ಜಾದವ್ ಅತ್ಯಂತ ಕಡಿಮೆ ರನ್ ನೀಡಿದ (ಮೋಸ್ಟ್ ಎಕನಾಮಿಕ್) ಬೌಲರ್ ಎಂಬ ಕೀರ್ತಿಗೂ ಭಾಜನರಾದರು. 

Related Stories

No stories found.

Advertisement

X
Kannada Prabha
www.kannadaprabha.com