6 ತಿಂಗಳ ಹಿಂದೆಯೇ ಮಾತು ಬಿಟ್ಟಿದ್ದ ಕೊಹ್ಲಿ, ಕುಂಬ್ಳೆ: ಬಿಸಿಸಿಐ ಮೂಲಗಳು!

ಟೀಂ ಇಂಡಿಯಾದಲ್ಲಿ ಕಳೆದ 6 ತಿಂಗಳಿಗೂ ಮೊದಲೇ ಎಲ್ಲವೂ ಸರಿ ಇರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, 6 ತಿಂಗಳ ಹಿಂದಿನಿಂದಲೇ ನಾಯಕ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಪರಸ್ಪರ ಮಾತು ಬಿಟ್ಟಿದ್ದರು ಎಂಬ ಮಾಹಿತಿಯನ್ನು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಟೀಂ ಇಂಡಿಯಾದಲ್ಲಿ ಕಳೆದ 6 ತಿಂಗಳಿಗೂ ಮೊದಲೇ ಎಲ್ಲವೂ ಸರಿ ಇರಲಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, 6 ತಿಂಗಳ ಹಿಂದಿನಿಂದಲೇ ನಾಯಕ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಪರಸ್ಪರ ಮಾತು ಬಿಟ್ಟಿದ್ದರು ಎಂಬ ಮಾಹಿತಿಯನ್ನು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮಾತುಕಥೆ ನಿಂತು 6 ತಿಂಗಳಾಗಿದ್ದು, ಇಬ್ಬರೂ ಪರಸ್ಪರ ಮುನಿಸಿಕೊಂಡಿದ್ದರು ಎಂದು ಹೇಳಿದ್ದಾರೆ. ಕ್ರಿಕೆಟ್‌ ಸಲಹಾ ಸಮಿತಿಯೊಂದಿಗೆ ನಡೆದ ಸಭೆ ವೇಳೆ ಈ ಸ್ಫೋಟಕ ಸತ್ಯ ಬೆಳಕಿಗೆ ಬಂದಿದ್ದು, ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಬಳಿಕ ಮೂರು ಮಹತ್ವದ ಸಭೆಗಳು ನಡೆದಿವೆ. ಮೊದಲು ಬಿಸಿಸಿಐ ಹಿರಿಯ ಅಧಿಕಾರಿಗಳು ಹಾಗೂ ಕ್ರಿಕೆಟ್‌ ಸಲಹಾ ಸಮಿತಿ, ಕುಂಬ್ಳೆಯೊಂದಿಗೆ ಚರ್ಚೆ ನಡೆಸಿದೆ. ಆನಂತರ ಕೊಹ್ಲಿಯನ್ನು ಭೇಟಿ ಮಾಡಿದೆ. 3ನೇ ಸಭೆಯಲ್ಲಿ ಕುಂಬ್ಳೆ ಹಾಗೂ ಕೊಹ್ಲಿ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿಸಿದಾಗ, ಇಬ್ಬರ ನಡುವೆ ಭಿನ್ನಾಭಿಪ್ರಾಯವಿರುವುದು ತಿಳಿದುಬಂದಿದೆ. ಈ ವೇಳೆ ಇಬ್ಬರೂ ಸುಮ್ಮನೇ ಕೂತಿದ್ದರೇ ಹೊರತು ಒಬ್ಬರನ್ನೊಬ್ಬರು ಮಾತನಾಡಿಸುತ್ತಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕುಂಬ್ಳೆ ಅನವಶ್ಯಕವಾಗಿ ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೊಹ್ಲಿಗೆ ಅನಿಸಿತ್ತು. ಪ್ರತಿಯೊಂದಕ್ಕೂ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದು ಕೊಹ್ಲಿ ಬೇಸರಗೊಂಡಿದ್ದರು' ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com