ಭಾರತ v ಆಸ್ಟ್ರೇಲಿಯಾ: ವಿರಾಟ್ ಕೋಹ್ಲಿ ಹೇಳಿಕೆ ಅಸಂಬದ್ಧ- ಸ್ಟೀವ್ ಸ್ಮಿತ್

ಡಿಆರ್ ಎಸ್ ಕೇಳುವ ವಿಚಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ತಮ್ಮ ವಿರುದ್ಧ ಮೋಸ ಮಾಡಿರುವ ಆರೋಪ ಮಾಡಿರುವುದಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್
ರಾಂಚಿ: ಡಿಆರ್ ಎಸ್ ಕೇಳುವ ವಿಚಾರದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ತಮ್ಮ ವಿರುದ್ಧ ಮೋಸ ಮಾಡಿರುವ ಆರೋಪ ಮಾಡಿರುವುದಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. 
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಮಾತನಾಡಿರುವ ಸ್ಟೀವ್ ಸ್ಮಿತ್, ವಿರಾಟ್ ಕೋಹ್ಲಿ ಹೇಳಿಕೆ ಸಂಪೂರ್ಣ ಅಸಂಬದ್ಧ ಎಂದಿದ್ದಾರೆ. ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಔಟ್ ಆದಾಗ ಸ್ಟೀವ್ ಸ್ಮಿತ್ ಡಿಆರ್ ಎಸ್ ಕೇಳಲುವುದಕ್ಕೆ ಡ್ರೆಸಿಂಗ್ ರೂಮ್ ನ ಬಾಲ್ಕನಿಯತ್ತ ಸಲಹೆಗಾಗಿ ಎದುರು ನೋಡುತ್ತಿದ್ದರು. ಮೂರನೇ ಟೆಸ್ಟ್ ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಟೀವ್ ಸ್ಮಿತ್, ಎದುರಾಳಿ ತಂಡದವರು ಸಂಪೂರ್ಣವಾಗಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ನಿಸ್ಸಂಶಯವಾಗಿ ಆಟದ ನಂತರ ಹೊರಬಂದೆ. ನಂತರ ನಾನು ತಪ್ಪು ಮಾಡಿದೆ, ಅದು ನನ್ನ ಕಡೆಯಿಂದಾದ ತಪ್ಪು ಎಂಬ ಹೇಳಿಕೆ ನೀಡಿದೆ ಎಂದಿದ್ದಾರೆ. ಡಿಆರ್ ಎಸ್ ಕುರಿತಾದ ಕೋಹ್ಲಿ ಅವರ ಹೇಳಿಕೆ ಸಂಪೂರ್ಣ ಅಸಂಬದ್ಧವಾಗಿದೆ ಎಂದು ಸ್ಮಿತ್ ಹೇಳಿಕೆ ನೀಡಿದ್ದು ಕೋಹ್ಲಿ ಆರೋಪವನ್ನು ತಳ್ಳಿಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com